ಬೆಳಗಾವಿ: ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸೌಥ್ ಇಂಡಿಯಾ ರಿಜನಲ್ ಕಾನ್ಫರೆನ್ಸ್ ಬೆಳಗಾವಿ ಜಿಲ್ಲೆ ಮೆಥೊಡಿಸ್ಟ್ ಎಜ್ಯುಕೇಶನ್ ಸೊಸೈಟಿ, ಬೆಳಗಾವಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಪ್ರಕಟಣೆ ನೀಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಶಿಕ್ಷಕರ ಹುದ್ದೆಗಳ ನೇಮಕಾತಿ ವಿವರ ಹೀಗಿದೆ: ವಿದ್ಯಾರ್ಹತೆ: ಪದವಿ ಮತ್ತು B.Ed ಮುಗಿಸಿರಬೇಕು ಅರ್ಜಿಶುಲ್ಕ: DD ಮೂಲಕ 3 ಸಾವಿರ ಪಾವತಿ ಇರುತ್ತದೆ ವಯೋಮಿತಿ: 18 ರಿಂದ 45 ವರ್ಷ ಆಯ್ಕೆ ವಿಧಾನ: ಲಿಖಿತ ಪರೀಕ್ಷೆ / ಸಂದರ್ಶನ ಇರುತ್ತದೆ
ಹುದ್ದೆಗಳ ಸಂಖ್ಯೆ : ಹಿಂದಿ ಭಾಷಾ ಶಿಕ್ಷಕರು: 1 ಸಹ ಶಿಕ್ಷಕರು- ಸಮಾಜ ವಿಜ್ಞಾ: 1 ಸಹ ಶಿಕ್ಷಕರು- ವಿಜ್ಞಾನ: 1 ದೈಹಿಕ ಶಿಕ್ಷಕರು: 1 ಒಟ್ಟು ಹುದ್ದೆಗಳು: 04
ವೇತನ ಶ್ರೇಣಿ: ಸಹ ಶಿಕ್ಷಕರು ವಿಜ್ಞಾನ (ಸಿ.ಬಿ.ಝಡ್ ): 33450-62600
ದೈಹಿಕ ಶಿಕ್ಷಕರು: 33450-62600
ಹಿಂದಿ ಭಾಷಾ ಶಿಕ್ಷಕರು: 33450-62600
ಸಹ ಶಿಕ್ಷಕರು ಸಮಾಜ ವಿಜ್ಞಾನ: 33450-62600
ಅರ್ಜಿ ಸಲ್ಲಿಸುವ ವಿಧಾನ: ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ, ಅಗತ್ಯವಿರುವ ವಿದ್ಯಾರ್ಹತೆಗಳು, ಕೆಲಸದ ಅನುಭವ ಮತ್ತು ಇತರ ಅಗತ್ಯ ದಾಖಲೆಗಳನ್ನು ಜೆರಾಕ್ಸ್ ಲಗತ್ತಿಸಿ ಮತ್ತು ಆಗಸ್ಟ್ 22, 2024 ರೊಳಗೆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ವಿಳಾಸಕ್ಕೆ ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿ.
ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಇವರ ಜ್ಞಾಪನ ಸಂಖ್ಯೆ ಜಿ5/ಶಾತಿಅ/ಹುತುಅ/ ಮೆ.ಎ.ಸೋ/70/ 926/2023-2024 ದಿನಾಂಕ 02-07-2024 ರ ಆದೇಶದನ್ವಯ ಈ ಕೆಳಕಂಡ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಸಹಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಸೌಥ್ ಇಂಡಿಯಾ ರಿಜನಲ್ ಕಾನ್ಸರೆನ್ಸ್ ಬೆಳಗಾವಿ ಜಿಲ್ಲೆ – ಮೆಥೋಡಿಸ್ಟ್ ಎಜ್ಯುಕೇಶನ್ ಸೊಸೈಟಿ, ಬೆಳಗಾವಿ ಸಂಸ್ಥೆಯು ಜಾಹೀರಾತು ಪ್ರಕಟಣೆ ಮಾಹಿತಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6362702540, 9986017868 ಮತ್ತು 9845426685
ಅಭ್ಯರ್ಥಿಗಳು ದೃಢೀಕೃತ ದಾಖಲೆಗಳನ್ನೊಳಗೊಂಡ ಪೂರ್ಣ ಅರ್ಜಿಯನ್ನು ರೂ. 3000/- ಗಳ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಂಬಂಧಿಸಿದ ಪ್ರಾಚಾರ್ಯರು, ಶರ್ಮನ್ ಕನ್ನಡ ಪ್ರೌಢ ಶಾಲೆ ಮೆಥೋಡಿಸ್ಟ್ ಚರ್ಚ್ ಕಂಪೌಂಡ್, ಬೆಳಗಾವಿ ಹಾಗೂ ಪ್ರಾಚಾರ್ಯರು, ವನಿತಾ ಕನ್ನಡ ಮತ್ತು ಮರಾಠಿ ಪ್ರೌಢಶಾಲೆ, ಕ್ಯಾಂಪ್, ಬೆಳಗಾವಿ ಇವರ ಹೆಸರಿನಲ್ಲಿ ಪಡೆದು ನೋಂದಾಯಿತ ಅಂಚೆ ಮೂಲಕ / ಖುದ್ದಾಗಿ ದಿನಾಂಕ: 22/08/2024 ರ ಸಂಜೆ 05-00 ಗಂಟೆಯೊಳಗೆ ತಲುಪುವಂತೆ ಸಲ್ಲಿಸಬೇಕು.
ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಡಳಿತ ಮಂಡಳಿಗೆ ಸಲ್ಲಿಸಿರುವ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ, ಇವರಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.