ಮನೆ ಉದ್ಯೋಗ ಸಿ – ಡಾಕ್ ​ನಲ್ಲಿ 91 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸಿ – ಡಾಕ್ ​ನಲ್ಲಿ 91 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಬೆಂಗಳೂರು: ಸೆಂಟರ್​ ಫಾರ್​ ಡೆವಲ್ಮೆಂಟ್​ ಆಫ್​ ಅಡ್ವಾನ್ಸ್​ ಕಂಪ್ಯೂಟಿಂಗ್​ (ಸಿ-ಡಾಕ್​) ಬೆಂಗಳೂರಿನಲ್ಲಿ ಪ್ರಾಜೆಕ್ಟ್​​ ಇಂಜಿನಿಯರ್​, ಪ್ರಾಜೆಕ್ಟ್​ ಮ್ಯಾನೇಜರ್​ ಮತ್ತು ಸೀನಿಯರ್​ ಪ್ರಾಜೆಕ್ಟ್​ ಇಂಜಿನಿಯರ್​ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Join Our Whatsapp Group

ಹುದ್ದೆ ವಿವರ: ಒಟ್ಟು ಹುದ್ದೆ 91

ಪ್ರಾಜೆಕ್ಟ್​ ಇಂಜಿನಿಯರ್​​ 52

ಪ್ರಾಜೆಕ್ಟ್​ ಮ್ಯಾನೇಜರ್​​ 4

ಸೀನಿಯರ್​ ಪ್ರಾಜೆಕ್ಟ್​​ ಇಂಜಿನಿಯರ್​​ – 35

ವಯೋಮಿತಿ: ಪ್ರಾಜೆಕ್ಟ್​​ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35,, ಪ್ರಾಜೆಕ್ಟ್​ ಮ್ಯಾನೇಜರ್​ ಹುದ್ದೆಗೆ ಗರಿಷ್ಠ 56 ಮತ್ತು ಸೀನಿಯರ್​ ಪ್ರಾಜೆಕ್ಟ್ ಹುದ್ದೆಗೆ ಗರಿಷ್ಠ ವಯೋಮಿತಿ 40 ವರ್ಷ ಆಗಿದೆ. ಸರ್ಕಾರದ ನಿಯಮಾವಳಿಯಂತೆ ಪ.ಜಾ, ಪ.ಪಂ ಮತ್ತು ಒಬಿಸಿ, ವಿಕಲಚೇತನ, ನಿವೃತ್ತ ಸೇವಾದಾರರಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಕಂಪ್ಯೂಟರ್​ ಸೈನ್ಸ್​​ನಲ್ಲಿ ಬಿಇ, ಬಿಟೆಕ್​, ಎಂಇ ಮತ್ತು ಎಂಟೆಕ್​ ಹಾಗೂ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ಅರ್ಜಿ ಶುಲ್ಕ ನಿಗದಿ ಮಾಡಿಲ್ಲ.

ಈ ಹುದ್ದೆಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್​ 5 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು cdac.in ಭೇಟಿ ನೀಡಿ.