ಭಾರತೀಯ ರೈಲ್ವೆ ಇಲಾಖೆಯ ಹಲವು ವಿಭಾಗಗಳಲ್ಲಿ ಖಾಲಿಯಿರುವ 1,036 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಜೂನಿಯರ್ ಸೋನೋಗ್ರಾಫರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಪ್ ಮತ್ತು ಅಸಿಸ್ಟೆಂಟ್ ಇನ್ಸ್ಪೆಕ್ಟರ್, ಮುಖ್ಯ ಕಾನೂನು ಸಹಾಯಕ ಹುದ್ದೆಗಳು ಸೇರಿದಂತೆ ಇನ್ನಿತ್ತರ ಹುದ್ದೆಗಳು ಖಾಲಿಯಿದ್ದು, ಜನವರಿ 7 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಲಿದೆ.
ಹುದ್ದೆಗಳ ವಿವರ
* ಇಲಾಖೆಯ ಹೆಸರು : ಭಾರತೀಯ ರೈಲ್ವೆ ಇಲಾಖೆ
* ಹುದ್ದೆಗಳು : ಜೂನಿಯರ್ ಸೋನೋಗ್ರಾಫರ್, ಜೂನಿಯರ್ ಟ್ರಾನ್ಸ್ಲೇಟರ್, ಸ್ಟಾಪ್ ಮತ್ತು ಅಸಿಸ್ಟೆಂಟ್ ಇನ್ಸ್ಪೆಕ್ಟರ್, ಮುಖ್ಯ ಕಾನೂನು ಸಹಾಯಕ, ದೈಹಿಕ ತರಬೇತಿ ಭೋದಕ, ಸಂಗೀತ ಶಿಕ್ಷಕ, ಪ್ರಯೋಗಾಲಯ ಸಹಾಯಕ ಹಾಗೂ ಇತರ ಹುದ್ದೆಗಳು.
* ಒಟ್ಟು ಹುದ್ದೆಗಳು :1036 ಹುದ್ದೆಗಳು
* ವೇತನ ಶ್ರೇಣಿ : ಮಾಸಿಕ ವೇತನ ರೂ 18,000 – ರೂ 85,000
ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ
* ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿ ಮೇಲ್ಕಂಡ ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಪದವಿ, ಬಿಇಡ್, ಸಿಟಿಇಡಿ, ಡಿಪ್ಲೋಮಾ, ಇಂಜಿನಿಯರಿಂಗ್, ತಂತ್ರಜ್ಞಾನ ಡಿಪ್ಲೋಮಾ ಪದವಿ ಪಡೆದಿರಬೇಕು.
* ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 48 ವರ್ಷ ದಾಟಿರಬಾರದು. ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪಿ ಡಬ್ಲ್ಯೂ ಡಿ, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಮಾಜಿ ಸೈನಿಕರಿಗೆ ರೂ 250 ಅರ್ಜಿ ಶುಲ್ಕ ಹಾಗೂ ಇತರ ವರ್ಗದವರಿಗೆ ರೂ 500 ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
ಆಯ್ಕೆ ವಿಧಾನ
* ಕಂಪ್ಯೂಟರ್ ಆಧಾರಿತ ಪರೀಕ್ಷೆ
* ಕೌಶಲ್ಯ ಹಾಗೂ ಇತರ ಮೌಲ್ಯಮಾಪನ ಆಧಾರಿತ ಪರೀಕ್ಷೆ
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 7 ಜನವರಿ 2025
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 6, ಫೆಬ್ರವರಿ 2025















