ಮನೆ ಯೋಗಾಸನ ಅರ್ಧ ಬದ್ಧ ಪದ್ಮ ಪಶ್ಚಿಮೋತ್ತಾನಾಸನ

ಅರ್ಧ ಬದ್ಧ ಪದ್ಮ ಪಶ್ಚಿಮೋತ್ತಾನಾಸನ

0

‘ಅರ್ಥ’ವೆಂದರೆ ಒಂದು ಭಾಗ ಇಲ್ಲವೇ ಒಂದು ಸಮಭಾಗ ; ಬದ್ಧ = ಕಟ್ಟಲ್ಪಟ್ಟ ಅಥವಾ ತಡೆಯಲ್ಪಟ್ಟ;  ‘ಪಶ್ಚಿಮೋತ್ತಾನಾಸನ’ದ ಭಂಗಿಯ ಅಭ್ಯಾಸದಿಂದ ದೇಹದ ಹಿಂಬದಿಯ ಚೆನ್ನಾಗಿ ಹೀಗುತ್ತದೆ.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ನೆಲದ ಮೇಲೆ ಕುಳಿತು,ಕಾಲುಗಳನ್ನು ಮುಂದುಗಡೆಗೆ ನೀಳವಾಗಿ ಚಾಚೀಡಬೇಕು.

2. ಎಡಗಾಲನ್ನು ಮಂಡಿಯಲ್ಲಿ ಬಗಿಸಿ, ಎಡಪಾದವನ್ನು ಬಲತೊಡೆಯ ಮೇಲೆ ರಿಸಬೇಕು. ಬಳಿಕ ಎಡ ಹಿಮ್ಮಡಿಯನ್ನು ಹೊಕ್ಕಳು ಭಾಗಕ್ಕೆ ಒತ್ತುವಂತಿಟ್ಟು, ಕಾಲ್ಬೆ ರಳುಗಳನ್ನು ಸೆಳದು ಮೋನಚಾಗಿಡಬೇಕು.ಇದೇ ಅರ್ಧ ಪದ್ಮದ ಭಂಗಿ.

3. ಎಡತೋಳನ್ನು ಹಿಂಗಡೆ ಬೆನ್ನಿನ ಸುತ್ತ ತಂದು,ಉಸಿರನ್ನು ಹೊರದೂಡಿ,ಎಡಗಾಲಿನಲಿನುಂಗುಟವನ್ನು  ಹಿಡಿದುಕೊಳ್ಳಬೇಕು. ಈ ಬೆರಳು ಸುಲಭವಾಗಿ ಎಟುಕದಿದ್ದಲ್ಲಿ ಎಡ ಭುಜವನ್ನು ಹಿಂಬಾಗಕ್ಕೆ ತೂಗಿಡಬೇಕು.

4. ಎಡಗಾಲಿನುಂಗುಟವನ್ನು ಹಿಡಿದುಕೊಂಡಮೇಲೆ ಬಗ್ಗಿಸಿದ ಎಡಮಂಡಿಯನ್ನು ಚಾಚಿಟ್ಟ ಬಲಗಾಲಿನ ಬಳಿ ಸರಿಸಬೇಕು ಈಗ ಬಲ ತೋಳನ್ನು ಮುಂಚಾಚಿ, ಬಲದಂಗೈ ಬಲದಂಗಾಲನ್ನು ಮುಟ್ಟುವಂತೆ ಬಲಪಾದವನ್ನು  ಹಿಡಿದುಕೊಳ್ಳಬೇಕು.

   5.ಆ ಬಳಿಕ ಉಸಿರನ್ನು ಹೊರ ಬಿಟ್ಟು ಬಲದ ಮೊಣಕೈಯನ್ನು ಹೊರಕ್ಕೆ ಬಗ್ಗಿಸಿ,ಮುಂಡವನ್ನು ಮುಂಗಡೆಗೆ ಸರಿಸಬೇಕು. ಆನಂತರ ಮೊದಲು ಹಣೆ ಆಮೇಲೆ ಮೂಗು,ಆ ಬಳಿಕ ತುಟಿ,ಕಡೆಯಲ್ಲಿ ಗದ್ದ ಇವನ್ನು ಕ್ರಮವಾಗಿ ಬಲಮಂಡಿಯ ಮೇಲಿರಬೇಕು.

7. ಮೊದಮೊದಲು ನೀಳವಾಗಿ ಚಾಚಿಟ್ಟ ಕಾಲನ್ನು ನೆಲದಿಂದ ಮೇಲೆತ್ತಿ,  ತೊಡೆಯ ಮಾಂಸ ಖಂಡಗಳನ್ನು ಬಿಗಿಗೊಳಿಸಿ ಚಾಚಿದ ಬಲಗಾಲಿನ ಕೆಲಬದಿಯೆಲ್ಲವೂ ನೆಲವನ್ನು ಮುಟ್ಟುವಂತಿರಬೇಕು.

8. ಈ ಭಂಗಿಯಲ್ಲಿ ಸಾಮಾನ್ಯವಾಗಿ ಉಸಿರಾಟದ ನಡೆಸುತ್ತ ಸುಮಾರು 30 ರಿಂದ 60 ಸೆಕೆಂಡುಗಳವರೆಗೂ ನೆಲೆಸಬೇಕು.

9. ಇದಾರಮೇಲೆ ಮತ್ತೆ ಉಸಿರನ್ನು ಒಳಕ್ಕೆಳೆದು ತಲೆಯನ್ನೂ ಮುಂಡವನ್ನೂ ಮೇಲೆತ್ತಿ ಕೈಗಳನ್ನು ಸಡಿಲಿಸಿ ಎಡಗಾಲನ್ನು ನೀಳಮಾಡಿ ಒಂದನೆಯ ಸ್ಥಿತಿಗೆ ಹಿಂದಿರುಗಿಸಬೇಕು.

10. ಹೀಗೆಯೇ ಇನ್ನೊಂದು ಕಡೆಯೂ ಈ ಭಂಗಿಯನ್ನು ಅಭ್ಯಸಿಸ ಬೇಕು ಇಲ್ಲಿ ಎಡಗಾಲನ್ನು ಚಾಚಿ,ಬಲಗಾಲ ಮಂಡಿಯನ್ನು ಬಗ್ಗಿಸಿ,ಬಲಪಾದವನ್ನು ಎಡತೊಡೆಯ ಮೇಲಿಟ್ಟು ಮೇಲೆ ವಿವರಿಸಿದ ಕ್ರಮದಲ್ಲಿ ಅಭ್ಯಸಿಸಬೇಕು.ಅಲ್ಲದೇ ಈ ಭಂಗಿಯಲ್ಲಿ ನೆಲೆಸುವ ಕಾಲ ಸಮನಾಗಿರಬೇಕು.

11. ಕೊನೆಯಲಿ ಕೈಯನ್ನು ಬೆನ್ನ ಹಿಂದೆ ತಂದು,ಹಬ್ಬೆರಳನ್ನು ಹಿಡಿಯುವುದಕ್ಕೆ ಸಾಧ್ಯವಾಗದಿದ್ದರೆ, ಚಾಚಿರುವ ಕಾಲುಗಳನ್ನು ಎರಡೂ ಕೈಗಳಿಂದ  ಹಿಡಿದು ಮೇಲೆ ವಿವರಿಸಿದ ಅಭ್ಯಾಸ ಕ್ರಮವನ್ನನುಸರಿಸಬೇಕು.

ಪರಿಣಾಮಗಳು

      ಅರ್ಧಪದ್ಮಾಕಾರದ ಈ ಭಂಗಿಯ ಅಭ್ಯಾಸದಲ್ಲಿ, ಮುಂಡಿಗಳು ಸರಾಗವಾಗಿ ಅತ್ತಿತ್ತ ತಿರುಗುವಂತಾಗುವುದರಿಂದ ‘ಪೂರ್ಣಪದ್ಮಾಸನ’ವನ್ನು ಇದರಿಂದ ಸುಲಭವಾಗಿ ಸಾಧಿಸಬಹುದು. ಗದ್ದವನ್ನು ಚಾಚಿದ ಮಂಡಿಯ ಮೇಲೆ ನೆಲೆಸಿಟ್ಟಾಗ ಬಗ್ಗಿಸಿಟ್ಟ ಮಂಡಿಯು ಚಾಚಿದ ಕಾಲಿನ ಬಳಿ ಬರುತ್ತದೆ. ಈ ಆಸನದ ಭಂಗಿಯು ಹೊಕ್ಕಳಿನ ಬಳಿ ಮತ್ತು ಕಿಬ್ಬೊಟ್ಟೆಯೊಳಗಿನ ಅಂಗಗಳನ್ನೆಲ್ಲ ಚೆನ್ನಾಗಿ ಸೆಳೆಯುವುದಲ್ಲದೆ,ನಾಭಿ ಮತ್ತು ಜನೇಂದ್ರಿಯದ ಸುತ್ತಲೂ ರಕ್ತ ಪರಿಚಲನೆಯು ಚೆನ್ನಾಗಿ ನಡೆಯುವಂತೆ ಮಾಡುತ್ತದೆ. ನಾಭಿ ದೇಶವು ನರಮಂಡಲದ ಕೇಂದ್ರವೆನಿಸಿದೆ. ದೇಹದ ನರಮಂಡಲದಲ್ಲಿಯು ಆಯಾ ಭಾಗಗಳಲ್ಲಿ ಸ್ಥಾಪಿತವಾದ ಷಟ್ಚ ಕ್ರಗಳಲ್ಲೊಂದಾದ “‘ಸ್ವಾಧಿಷ್ಟಾನ ಚಕ್ರವು ಈ ಸ್ಥಾನದಲ್ಲಿ ನೆಲೆಸಿದೆ. ಈ ಚಕ್ರಸ್ಥಾನವು   ಕೆಳಹೊಟ್ಟೆಯಲ್ಲಿಯ ತಂತುಜಾಲದೆಡೆಯನ್ನು ಸೂಚಿಸುತ್ತದೆ. ದುಂಡುಹೆಗಲು, ಜೋಲುಹೆಗಲುಗಳುಳ್ಳವರಿಗೆ ಈ ಆಸನಭ್ಯಾಸವು ಅತ್ಯಂತ ಫಲಕಾರಿ ಯೆಂದು ಸಲಹೆ ಮಾಡಲಾಗಿದೆ.

ಹಿಂದಿನ ಲೇಖನಕಜ್ಜಿ, ತುರಿ
ಮುಂದಿನ ಲೇಖನಹಾಸ್ಯ