ಬೆಂಗಳೂರು (Bengaluru)- ಭಾರತೀಯ ರೈಲ್ವೆ ಇಲಾಖೆಯ ಈಶಾನ್ಯ ಗಡಿ ರೈಲ್ವೆಯೂ 5636 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು 5636 ಹುದ್ದೆಗಳು ಖಾಲಿ ಇವೆ.
ಘಟಕವಾರು ಹುದ್ದೆಗಳ ವಿವರ ಇಂತಿವೆ:
ಕಟಿಹರ್ ವರ್ಕ್‌ಶಾಪ್ : 919 ಹುದ್ದೆಗಳು, ಆಲಿಪುರ್ದ್ವಾರ್ : 522 ಹುದ್ದೆಗಳು, ರಂಗಿಯ: 551 ಹುದ್ದೆಗಳು, ಲುಂಡಿಂಗ್ : 1140 ಹುದ್ದೆಗಳು, ತಿನ್‌ಸುಕಿಯಾ: 547 ಹುದ್ದೆಗಳು, ನ್ಯೂ ಬೊಂಗೈಗಾನ್ ವರ್ಕ್‌ಶಾಪ್ : 1110 ಹುದ್ದೆಗಳು, ದಿಬ್ರುಗನ್ ವರ್ಕ್‌ಶಾಪ್ : 847 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಜತೆಗೆ ಐಟಿಐ ವಿದ್ಯಾರ್ಹತೆ ಸರ್ಟಿಫಿಕೇಟ್ ಅನ್ನು NCVT / SCVT ಇಂದ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಆಯಾ ಟ್ರೇಡ್‌ಗೆ ಅರ್ಜಿ ಹಾಕಬೇಕು.
ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಕೇಂದ್ರ ಸರ್ಕಾರದ ಅಪ್ರೆಂಟಿಸ್ ನಿಯಮಗಳ ಪ್ರಕಾರ ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈಶಾನ್ಯ ಗಡಿನಾಡು ರೈಲ್ವೆ ಅಧಿಕೃತ ವೆಬ್‌ಸೈಟ್ https://nfr.indianrailways.gov.in/ ಗೆ ಭೇಟಿ ನೀಡಬಹುದು.