ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ರೈಲ್ವೇ ನೇಮಕಾತಿ ಮಂಡಳಿ ಇದೀಗ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ:
ಗೂಡ್ಸ್ ಟ್ರೈನ್ ಮ್ಯಾನೇಜರ್ – 3144
ಸ್ಟೇಷನ್ ಮಾಸ್ಟರ್ – 994
ಚೀಫ್ ಕಮರ್ಷಿಯಲ್ ಆ್ಯಂಡ್ ಟಿಕೆಟ್ ಸೂಪರ್ವೈಸರ್ – 1736
ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ – 1507
ಸೀನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 732
ಅಕೌಂಟ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 361
ಕಮರ್ಷಿಯಲ್ ಆ್ಯಂಡ್ ಟಿಕೆಟ್ ಕ್ಲರ್ಕ್ – 2022
ಜೂನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 990
ಟ್ರೈನ್ ಕ್ಲರ್ಕ್- 72
ವಿದ್ಯಾರ್ಹತೆ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಇನ್ನಿತರ ಹುದ್ದೆಗಳಿಗೆ ಪದವಿ ಹೊಂದಿರಬೇಕು.
ವಯೋಮಿತಿ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಗರಿಷ್ಟ ವಯೋಮಿತಿ 33 ವರ್ಷ. ಇನ್ನಿತರ ಹುದ್ದೆಗಳ ಗರಿಷ್ಠ ವಯೋಮಿತಿ 36 ವರ್ಷ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ನಿವೃತ್ತ ಸೇವಾ ನೌಕರರು, ಮಹಿಳೆಯರು, ತೃತೀಯ ಲಿಂಗಿಗಳಿಗೆ ಅರ್ಜಿ ಶುಲ್ಕ 250 ರೂ, ಇತರೆ ಅಭ್ಯರ್ಥಿಗಳಿಗೆ 500 ರೂ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ.
ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಇಲ್ಲಿಗೆ ಭೇಟಿ ನೀಡಿ.