ಮನೆ ಯೋಗಾಸನ ಅರ್ಧ ಮತ್ಸ್ಯೇಂದ್ರಾಸನ

ಅರ್ಧ ಮತ್ಸ್ಯೇಂದ್ರಾಸನ

0

    ಈ ಆಸನವು ಅರ್ಧಮತ್ಸ್ಯೇಂದ್ರಾಸನ ಒಂದುರ ವ್ಯತ್ಯಾದ ವಿಶೇಷ ಭಂಗಿ.ಇದರಲ್ಲಿ ಅದಕ್ಕಿಂತಲೂ ಬೆನ್ನೆಲುಬಿಗೆ ಹೆಚ್ಚಿನ ತಿರಿಚುಂಟಾಗುತ್ತದೆ.

Join Our Whatsapp Group

 ಅಭ್ಯಾಸ ಕ್ರಮ 

1. ಮೊದಲು, ನೆಲದ ಮೇಲೆ ಕುಳಿತು ಮುಂಗಡೆಗೆ ಕಾಲುಗಳನ್ನು ನೀಳವಾಗಿ ಚಚ್ಚಿಡಬೇಕು.

2. ಬಳಿಕ ಬಲಮಂಡಿಯನ್ನು ಬಾಗಿಸಿ, ಬಲಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಿ ಹಿಮ್ಮಡಿಯು ನಾಭಿ ಸ್ಥಾನವನ್ನು ಒತ್ತುವಂತಿಬೇಕು.3.  ಆಮೇಲೆ,ಉಸಿರನ್ನು ಹೊರ ಬಿಟ್ಟು ಮುಂಡವನ್ನು 90 ಡಿಗ್ರಿಗಳಷ್ಟು ಎಡಗಡೆಗೆ ತಿರುಗಿಸಿ, ಎಡತೋಳನ್ನು ಹೆಗಲಿನಿಮದ ಬಿಸಿ, ಬೆನ್ನಹಿಂಬದಿಗೆ ತಂದು ಎಡಮೊಣ ಕೈಯನ್ನು ಬಾಗಿಸಿ,ಎಡಗೈಯಿಂದ ಬಲಗಾಲ ಗಿಣ್ಣನ್ನು ಇಲ್ಲವೇ ಕಣಕಾಲನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.

4. ಆ ಬಳಿಕ,ಎಡಗಾಳನ್ನು ನೆಲದ ಮೇಲೆ ಉದ್ದಕ್ಕೂ ಹಿಗ್ಗಿಸಿಯೇ ಇಟ್ಟಿರಬೇಕು ಮತ್ತು ಬಲ ಗೈಯಿಂದ ಎಡದಂಗಾಲನ್ನೋ ಇಲ್ಲವೇ ಅದರುಂಗುಟವನ್ನೋ ಹಿಡಿದುಕೊಂಡು, ಬಲಗೈಯನ್ನು ನೀಳವಾಗಿ ಚಾಚಿಡಬೇಕು. ಮೊದಮೊದಲು, ಈ ಭಂಗಿಯ ಉದ್ದಕ್ಕೂ ಎಡಗಾಲನ್ನು ನೆಲದಮೇಲೆ ಹಿಗ್ಗಿಸಿಡುವುದು ಕಷ್ಟವಾಗಿ ತೋರುತ್ತದೆ. ಇಂಥ ಸಂದರ್ಭಗಳಲ್ಲಿ, ಎಡ ಮಂಡಿಯನ್ನು ಬಗ್ಗಿಸಿ ಬಲಗೈಯಿಂದ ಎಡಗಾಲಿನುಂಗುಟವನ್ನು ಹಿಡಿದು, ಬಳಿಕ ಬಲ ತೊಳನ್ನು ಎಡಗಾಲನ್ನೂ ನೇರವಾಗಿ ಮಾಡಬೇಕು.ಆನಂತರ ಕತ್ತನ್ನು ಬಲಗಡೆಗೆ ತಿರುಗಿಸಿ, ಬಲಭುಜದ ಕಡೆಗೆ ದೃಷ್ಟಿಯನ್ನು ನೆಡಬೇಕು.

5. ತರುವಾಯ, ಮಂಡಿಗಳನ್ನು ಪರಸ್ಪರ ಸಮೀಪಕ್ಕೆ ತಂದಿರಿಸಿ, ಈ ಭಂಗಿಯಲ್ಲಿ ಸಾಮಾನ್ಯವಾಗಿ ಉಸಿರಾಟ ನಡೆಸುತ್ತ ಸುಮಾರು 30 60 ಸೆಕೆಂಡ್ಗಳಕಾಲ ನಡೆಸಬೇಕು. ಮುಂಡವನ್ನು ಪಕ್ಕಕ್ಕೆ ತಿರುಗಿಸುವ ಸಮಯದಲ್ಲಿ ಉಸಿರಾಟ ವೇಗದಿಂದ ನಡೆಯುತ್ತದೆ .

6. ಈಗ ಕಾಲಮೇಲಿನ ಬಿಗಿತವನ್ನು ಸಡಿಲಿಸಿ ಅವುಗಳನ್ನು ನೀಳವಾಗಿಸಿ,ಆ ಬಳಿಕ ಈ ಭಂಗಿಯನ್ನು ಇನ್ನೊಂದು ಕಡೆಗೂ ಅಭ್ಯಸಿಸಬೇಕು.ಇದನ್ನು ಸಾಧಿಸಲು ಮೇಲಿನ ವಿವರಣೆಯ ‘ಬಲ’ ‘ಎಡ’ ಎಂಬ ಪಾದಗಳೆಡೆಯಲ್ಲಿ ‘ಎಡ’ ‘ಬಲ’ ಪದಗಳನ್ನು ಕ್ರಮವಾಗಿ ಜೋಡಿಸಿ ಅದರಂತೆ ನಡೆಸಬೇಕು.

7. ಎರಡೂ ಕಡೆಯ ಭಂಗಿಗಳಲ್ಲಿ ನೆಲೆಸುವ ಕಾಲ ಸಮಯವಾಗಿರಬೇಕು.

 ಪರಿಣಾಮಗಳು

    ಈ ಆಸನದ ಭಂಗಿಯಲ್ಲಿ ಕಿಬ್ಬೊಟ್ಟೆಯೊಳಗಿನ ಅಂಗಗಳು ಒಂದು ಕಡೆ ಕುಗ್ಗು, ಇನ್ನೊಂದು ಕಡೆ ಹೀಗ್ಗುಗಳಿಗೊಳಗಾಗಿರುವುದರಿಂದ ಅವುಗಳಲ್ಲಿ ಚಟುವಟಿಕೆ ಹೆಚ್ಚುವುದು.ಬೆನ್ನೆಲುಬನ್ನು ಪಕ್ಕಗಳಿಗೆ ತಿರುಚುವುದರಿಂದ ಬೆನ್ನುನೋವು ಸೊಂಟ ನೋವು ಮತ್ತು ಕೀಲುನೋವುಗಳೆಲ್ಲವೂ ಕೊನೆಗಾಣುವವು. ಅಲ್ಲದೇ ಕತ್ತಿನಲ್ಲಿರುವ ಮಾಂಸಖಂಡಗಳು ಹೆಚ್ಚು ಬಲಗೊಂಡು, ಭುಜಗಳ ಚಲನವಲನಗಳ ಸಮವಾಗುವವು, ಈ ಆಸನವನ್ನು ಕ್ರಮವಾಗಿ ಅಭ್ಯಸಿಸಿದಲ್ಲಿ ಮೂತ್ರಪಿಂಡ ಮತ್ತು ಮೂತ್ರಕೋಶಗಳು ಅಕ್ರಮವಾಗಿ ಬೆಳೆಯುವುದಿಲ್ಲ. ಇದು ಅಲ್ಲದೆ ಬೆನ್ನೆಲುಬು ಅತ್ಯಂತವಾಗಿ ತಿರುಚಿಗೆ ಒಳಪಡುವ ಪರಿಪೂರ್ಣ ಮತ್ಸ್ಯೇಂದ್ರಾಸನವನ್ನು ಮತ್ತು ಸಾಧಿಸಬೇಕಾದರೆ ಈ ಆಸನವು ಬಹಳ ಸಹಕರಿಯಾಗಿದೆ.