ಮನೆ ಸ್ಥಳೀಯ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ

ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ

0

ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಮೈಸೂರು ಜಿಲ್ಲಾ ಪಿರಿಯಾಪಟ್ಟಣ ಜನರಲ್ ಆಸ್ಟತ್ರೆಗೆ ತಾಯಿ ಮತ್ತು ಆಸ್ಪತ್ರೆ ಮಾದರಿಯಂತೆ ಮಂಜೂರಾಗಿದ್ದಾರೆ (6) ಶುಶ್ರೂಷಾಧಿಕಾರಿ ಹುದ್ದೆಗಳ ಗುತ್ತಿಗೆ ಆಧಾರದ ಮೇಲೆ (ರೋಸ್ಟರ್ ಕಮ್ ಮೆರಿಟ್ ಆಧಾರಿತ) ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶುಶ್ರೂಷಾಧಿಕಾರಿ ಹುದ್ದೆಗೆ ಜನರಲ್ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ (ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನ ನೋಂದಣಿ ಪ್ರಮಾಣ ಪತ್ರ ಕಡ್ಡಾಯ) ವಿದ್ಯಾರ್ಹತೆಯನ್ನು ಹೊಂದಿರಬೇಕು, ಮಾಸಿಕ ಸಂಚಿತ ವೇತನ ರೂ.15,555/-, ಮಾಸಿಕ ಸಂಚಿತ ವೇತನ ಮಾತ್ರ, 06 ಹುದ್ದೆಗಳು, ಕರ್ತವ್ಯ ನಿರ್ವಹಿಸುವ ಸ್ಥಳ ಪಿರಿಯಾಪಟ್ಟಣ ಜನರಲ್ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಾಲಾವಧಿ ನೇಮಕಗೊಂಡು ಒಂದು ವರ್ಷ ಅವಧಿಗೆ ಮಾತ್ರ, ಹುದ್ದೆಗಳಿಗೆ ಅನ್ವಯಿಸುವಂತೆ ಸಾ. ಅ.: 35, ಹಿಂದುಳಿದ ವರ್ಗ : 38, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ : 49 ವಯೋಮಿತಿಯನ್ನು ಹೊಂದಿರಬೇಕು.

ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ನಜರ್ ಬಾದ್, ಮೈಸೂರು -570010 ಇಲ್ಲಿ ಜೂನ್ 16 ರಂದು ಬೆಳಿಗ್ಗೆ 10.30 ಗಂಟೆಗೆ ಆಸಕ್ತರು ದೃಢೀಕೃತ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಮಟ್ಟದ ಗುತ್ತಿಗೆ ಆಧಾರಿತ ನೇಮಕಾತಿಗೆ​ ಸಮಿತಿ, ಸದಸ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.