ಮನೆ ಯೋಗಾಸನ ಅರ್ಧ ಮತ್ಸ್ಯೇಂದ್ರಾಸನ

ಅರ್ಧ ಮತ್ಸ್ಯೇಂದ್ರಾಸನ

0

 ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಕುಳಿತು, ಮುಂಗಡೆಗೆ ಕಾಲುಗಳನ್ನು ನೀಳವಾಗಿ ಚಾಚಿಡಬೇಕು.

Join Our Whatsapp Group

2. ಬಳಿಕ ಎಡ ಮಂಡಿಗಳನ್ನು ಭಾಗಿಸಿ,ಎಡಪಾದವನ್ನು ಬಲತೊಡೆಯ ಮೂಲಕ್ಕೆ ಸೇರಿಸಿ, ಎಡಹಿಮ್ಮಡಿಯ ಹೊಕ್ಕಳಿನ ಪ್ರದೇಶವನ್ನು ಒತ್ತುವಂತಿರಬೇಕು.

3. ಆಮೇಲೆ,ಬಲಮಡಿಯನ್ನು ಮಂಡಿಸಿ, ಬಲಗಾಲನ್ನು ನೆಲದಿಂದ ಮೇಲೆತ್ತಿ, ಅದನ್ನು ಎಡ ತೊಡೆಯ ಹೊರಬದಿಯ ಬಳಿಯಲ್ಲಿಡಬೇಕು ಆಗ ಬಲಗಿಣ್ಣಿನ ಹೊರಬದಿಯ ನೆಲದಮೇಲಿರುವ ಎಡತೊಡೆಯ ಹೊರಬದಿಯನ್ನು ಹುಟ್ಟುತ್ತದೆ ಈಗ ಎರಡು ಮೂರು ಸಲ ಉಸಿರಾಟ ನಡೆಸಬೇಕು.

4. ಅನಂತರ, ಉಸಿರನ್ನು ಹೊರಕ್ಕೆಬಿಟ್ಟು ಮುಂಡವನ್ನು 90 ಡಿಗ್ರಿಗಳಷ್ಟು ಬಲಗಡೆಗೆ ತಿರುಗಿಸಿ, ಬಲಭಜವು ಎಡಮಂಡಿಯ ಮೇಲೆ ಬರುವಂತೆ ಮಾಡಬೇಕು. ಎಡಕಂಕುಳಿಗೂ ಬಲತೊಡೆಗೂ  ನಡುವೆ ಸ್ಥಳ ಬಿಡದಂತಿರಿಸಿ. ಬಲಪಾದವನ್ನು ಎಡಗೈಯಿಂದ ಹಿಡಿದುಕೊಳ್ಳಬೇಕು.

5. ಹಾ ಬಳಿಕ, ಬಲಗೈಯನ್ನು ಮೊಣಕೈಎಡೆ ಬಗ್ಗಿಸಿ,ಬೆನ್ನ ಹಿಂದೆ ಅದನ್ನು ಬೀಸಿ, ಅದರ ಹಿಂಬದಿಯಲ್ಲಿ ಇರಿಸಬೇಕು.

6. ತರುವಾಯ, ಕತ್ತನ್ನು ಬಲಗಡೆಗೆ ತಿರುಗಿಸಿ, ಗದ್ದವನ್ನು ಮೇಲೆತ್ತಿ, ಹುಬ್ಬಿನ ನಡುತಾಣದಲ್ಲಾಗಲಿ, ಇಲ್ಲವೇ ಮೂಗಿನ ತುದಿಯಲ್ಲಾಗಲಿ ದೃಷ್ಟಿಯನ್ನು ನಡೆಸಬೇಕು.

7. ಈ ಭಂಗಿಯಲ್ಲಿ ತನ್ನ ಶಕ್ತಿಗಳವಡಿಸಿಕೊಂಡು 30 – 60 ಸೆಕೆಂಡ್ಗಳ ಕಾಲ ನೆಲೆಸಬೇಕು.ಆಗ ಉಸಿರಾಟದ ವೇಗವು ಹೆಚ್ಚಾಗಿರುತ್ತದೆಯಾಗಿ ಅದನ್ನು ಸಾಮಾನ್ಯ ಉಸಿರಾಟದ ಸ್ಥಿತಿಗೆ ತರಬೇಕು.

8. ಇದಾದಮೇಲೆ, ಬಲಪಾದದ ಮೇಲಿನ ಬಂಧವನು ಸಡಿಲಿಸಿ, ಅದನ್ನು ಎಡತೊಡೆಯ ಮೇಲ್ಗಡೆಗೆ ಎತ್ತಿ,ಬಲಗಾಲನ್ನು ನೆಟ್ಟಗೆ ಹಿಗ್ಗಿಸಿಡಬೇಕು. ಆ ಬಳಿಕ, ಎಡಗಾಲನ್ನು ಸಡಿಲಿಸಿ, ಅದನ್ನು ನೇರವಾಗಿ ಚಾಚಿಸಬೇಕು.

9. ಆ ಬಳಿಕ ಇನ್ನೊಂದು ಕಡೆಯೂ ಇದೇ ಭಂಗಿಯನ್ನು ಅಭ್ಯಸಿಸಿ ಅಷ್ಟೇ ಕಾಲ ನಿಲ್ಲಿಸಿ, ವಿಶ್ರಾಂತಿ ಪಡೆಯಬೇಕು.

 ಪರಿಣಾಮಗಳು

    ಈಆಸನವು ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ ಒಳ್ಳೆಯ ವ್ಯಾಯಾಮ ಕಲ್ಪಿಸಿ. ಅವುಗಳನ್ನು ಆರೋಗ್ಯ ಸ್ಥಿತಿಯಲ್ಲಿಡುವುದು.ಅಲ್ಲದೆ ಇದು ಬೆನ್ನಲುವಿನ ಚಟುವಟಿಕೆಯನ್ನು ಮೂಡಿಸಿ. ಅದರಲ್ಲಿ ಸ್ಥಿತಿಸ್ಥಾಪಕತ್ವನ್ನು ಹೆಚ್ಚಿಸುತ್ತದೆ. ಈ ಆಸನವು ಪರಿಪೂರ್ಣ ಮತ್ಸ್ಯೇಂದ್ರಾಸನದ ಅಭ್ಯಾಸಕ್ಕೆ ಪೂರ್ವಭಾವಿಯಾಗಿ ಸಿದ್ದಗೊಳ್ಳುತ್ತದೆ.