ಮೈಸೂರು:- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸೆಯಲ್ಲಿನ ಎ.ಆರ್.ಟಿ ವಿಭಾಗಕ್ಕೆ ಒಂದು ವರ್ಷದ ಅವಧಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಹಿರಿಯ ವೈದ್ಯಾಧಿಕಾರಿಯ ಹುದ್ದೆಗೆ ಅನುಭವ ಮತ್ತು ಅರ್ಹತೆಗನುಸಾರವಾಗಿ ನಿಗದಿತ ವಯೋಮಾನದಡಿಯಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ವಿದ್ಯಾರ್ಹತೆ: ಔಷಧ ಅಥವಾ ಯಾವುದೇ ವಿಭಾಗದಲ್ಲಿ ಎಂಡಿ ಮಾಡಿರಬೇಕು ಅಥವಾ ಕನಿಷ್ಟ ಮೂರು ವರ್ಷ ಅನುಭವ ಹೊಂದಿರುವ ಯಾವುದೇ ಕ್ಲಿನಿಕಲ್ ವಿಭಾಗದಲ್ಲಿ ಡಿಪ್ಲೊಮಾದೊಂದಿಗೆ ಎಂ.ಬಿ.ಬಿ.ಎಸ್ ಪೂರ್ಣಗೊಂಡಿರಬೇಕು ಅಥವಾ ಹೆಚ್.ಐ.ವಿ ಮೆಡಿಸಿನ್ನಲ್ಲಿ ಫೆಲೋಶಿಪ್ನೊಂದಿಗೆ ಎಂ.ಬಿ.ಬಿ.ಎಸ್ ಅಥವಾ ಸಾರ್ವಜನಿಕ ಆರೋಗ್ಯ ಡಿಪ್ಲೊಮಾದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅಭ್ಯರ್ಥಿಗೆ 69 ವರ್ಷ ಮೀರಿರಬಾರದು.
ಆರ್ಹ ಅಭ್ಯರ್ಥಿಗಳು ಮಾ.25 ರಂದು ಬೆಳಿಗ್ಗೆ 9 ಗಂಟೆಯಿOದ 10.30 ಗಂಟೆಯೊಳಗೆ ವೈಯಕ್ತಿಕ ವಿವರ (ಬಯೋಡೆಟಾ) ಮತ್ತು ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಇತರೆ ಸಂಬoಧಿಸಿದ ದಾಖಲಾತಿಗಳ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ಎ.ಆರ್.ಟಿ. ಕೇಂದ್ರ ಕೊಠಡಿ ಸಂ. 18 ರಲ್ಲಿ ನೇರ ಸಂದರ್ಶನಕ್ಕೆ (ವಾಕ್ ಇನ್ ಇಂಟರ್ವ್ಯೂ) ಹಾಜರಾಗಬೇಕೆಂದು ಕೆ.ಆರ್ ಆಸ್ಪತ್ರೆಯ ಎಂಎoಸಿ ಮತ್ತು ಆರ್ಐನ ವೈದ್ಯಕೀಯ ಅಧೀಕ್ಷಕರಾದ ಡಾ.ಶೋಭಾ ಎಚ್.ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.