ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1940 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್ 5 ಕಡೇಯ ದಿನವಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣರು ಈ ಹುದ್ದೆಗೆ ಅರ್ಜರಾಗಿದ್ದಾರೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ಒಟ್ಟು ಹುದ್ದೆ: ಕರ್ನಾಟಕದ ಬಿಪಿಎಂ ಮತ್ತು ಎಬಿಪಿಎಂನ ಹುದ್ದೆ ನೇಮಕಾತಿ ಕುರಿತ ಜಿಲ್ಲಾವಾರು ಮಾಹಿತಿ
ಬಾಗಲಕೋಟೆ – 23
ಬಳ್ಳಾರಿ – 50
ಬೆಂಗಳೂರು ಜಿಪಿಒ – 4
ಬೆಳಗಾವಿ – 33
ಬೆಂಗಳೂರು ಪೂರ್ವ – 83
ಬೆಂಗಳೂರು ದಕ್ಷಿಣ – 62
ಬೆಂಗಳೂರು ಪಶ್ಚಿಮ – 39
ಬೀದರ್ – 59
ಚನ್ನಪಟ್ಟಣ – 87
ಚಿಕ್ಕಮಗಳೂರು – 60
ಚಿಕ್ಕೋಡಿ – 19
ಚಿತ್ರದುರ್ಗ – 27
ದಾವಣಗೆರೆ – 40
ಧಾರವಾಡ – 22
ಗದಗ – 18
ಗೋಕಾಕ್ – 7
ಹಾಸನ – 78
ಹಾವೇರಿ – 44
ಕಲಬುರಗಿ – 83
ಕಾರವಾರ – 43
ಕೊಡಗು – 76
ಕೋಲಾರ – 106
ಕೊಪ್ಪಳ -36
ಮಂಡ್ಯ – 65
ಮಂಗಳೂರು – 62
ಮೈಸೂರು – 42
ನಂಜನಗೂಡು – 66
ಪುತ್ತೂರು – 89
ರಾಯಚೂರು – 63
ಆರ್ಎಂಎಸ್ ಹೆಚ್ಬಿ – 3
ಆರ್ಎಂಎಸ್ ಕ್ಯೂ – 9
ಶಿವಮೊಗ್ಗ – 89
ಶಿರಸಿ – 66
ತುಮಕೂರು – 107
ಉಡುಪಿ – 90
ವಿಜಯಪುರ – 40
ಯಾದಗಿರಿ – 50
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ವೇತನ: ಗ್ರಾಮೀಣ ಡಾಕ್ ಸೇವಕ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹುದ್ದೆಗೆ 12,000 – 29,380ರೂ. ವರೆಗೆ ಗ್ರಾಮೀಣ ಡಾಕ್ ಸೇವಕ್ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗೆ 10000 – 24470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.
ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಈ ಹುದ್ದೆಗೆ ಜುಲೈ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 5 ಆಗಿದೆ. ಅರ್ಜಿಯಲ್ಲಿ ಏನಾದರೂ ತಿದ್ದುಪಡಿ ಇದ್ದಲ್ಲಿ ಸರಿಪಡಿಸುವಿಕೆಗೆ ಆಗಸ್ಟ್ 6 ರಿಂದ 8ರ ವರೆಗೆ ಅವಕಾಶ ನೀಡಲಾಗಿದೆ.
ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ karnatakapost.gov.inಗೆ ಭೇಟಿ ನೀಡಬಹುದಾಗಿದೆ.