ಮೈಸೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ.ದಿ.ಪುನೀತ್ ರಾಜಕುಮಾರ್ ರವರ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆಗೆದುಹಾಕುವಂತೆ ಬಿಜೆಪಿಯ ಹೊಟ್ಟೆಕೆಚ್ಚಿನ ಜನರು ಹವಣಿಸುತ್ತಿರುವುದನ್ನು ಖಂಡಿಸಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಇಂದು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಸ್ತೆ ತಡೆದು ಘೋಷಣೆಗಳನ್ನು ಕೂಗಿ ಪ್ರತಿಭಟಿನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್, ರಾಜ್ ಕುಟುಂಬದ ಅಗ್ರಮಾನ್ಯ ನಟ ಪುನೀತ್ ರಾಜ್ ಕುಮಾರ್ ರವರ ನಿಧನವಾಗಿ ತಿಂಗಳುಗಳೇ ಕಳೆದಿದ್ದರು ಅಭಿಮಾನಿಗಳ ನೋವು ಮಾಸಿಲ್ಲ ಆಗಲೇ ಮತ್ತೆ ಅವಮಾನ ಮಾಡಲು ಹೊರಟಿರುವ ಬಿಜೆಪಿಯವರ ಮನಸ್ಥಿತಿಗೆ ಏನು ಹೇಳಬೇಕು ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವೇ ಪುನೀತ್ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದಾರೆ.ಆ ಪ್ರಶಸ್ತಿ ನೀಡಿದ್ದಕ್ಕೆ ಹಾಗೂ ಮೈಸೂರು ವಿವಿ ನೀಡಿರುವ ಮರಣೋತ್ತರ ಗೌರವ ಡಾಕ್ಟರೇಟ್ ಗೆ ಗೌರವ ಸಿಗಬೇಕೆಂದರೆ ಪ್ರತಿಭಾವಂತ ನಟನನ್ನು ಅವಮಾನಿಸಬಾರದು ಬದಲಾಗಿ ಅವರ ಚಿತ್ರಕ್ಕೂ ತೆರಿಗೆ ವಿನಾಯಿತಿಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ.ಇಂತಹ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಮುಂದಾಗುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ಕೆಪಿಸಿಸಿ ಸದಸ್ಯರುಗಳಾದ ವೀಣಾ,ಶ್ರೀನಾಥ್ ಬಾಬು,ಬ್ಲಾಕ್ ಅಧ್ಯಕ್ಷೆ ವಿದ್ಯಾ,ಶಿವರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ರವಿಚಂದ್ರ,ಗಿರೀಶ್,ಮುಖಂಡರುಗಳಾದ ವಿಜಯ್ ಕುಮಾರ್,ಹರೀಶ್ ನಾಯ್ಡು,ವಿನಯ್ ಕುಮಾರ್ ಜೆ,ಡೈರಿ ವೆಂಕಟೇಶ್,ಗುಣಶೇಖರ್,ನವೀನ್ ಎಂ ಕೆಂಪಿ,ಇರ್ಫಾನ್,ಫಾರುಖ್,ಶಾದಿಖ್ ಉಲ್ಲಾ ರೆಹಮಾನ್,ನಾಸೀರ್,ಸುರೇಶ್,ಅಭಿಷೇಕ್ ಶಿವಣ್ಣ ಹಾಗೂ ನೂರಾರು ಜನ ಪಾಲ್ಗೊಂಡಿದ್ದರು.