ಮನೆ ಉದ್ಯೋಗ REC ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

REC ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

REC ಲಿಮಿಟೆಡ್ ನ ಮಹಾರತ್ನ ಪಬ್ಲಿಕ್ ಸೆಕ್ಟರ್ ಎಂಟರ್ ಪ್ರೈಸಸ್’ನಲ್ಲಿ ಖಾಲಿರುವ ಒಟ್ಟು 125 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು 2023ರ ಏಪ್ರಿಲ್ 15 ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ recindia.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇಂಜಿನಿಯರಿಂಗ್ ವಿಭಾಗ, ಫೈನನ್ಸ್ ಹಾಗೂ ಅಕೌಂಟ್ಸ್, ಎಚ್’ಆರ್, ಐಟಿ, ಕಾರ್ಪೊರೇಟ್ ಕಮ್ಯೂನಿಕೇಶನ್, ಕಂಪನಿ ಸೆಕ್ರೆಟರಿಯೇಟ್ (ಸಿಎಸ್) ವಿಭಾಗದಲ್ಲಿ ಕಾರ್ಯನಿರ್ವಹಿಸಲು ಒಟ್ಟು 125 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ:

ಜನರಲ್ ಮ್ಯಾನೇಜರ್(ಇಂಜಿನಿಯರಿಂಗ್)- 5 ಹುದ್ದೆಗಳು, ಮ್ಯಾನೇಜರ್(ಇಂಜಿನಿಯರಿಂಗ್)-5 ಹುದ್ದೆಗಳು, ಡಿಪ್ಯೂಟಿ ಮ್ಯಾನೇಜರ್(ಇಂಜಿನಿಯರಿಂಗ್)- 4 ಹುದ್ದೆಗಳು, ಅಸಿಸ್ಟೆಂಟ್ ಮ್ಯಾನೇಜರ್(ಇಂಜಿನಿಯರಿಂಗ್)-3 ಹುದ್ದೆಗಳು., ಆಫೀಸರ್(ಇಂಜಿನಿಯರಿಂಗ್)-2 ಹುದ್ದೆಗಳು, ಡಿಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್)- 7 ಹುದ್ದೆಗಳು, ಮ್ಯಾನೇಜರ್(ಫೈನಾನ್ಸ್ ಮತ್ತು ಅಕೌಂಟ್ಸ್) 5 ಹುದ್ದೆಗಳು, ಆಫೀಸರ್(ಫೈನಾನ್ಸ್ ಮತ್ತು ಅಕೌಂಟ್ಸ್)-2 ಹುದ್ದೆಗಳು, ಅಸಿಸ್ಟೆಂಟ್ ಮ್ಯಾನೇಜರ್(HR) -3 ಹುದ್ದೆಗಳು, ಸೇರಿದಂತೆ ಒಟ್ಟು 125 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಇವರನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳಿಗೆ 1000 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

REC ನೇಮಕಾತಿಗೆ ಅರ್ಜಿ ಸಲ್ಲಿಸುವುದೇಗೆ?

• recindia.nic.in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

• ಮುಖಪುಟದಲ್ಲಿ ಓಪನ್ ಆಗುವ ಜಾಬ್ ಮೇಲೆ ಕ್ಲಿಕ್ ಮಾಡಬೇಕು.

• ಬಳಿಕ ಅಲ್ಲಿ ಕೇಳಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.

• ಜೊತೆಗೆ ಅಗತ್ಯ ದಾಖಲೆಗಳನ್ನು ಸಹ ಅಲ್ಲಿ ಅಪ್ಲೋಡ್ ಮಾಡಬೇಕು.

• ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಅರ್ಜಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ