ಮನೆ ಉದ್ಯೋಗ ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾದಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಭಾರತೀಯ ನೌಕಾದಳ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಶಾರ್ಟ್​ ಸರ್ವೀಸ್​ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​​ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 29, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ ಸೈಟ್ www.indiannavy.nic.in ಗೆ ಭೇಟಿ ನೀಡಬಹುದು.

ಹುದ್ದೆಯ ಮಾಹಿತಿ:

ಜನರಲ್ ಸರ್ವೀಸ್ {GS(X)/Hydro Cadre} – 40

ಏರ್​ ಟ್ರಾಫಿಕ್ ಕಂಟ್ರೋಲರ್ (ATC)- 66

ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)- 66

ಪೈಲಟ್- 66

ಲಾಜಿಸ್ಟಿಕ್ಸ್​- 66

ಎಜುಕೇಶನ್- 18

ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 30

ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- 50

ನೇವಲ್ ಕನ್​ಸ್ಟ್ರಕ್ಟರ್- 20

ವಿದ್ಯಾರ್ಹತೆ:

ಜನರಲ್ ಸರ್ವೀಸ್ {GS(X)/Hydro Cadre} – ಬಿಇ/ಬಿ.ಟೆಕ್

ಏರ್​ ಟ್ರಾಫಿಕ್ ಕಂಟ್ರೋಲರ್ (ATC)- ಬಿಇ/ಬಿ.ಟೆಕ್

ನೇವಲ್ ಏರ್ ಆಪರೇಶನ್ಸ್​ ಆಫೀಸರ್ (ಹಿಂದಿನ ವೀಕ್ಷಕ)- ಬಿಇ/ಬಿ.ಟೆಕ್

ಪೈಲಟ್- ಬಿಇ/ ಬಿ.ಟೆಕ್

ಲಾಜಿಸ್ಟಿಕ್ಸ್​- ಬಿ.ಕಾಂ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ

ಎಜುಕೇಶನ್- ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ

ಎಂಜಿನಿಯರ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ಬಿ.ಟೆಕ್

ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್)- ಬಿಇ/ ಬಿ.ಟೆಕ್

ನೇವಲ್ ಕನ್ ​ಸ್ಟ್ರಕ್ಟರ್- ಬಿಇ/ ಬಿ.ಟೆಕ್

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ವೇತನ:

ಮಾಸಿಕ ₹ 56,100

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ

ಮೆಡಿಕಲ್ ಟೆಸ್ಟ್

ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/10/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 29, 2023

ಹಿಂದಿನ ಲೇಖನಬಿಡುಗಡೆಯ ಹಂತಕ್ಕೆ  “ಸೈಕಲ್‌ ಸವಾರಿ’ ಸಿನಿಮಾ
ಮುಂದಿನ ಲೇಖನಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು