ಬೆಂಗಳೂರು (Bengaluru)- ಗಡಿ ಭದ್ರತಾ ಪಡೆಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
ಸಬ್ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ (ಕ್ರ್ಯೂ) ಸೇರಿದಂತೆ ಒಟ್ಟು 281 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10th, ಪಿಯು, ಡಿಗ್ರಿ ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಬಹುದು. ಜೂನ್ 28 ಅರ್ಜಿ ಸಲ್ಲಿಸಲು ಕೊನೆಯ ದಿನ.
ಹುದ್ದೆಗಳ ವಿವರ: ಸಬ್ ಇನ್ಸ್ಪೆಕ್ಟರ್ (ಮಾಸ್ಟರ್) : 08, ಸಬ್ ಇನ್ಸ್ಪೆಕ್ಟರ್ (ಇಂಜಿನ್ ಡ್ರೈವರ್): 06, ಸಬ್ ಇನ್ಸ್ಪೆಕ್ಟರ್ (ವರ್ಕ್ಶಾಪ್) : 02, ಹೆಡ್ ಕಾನ್ಸ್ಟೇಬಲ್ (ಮಾಸ್ಟರ್) : 52, ಹೆಡ್ ಕಾನ್ಸ್ಟೇಬಲ್ (ಇಂಜಿನ್ ಡ್ರೈವರ್): 64, ಹೆಡ್ ಕಾನ್ಸ್ಟೇಬಲ್ (ವರ್ಕ್ಶಾಪ್) : 19, ಕಾನ್ಸ್ಟೇಬಲ್ (ಕ್ರ್ಯೂ) : 130 ಒಟ್ಟು ಹುದ್ದೆಗಳು: 281
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ, ಮಾಜಿ ಸೈನಿಕರಿಗೆ 6 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಭಾರತೀಯ ಪುರುಷ ಪ್ರಜೆಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೇಮಕ ಪ್ರಕ್ರಿಯೆಗಳು ಇಂತಿವೆ. ಮೊದಲ ಹಂತದಲ್ಲಿ – ಲಿಖಿತ ಪರೀಕ್ಷೆ, ಎರಡನೇ ಹಂತದಲ್ಲಿ – ಡಾಕ್ಯುಮೆಂಟೇಶನ್, ದೈಹಿಕ ಅರ್ಹತಾ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಟ್ರೇಡ್ ಟೆಸ್ಟ್, ಮೆಡಿಕಲ್ ಎಕ್ಸಾಮಿನೇಷನ್.
ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.
BSF Recruitment 2022 – Notification, BSF Recruitment 2022 – Apply Online.