ಮನೆ ಪೌರಾಣಿಕ ಅಧಿಪತಿಗಳ ನೇಮಕ

ಅಧಿಪತಿಗಳ ನೇಮಕ

0

ಮೆನುವಿನ ಮಗನಾದ ಪೃಥು ಚಕ್ರವರ್ತಿಯನ್ನು ಮುನಿಗಳು ತಂದು ಸಿಂಹಾಸನದ ಮೇಲೆ ಅಧಿರೋಹಿಸಿದ ಮೇಲೆ ಬ್ರಹ್ಮ ಲೋಕದಲ್ಲಿ ಒಂದೊಂದು ಕಾರ್ಯಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನಿಯಮಿಸಿದನು. ಚಂದ್ರನನ್ನು ಅಧಿಪತಿಯಾಗಿ ಮಾಡಿ, ಆತನಿಗೆ ಗ್ರಹಗಳು, ನಕ್ಷತ್ರಗಳು, ವಿಪ್ರರು,ವೃಕ್ಷಗಳು,ಲತೆಗಳು, ನಿಕುಂಜಗಳು,ತಪಸ್ಸುಗಳು, ಯಜ್ಞಗಳಿಗೆ ಅಧಿಪತ್ಯವನ್ನು ಪ್ರಾಸಾಧಿಸಿದನು. ಭೂಮಿಯನ್ನು ಪರಿಪಾಲಿಸುವ ಮಹಾರಾಜನಿಗೆ ವೈ ಶ್ರವಣನಾದ ಕುಬೇರನನ್ನು, ಜಲಕ್ಕೆ ವರುಣದೇವನನ್ನು, ಆದಿತ್ಯರಿಗೆ ಇಂದ್ರಾ ನಿಜನಾದ ವಿಷ್ಣುವನ್ನು ನಿಯಮಿಸಿದನು.

Join Our Whatsapp Group

ಅಷ್ಟವಸುವರಿಗೆ ಪಾವಕಾಗ್ನಿಯನ್ನು,ಪ್ರಜಾಪತಿಗಳಿಗೆ ದಕ್ಷ ಪ್ರಜಾಪತಿಯನ್ನು ಮರುದ್ಗಣರಿಗೆ ವಾಸವನ್ನು,  ಮುನೀಂದ್ರರಿಗೆ  ಕಪಿಲ ಮಹರ್ಷಿಯನನ್ನು ದೈತ್ಯ ದಾನವರಿಗೆ ದಿ ದಿತಿಗೂ, ಧನುವಿಗೆ ಕೃಶಕ್ತ ಪ್ರಜಾಪತಿಯಿಂದ  ಜನಿಸಿದ ಸಂತಾನ ಪ್ರಹ್ಲಾದನನ್ನು ಅಧಿಪತಿಯನ್ನಾಗಿ ಮಾಡಿದನು.ಯಮನ ಪಿತೃ ಗಣಗಳಿಗೂ ಐರಾವತ ಆನೆಗಳಿಗೂ,  ಪಕ್ಷಿಗಳಿಗೆ ಗರುತ್ಮಂತನನ್ನು, ಮಹಾ ಸಂಪರ್ಕಗಳಿಗೆ ವಾಸುಕಿಯನ್ನು,ಕುದುರೆಗಳಿಗೆ ಉಚ್ಚೇೖಶ್ರವವನ್ನು, ಗೋವುಗಳಿಗೆ ವೃಷಭವನ್ನು ಮೃಗಗಳಿಗೆ ಕೇಸರಿಯನ್ನು, ಮನಸ್ಮೃತಿಗಳಿಗೆ ಪ್ಲಕ್ಷವನ್ನು ಪರ್ವತಗಳಿಗೆ ಹಿಮಾಲಯವನ್ನು ಬ್ರಹ್ಮನ ದಯೆಯಿಂದ ಅಧಿಪತ್ಯವನ್ನು ಪಡೆದು ಜಾತ್ಯಾ ಅಭಿವೃದ್ಧಿಯನ್ನು ಮುಂದುವರೆಸಿದರು.

ಮೈತ್ರೇಯಾ, ಈ ರೀತಿಯಾಗಿ ವಿಷ್ಣುವಿನ ಅಂಶಾಅವತಾರಗಳಾಗಿ ಜನಿಸಿ ಅಧಿಪತ್ಯವನ್ನು ವಹಿಸಿದ ಇವರೆಲ್ಲರ ಪರಿಪಾಲನಾ ವಿಶೇಷಗಳನ್ನು ಪ್ರತಿಯೊಬ್ಬರ ಜೀವನದ ಸನ್ನಿವೇಶಗಳನ್ನು ಕುರಿತು ಸಮೀಕ್ಷಾ ರೂಪದಲ್ಲಿ ಲಘುವಾಗಿ ಹೇಳುವುದಕ್ಕೆ ಯಾರಿಂದಲೂ ಸಾಧ್ಯವಲ್ಲ.ಮಗೂ ಸಮಸ್ತ ಸೃಷ್ಠಿಯೂ ವಾಸುದೇವನ ಲೀಲಾ ವಿಳಾಸವೇ ಆಗಿದೆ. ಸಕಲ ಚರಾಚರಗಳ ಜೀವನ ಕಷ್ಟ ಸುಖಗಳು ಆತನ ಅಜ್ಞಾನವಶರೇ ಆಗಿದ್ದಾರೆ ಈ ಕಾಲಸ್ವರೂಪವೆಲ್ಲಾ ಆತನ ಮಹಿಮೆಯೇ ಆಗಿದೆ. 

ಉತ್ತನಾರಾಯಣ ದಕ್ಷಿಣಾಯನಗಳು, ಪಾಡ್ಯಮಿ,ಬೀದಿಗೆ,ತದಿಗೆ, ಚೌತಿ, ಪಂಚಮಿ, ಷಷ್ಠಿ ಸಪ್ತಮಿ ಅಷ್ಟಮಿ,ನವಮಿ, ದಸಮಿ, ಏಕಾದಶಿ,ದ್ವಾದಶೀ, ತ್ರಯೋದಶಿ, ಚತುರ್ದಶಿ,ಪೌರ್ಣಿಮೆ, ಅಮಾವಾಸ್ಯ ಶುಕ್ಲಪಕ್ಷ, ಕೃಷ್ಣ ಪಕ್ಷಗಳು,ಚೈತ್ರ, ವೈಶಾಖ, ಜೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ,ಪುಷ್ಪ,ಮಾಘ, ಪಾಲ್ಗುಣ ಮಾಸಗಳು ಪ್ರಭಾವದಿ ಸಂವತ್ಸರಗಳ ಕಾಳ, ಕ್ಷಣ, ಕಾಷ್ಟ, ನಿಮಿಷಾದಿಗಳಾದ ಕಾಲಗಳು ಆತನ ಅಭಿವ್ಯಕ್ತ ರೂಪಗಳೇ ಆಗಿವೆ.ಈ ಅನಂತ  ಬ್ರಹ್ಮಾಂಡವೂ. ಸಪ್ತದ್ವೀಪಗಳು ಸಮಸ್ತ ನದಿಗಳು ಸಮುದ್ರಗಳಿಂದ ಕೂಡಿದ ಪ್ರಕೃತಿ ಸರ್ವಸ್ವವು ಆತನ ಆ ಜ್ಞಾನಮೂರ್ತಿಗಳೇ ಆಗಿವೆ ದೇವಾಲಯಗಳೆ ಆಗಿವೆ. ದೇವತೆಗಳು, ದಾನವರು, ನರರು, ಕಿನ್ನರರು, ಗರುಡರು,ಗಂಧರ್ವರು, ಯಕ್ಷರು, ರಾಕ್ಷಸರು, ಮುಂತಾದ ಜೀವರಾಶಿಯು ಆ ಪರಾತ್ವವನ್ನು ಕರುಣೆಗೆ ದರ್ಶನ.

ಸದ್ಗುರುಗಳಿಂದ ಉಪದೇಶ ಪೂರ್ವಕವಾಗಿ ಗ್ರಹಿಸಿದ ಆಧ್ಯಾತ್ಮ ವಿದ್ಯೆಗಳು, ಧರ್ಮ ರಕ್ಷಣೆಗಾಗಿ ಲೋಕ ಸಮರ್ಪಣೆಗಾಗಿ ಆಚರಿಸುವ ಮಹಾಜ್ಞಗಳು, ಪರಮಾನಂದ ಅನುಭವಕ್ಕಾಗಿ ವಿರಕ್ತಿ ಮಾರ್ಗಕ್ಕೆ ಪ್ರವೇಶಿಸಿ ಅನುಷ್ಠಾನ ಮಾಡುವ ಜಪತಪ ಗಳು ಇವೆಲ್ಲರದರಲ್ಲಿಯೂ ಪಠಿಸಲ್ಪಡುವ ರಹಸ್ಯ ಮಂತ್ರ ವ್ಯಾಜ್ಞಯ ಸರ್ವಸ್ವವೂ ವಾಸುದೇವ ಅನಂತ ಶಕ್ತಿಯನ್ನು ಶಬ್ದ ರೂಪದಲ್ಲಿ ನಿರೂಪಿಸುತ್ತಿದೆ.

ಪಂಚಭೂತಗಳು, ತನ್ಮಾತ್ರ ಗುಣಗಳು ಕರ್ಮೇಂದ್ರಿಯ, ಬುದ್ದಿಂದ್ರಿಯಗಳು ಮುಂತಾದ ಸಚರಾಚರ ಪ್ರಪಂಚವೆಲ್ಲಾ ಶ್ರೀಮನ್ನಾರಾಯಣ ದಿವ್ಯ ಕೃಪಾದಿನ,  ಋಗ್ವೇದ, ಯಜುರ್ವೇದ,ಸಾಮವೇದ, ಅಥರ್ವಣ, ವೇದಗಳು, ವೇದಾಂತ ರಹಸ್ಯಗಳು,ನೀತಿಶಾಸ್ತ್ರಗಳು, ಮನ್ವಾದಿಗಳುಸಮ  ನಿಯಮಿಸಿದ ಧರ್ಮಶಾಸ್ತ್ರಗಳು,ಪುರಾಣಗಳು,, ಉಪ ಪುರಾಣಗಳು ಅನು ವಾಕಗಳು ಕವ್ಯಾಲಾಪಗಳು,ಸಂಗೀತಾದಿ,  ವಿದ್ಯೆಗಳು ಅವರತ್ನಾಲ್ಕು,ವ್ರತಗಳು ವ್ರತಕಲ್ಪಗಳು, ಮೂರ್ತಾಮೂರ್ತಿಗಳು  ಎಲ್ಲವೂ ಆ ಪುರುಷೋತ್ತಮನ ಮೂರ್ತಿ ಭೇದಳಗಾಗಿ ಬೆಳಗುತ್ತಿವೆ ಶ್ರೀ ಮಹಾವಿಷ್ಣು ಸರ್ವಾತ್ಮಗಳಿಗೂ ಆದಿ ದೇವರು, ಆತನನ್ನಃ ನಂಬಿದವರಿಗೆ ಯಾವ ಆಪತ್ತುಗಳು ಇಲ್ಲ ನಿರ್ಮಲ ಚಿತ್ತದಿಂದ ಈ ಮಹಾನುಭಾವವನ್ನು ಆರಾಧಿತ ಭಕ್ತರಿಗೆ ಕಷ್ಟಗಳು ನಾಶವಾಗಿ ಕರ್ಮಾಂತದಲ್ಲಿ ಭಗವಂತನ ಸೈಯುಜ್ಯ ಭಾಗ್ಯವು ಉಂಟಾಗುತ್ತದೆ ಈ ಪುರಾಣವನ್ನುಭಕ್ತಿ ಶ್ರದ್ದಿಗಳೊಂದಿಗೆ  ಪಠಿಸಿದ ಆಲಿಸಿದ ಪುಣ್ಯಾತ್ಮರಿಗೆ ಕಾರ್ತಿಕ ಮಾಸದಲ್ಲಿ ವೈಷ್ಣವ ರಥವನ್ನು 12 ವರ್ಷಗಳು ನಿಯಮ ನಿಷ್ಠೆಗಳೊಂದಿಗೆ ಆಚರಿಸಿ,  ಪುಷ್ಕರಣಿಯಲ್ಲಿ ತೀರ್ಥ ಸ್ಥಾನ ಮಾಡಿ ಮಹಾಪಲವು ಲಭಿಸುತ್ತದೆ ಎಂದು ಪರಾಶಆಮ್ಮರ ಮಹರ್ಷಿಯು ಶ್ರೀ ವಿಷ್ಣು ಮಹಿಮೆಯನ್ನು ಹೇಳಿದರು.