ಕೊಪ್ಪಳ ಜಿಲ್ಲೆಯ 5 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 12 ಅಂಗನವಾಡಿ ಕಾರ್ಯಕರ್ತೆ ಮತ್ತು 60 ಅಂಗನವಾಡಿ ಸಹಾಯಕಿಯರನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 10ನೇ ತರಗತಿ ಪಾಸ್. ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಪಾಸ್. ಗರಿಷ್ಟ 9ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. 10 ನೇ ತರಗತಿ ನಂತರ ಹೆಚ್ಚಿನ ಶಿಕ್ಷಣ ಪಡೆದವರು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅಂತಿಮ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 18 ರಿಂದ 35 ವಯೋಮಿತಿಯೊಳಗಿರಬೇಕು. ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ವಯಸ್ಸು 45 ವಯೋಮಿತಿಯೊಳಗಿರಬೇಕು. ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅದೇ ಗ್ರಾಮ / ಪುರಸಭೆ ವ್ಯಾಪ್ತಿಯಾಗಿದ್ದಲ್ಲಿ ವಾರ್ಡ್ ವ್ಯಾಪ್ತಿಯ ನಿವಾಸಿಯಾಗಿರಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಹುದ್ದೆಯ ನೇಮಕ ಪ್ರಕ್ರಿಯೆ ವೆಬ್‌ಸೈಟ್ anganwadirecruit.kar.nic.in ಗೆ ಭೇಟಿ ನೀಡಿ.














