ಮನೆ ಉದ್ಯೋಗ ಬೆಸ್ಕಾಂನಲ್ಲಿ 510 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಸ್ಕಾಂನಲ್ಲಿ 510 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಬೆಂಗಳೂರು: ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತದಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಹಾಗೂ ಡಿಪ್ಲೊಮಾ ಪದವೀಧರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಾಗಿದೆ.

Join Our Whatsapp Group

ಹುದ್ದೆ ವಿವರ: ಒಟ್ಟು 510 ಅಪ್ರೆಂಟಿಸ್​ ಹುದ್ದೆಗಳು

ತಾಂತ್ರಿಕ ಅಪ್ರೆಂಟಿಸ್​ – 130

ಪದವೀಧರ ಅಪ್ರೆಂಟಿಸ್​ – 305

ಡಿಪ್ಲೊಮಾ ಅಪ್ರೆಂಟಿಸ್​ – 75

ವಿದ್ಯಾರ್ಹತೆ: ತಾಂತ್ರಿಕ ಮತ್ತು ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಬಿಇ, ಬಿಟೆಕ್​, ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಹತೆ.

ಡಿಪ್ಲೊಮಾ ಅಪ್ರೆಂಟಿಸ್​​ಗೆ ಡಿಪ್ಲೊಮಾ ಪದವಿ ಹೊಂದಿರಬೇಕು.

ವಿದ್ಯಾರ್ಹತೆ: ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಮೊದಲು ನ್ಯಾಷನಲ್​ ವೆಬ್​ ಪೋರ್ಟಲ್​ನಲ್ಲಿ (ಎನ್​ಎಟಿ) ಅಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಚೆಸ್ಕಾಂ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ದಿನಾಂಕ ವಿವರಣೆ: ಅಭ್ಯರ್ಥಿಗಳು ಫೆ 1ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಫೆ.20 ಆಗಿರುತ್ತದೆ.

ಸೂಚನೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಶಾರ್ಟ್​ಲಿಸ್​ ಆದ ಬಳಿಕ ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ದಾಖಲೆ ಪರಿಶೀಲನೆಗೆ ಆಗಮಿಸಬೇಕಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆವಿಕಂ, ಟ್ರೀ ಪಾರ್ಕ್​ ಎದುರು, ಬಿಜಿಎಸ್​​ ವರ್ಲ್ಡ್​​ ಸ್ಕೂಲ್​ ಹಿಂಭಾಗ, ಬಿಎಂ ರಸ್ತೆ, ರಾಮನಗರ- 562159

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು bescom.Karnataka.gov.in ಇಲ್ಲಿಗೆ ಭೇಟಿ ನೀಡಿ.