ಮನೆ ರಾಜ್ಯ 24 ನಿಗಮ, ಮಂಡಗಳಿಗೆ ನೂತನ ಅಧ್ಯಕ್ಷರ ನೇಮಕ

24 ನಿಗಮ, ಮಂಡಗಳಿಗೆ ನೂತನ ಅಧ್ಯಕ್ಷರ ನೇಮಕ

0

ಬೆಂಗಳೂರು (Bengaluru): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ 24 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ, ಮಣಿರಾಜ ಶೆಟ್ಟಿ, ಕೆ.ವಿ. ನಾಗರಾಜ ಮತ್ತು ರೇವಣಪ್ಪ ಕೋಳಗಿ ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಈ ಬಾರಿ ಬಿಜೆಪಿ ಕಾರ್ಯಕರ್ತರಿಗೇ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

2019ರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಅವರಲ್ಲಿ 52 ಮಂದಿಯ ನೇಮಕಾತಿಯನ್ನು ರದ್ದುಗೊಳಿಸಿ ಜುಲೈ 12ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಮತ್ತೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ನೇಮಕಗೊಂಡಿರುವ ಅಧ್ಯಕ್ಷರ ವಿವರ:

ಎಂ. ಸರವಣ– ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವೇಂದ್ರನಾಥ ಕೆ. ನಾದ್‌– ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಚಂಗಾವರ ಮಾರಣ್ಣ– ಕಾಡುಗೊಲ್ಲ ಅಭಿವೃದ್ಧಿ ನಿಗಮ, ಕೆ.ಪಿ. ವೆಂಕಟೇಶ್‌– ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಎಂ.ಕೆ. ಶ್ರೀನಿವಾಸ್‌ (ಮಿರ್ಲೆ)– ವಸ್ತು ಪ್ರದರ್ಶನ ಪ್ರಾಧಿಕಾರ, ಎಂ.ಕೆ. ವಾಸುದೇವ್‌– ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಎನ್‌.ಎಂ. ರವಿನಾರಾಯಣ ರೆಡ್ಡಿ– ದ್ರಾಕ್ಷಿ ಮತ್ತು ವೈನ್‌ ಮಂಡಳಿ, ಚಂದ್ರಶೇಖರ ಕವಟಗಿ– ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಬಿ.ಸಿ. ನಾರಾಯಣಸ್ವಾಮಿ– ರೇಷ್ಮೆ ಮಾರಾಟ ಮಂಡಳಿ, ಗೌತಮ್‌ ಗೌಡ ಎಂ.– ರೇಷ್ಮೆ ಉದ್ಯಮಗಳ ನಿಗಮ, ಮಣಿರಾಜ ಶೆಟ್ಟಿ– ಗೇರು ಅಭಿವೃದ್ಧಿ ನಿಗಮ, ಗೋವಿಂದ ಜಟ್ಟಪ್ಪ ನಾಯ್ಕ– ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ, ಎಂ. ಶಿವಕುಮಾರ್‌– ಮೃಗಾಲಯ ಪ್ರಾಧಿಕಾರ, ಎನ್‌. ರೇವಣಪ್ಪ ಕೋಳಗಿ– ಅರಣ್ಯ ಅಭಿವೃದ್ಧಿ ನಿಗಮ, ಎನ್‌.ಎಂ. ರವಿ ಕಾಳಪ್ಪ– ಜೀವವೈವಿಧ್ಯ ಮಂಡಳಿ, ಎ.ವಿ. ತೀರ್ಥರಾಮ– ಮೀನುಗಾರಿಕೆ ಅಭಿವೃದ್ಧಿ ನಿಗಮ, ಎಂ.ಎಸ್‌. ಕರಿಗೌಡ್ರ– ಮಾರ್ಕೆಟಿಂಗ್‌ ಕಮ್ಯುನಿಕೇಷನ್ಸ್‌ ಅಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌, ರಘು ಕೌಟಿಲ್ಯ– ಮೈಸೂರು ಪೇಂಟ್ಸ್‌ ಮತ್ತು ವಾರ್ನಿಷ್‌ ನಿಯಮಿತ, ಗುತ್ತಿಗನೂರು ವಿರುಪಾಕ್ಷಗೌಡ– ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಕೆ.ವಿ. ನಾಗರಾಜ– ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಾರುತಿ ಮಲ್ಲಪ್ಪ ಅಷ್ಟಗಿ– ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕೊಲ್ಲಾ ಶೇಷಗಿರಿ ರಾವ್‌– ತುಂಗಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಜಿ. ನಿಜಗುಣರಾಜು– ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ– ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.