ಮನೆ ಸ್ಥಳೀಯ ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಮಹಿಳೆಯರಿಗೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

0

ಮೈಸೂರು :  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ , ಮೈಸೂರು ಇವರ ವತಿಯಿಂದ 2024-25 ನೇ ಸಾಲಿನಲ್ಲಿ  ಮಹಿಳಾ ತರಬೇತಿ ಯೋಜನೆಡಿ ನಿರುದ್ಯೋಗಿ ಮಹಿಳೆಯರಿಗೆ ವಿವಿಧ ರೀತಿಯ “ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ” ಗಳನ್ನು ಉಚಿತವಾಗಿ ನೀಡಲು ಅರ್ಜಿ ಸೇರ್ಪಡಿಸಲಾಗಿದೆ , CRM ದೇಶೀಯ ಅಲ್ಲದ ಧ್ವನಿ ತರಬೇತಿ ಬಯಸುವವರು , “ ವಿಶ್ವಾಸ್ ಸಾಫ್ಟ್‌ಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆ ” ತಿ . ನರಸೀಪುರ ಟೌನ್ , ತಿ . ನರಸೀಪುರ ತಾಲ್ಲೂಕು ಇಲ್ಲಿ ಹಾಗೂ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ ತರಬೇತಿ ಬಯಸುವವರು “ ಕಂಪ್ಯೂಟೆಕ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ”  ತಿ . ನರಸೀಪುರ ಟೌನ್ , ತಿ . ನರಸೀಪುರ ತಾಲ್ಲೂಕು ಇಲ್ಲಿ ಅರ್ಜಿ ಸಲ್ಲಿಸಬಹುದು .

ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಪಡೆದಿರುವ , 18 ರಿಂದ 35 ವರ್ಷ ವಯೋಮಿತಿಯೊಳಗೆ ಇರುವ ಆಸಕ್ತ ಮತ್ತು ಅರ್ಹ  ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಅರ್ಜಿಯ ಆಧಾರ ಕಾರ್ಡ್ , ಎಸ್ . ಎಸ್ . ಎಲ್ . ಸಿ ಅಂಕಪಟ್ಟಿ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ 6 ಭಾವಚಿತ್ರಗಳೊಂದಿಗೆ ಜುಲೈ 25 ರೊಳಗೆ ನೇರವಾಗಿ ಮೇಲ್ಕಂಡ ಅಗತ್ಯವಿರುವ ಅರ್ಜಿಯನ್ನು ಸಲ್ಲಿಸಬಹುದು . ಅಥವಾ www.kaushalkar.com ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.