ಮೈಸೂರು: 2023-24 ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ (PMEGP) ಗ್ರಾಮ ಪಂಚಾಯ್ತಿ/ ಪಟ್ಟಣ ಪಂಚಾಯ್ತಿ ಮತ್ತು ನಗರ ಪ್ರದೇಶಗಳಲ್ಲಿ ಬ್ಯಾಂಕ್ ಗಳ ಮುಖಾಂತರ ಸಾಲ ಪಡೆದು ಸಣ್ಣ ಕೈಗಾರಿಕೆಗೆ ಉತ್ಪಾದನಾ ವೆಚ್ಚ ರೂ. 50 ಲಕ್ಷದವರೆಗೆ ಮತ್ತು ಸೇವಾ ಉದ್ದಿಮೆಗೆ ರೂ.20 ಲಕ್ಷದವರೆಗೆ ಮತ್ತು ಸದರಿ ಸಾಲಕ್ಕೆ ಫಲಾನುಭವಿಗಳಿಗೆ ಶೇ.15 ರಿಂದ 35% ರಷ್ಟು ಸಹಾಯಧನ ಸೌಲಭ್ಯ ನೀಡಲು ಕರ್ಣಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (KVIB) ಮೈಸೂರು ವತಿಯಿಂದ www.pmegpeprotal ಅಥಾವ www.kvic.org.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಯ್ಯಾಜಿರಾವ್ ರಸ್ತೆಯಲ್ಲಿರುವ ಚಾಮರಾಜ ತಾಂತ್ರಿಕ ಸಂಸ್ಥೆ ಕಟ್ಟಡದ ಜಿಲ್ಲಾ ಕಚೇರಿಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಗ್ರಾಮೋದ್ಯೋಗ ಅಧಿಕಾರಿಗಳ ದೂ.ಸಂ: 0821-2566428 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.