ಮದ್ದೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜೆಡಿಎಸ್ ಪಕ್ಷದಲ್ಲಿ ಯಾರು ಗಂಡಸರು ಇಲ್ಲವೇ ಅಭ್ಯರ್ಥಿಗಳು ಇಲ್ಲವೆ, ಕಾರ್ಯಕರ್ತರೇ ಇಲ್ಲವೇ ಎಂದು ಶಾಸಕ ಕೆ.ಎಂ.ಉದಯ್ ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಕುಟುಕಿದರು.
ಮದ್ದೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾಕೆ ಬೇರೆ ಯಾವುದೋ ಜಿಲ್ಲೆಯವರು ಬರಬೇಕು,ಜೆಡಿಎಸ್ ಪಕ್ಷದಲ್ಲಿ ಸಮರ್ಥರು ಇಲ್ವಾ,ಕಾರ್ಯಕರ್ತರು ಇಲ್ವಾ,ಯಾಕೆ ಲೀಡರ್ ಮಕ್ಕಳೇ ಬರಬೇಕಾ ಲೀಡರ್ ಕುಟುಂಬಸ್ಥರೇ ಬರಬೇಕಾ ಸ್ಥಳೀಯರಿಗೆ ಅವಕಾಶ ಕೊಡಿ ಎಂದು ಪರೋಕ್ಷವಾಗಿ ಸವಾಲ್ ಹಾಕಿದರು.
ನಮ್ಮಲ್ಲಿ ಇರುವವರು ಸಮರ್ಥರಿಲ್ಲವೇ ಇನ್ನಾದರೂ ಜಿಲ್ಲೆಯ ಸಮರ್ಥ ನಾಯಕರಿಗೆ ಅವಕಾಶ ಕೊಡಲೆಂದು ಪ್ರಶ್ನಿಸಿದರಲ್ಲದೆ ನಮಗೆ ಯಾರೇ ಬಂದರೂ ಚಿಂತೆ ಇಲ್ಲ ಸಮರ್ಥವಾಗಿ ಅಭ್ಯರ್ಥಿಯನ್ನು ನಿಲ್ಲಿಸಿ ಹೆಚ್ಚಿನ ಮತಗಳಿಂದ ಗೆಲ್ಲಿಸಿವುದಾಗಿ ಹೇಳಿದರು.
ಕ್ಷೇತ್ರ ಪ್ರವಾಸ ಕೈಗೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರು ಕಳೆದ ಐದು ವರ್ಷದಿಂದ ಎಲ್ಲಿ ಹೋಗಿದ್ದರು ಜನಸೇವೆ ಮಾಡುವವರು ನಿರಂತರವಾಗಿ ಇರಬೇಕು ಚುನಾವಣೆ ಸಂದರ್ಭದಲ್ಲಿ ಬಂದು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವರು.ಜಿಲ್ಲೆಯ ಜನರು ದಡ್ಡರ ಕಳೆದ ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಸೂಕ್ತ ಫಲಿತಾಂಶ ನೀಡಿದ್ದರು ಎಚ್ಚರಗೊಳ್ಳದ ಇವರು ಮತ್ತೊಮ್ಮೆ ಸ್ಪರ್ಧೆಗೆ ಇಳಿಯುವ ಬಯಕೆ ಮಾಡಿರುವುದು ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನಾವು ಯಾವುದೇ ಹಣ ಇರುವ ವ್ಯಕ್ತಿಗೆ ಮಣೆ ಹಾಕಿಲ್ಲ ಚುನಾವಣೆ ಮಾಡುವುದು ಕಾರ್ಯಕರ್ತರು ಜನರು ಮತ ಹಾಕಿ,ಪಕ್ಷವನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಲೆಂದು.ಬರಗಾಲ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಮತದಾರರು ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜ್ಯಕ್ಕೆ ಕೊಡಬೇಕಾಗಿರುವ ಬಾಕಿ ಹಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದು ರಾಜ್ಯಕ್ಕೆ ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಹೇಳಿದ್ದು ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿಯವರು ಮಾಡುತ್ತಿದ್ದು ಕಳೆದ ಹಲವು ತಿಂಗಳಿಂದಲೂ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ರವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಭೈರೇಗೌಡ ರವರು ಮನವಿ ಪತ್ರ ಸಲ್ಲಿಸಿದ್ದರು ಇದುವರೆಗೂ ಬಿಡುಗಡೆ ಮಾಡದೆ ತಾರತಮ್ಯವೆಸಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಬರಬೇಕಾಗಿ
ರುವ ಬಾಕಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.