ಪುರಾತನ ಕಾಲದಿಂದಲೂ ಹೃದಯ ರಕ್ಷಣೆಗೆ ಬಳಕೆಯಾಗುತ್ತಿರುವ ವೃಕ್ಷವಿದು. ಕನ್ನಡದಲ್ಲಿ “ಹೊಳೆಮತ್ತಿ” ಎನ್ನುತ್ತಾರೆ. ಆಂತರಿಕ ಅಂಗಾಂಗಗಳ ರಕ್ಷಕ ಹೃದಯದ ಕೆಲಸಗಳನ್ನು ಸುಗಮಗೊಳಿಸುತ್ತದೆ.
ಅಶೋಕ: ರಾಮಾಯಣದಲ್ಲಿ ವರ್ಣಿತವಾಗಿರುವ ಅಶೋಕ ಒಂದು ಸುಂದರವಾದ ವಿಶಾಲ ವೃಕ್ಷ ಬಹಳ ಕಡಿಮೆಯಾಗಿದೆ ಮಹಿಳೆಯರು ಆರೋಗ್ಯಕ್ಕೆ ಬಹಳ ಸಹಕಾರಿ ಗರ್ಭಕೋಶವನ್ನು ಕಾಪಾಡುತ್ತದೆ ಊತನಿವಾರಕ.
ಅಶ್ವಗಂಧ ಚೂರ್ಣ: ಆಯುರ್ವೇದದಲ್ಲಿ ಇದೊಂದು ರಾಸಾಯನ ವಸ್ತು ದೇಹವನ್ನು ಕಾಪಾಡಿ, ಪುಷ್ಟಿಗೊಳಿಸುವ ದ್ರವ್ಯಗಳೇ ರಸಾಯನ ದೇಹದ ಎಲ್ಲಾ ಅಂಗಗಳಿಗೆ ಒಳ್ಳೆಯದು ಮೆದುಳು ಮತ್ತು ನರಮಂಡಲವನ್ನು ಪ್ರಶಾಂತವಾಗಿಡಲು ದೇಹಕ್ಕೆ ಶಕ್ತಿಒದಗಿಸಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಕಾಮತೇಜಕ್ಕವು ಹೌದು, ಉದ್ವಿಗ್ನಂತೆ ನಿವಾರಕ ನೋವು ನಿವಾರಕ
ಸಂಧಿವಾತ :ಶುಂಠಿ ಚೂರ್ಣ, ಕಾಳಮೆಣಸು ಚೂರ್ಣ, ಮೆಂತ್ಯ ಚೂರ್ಣ, ಅಶ್ವಗಂಧ ಚೂರ್ಣ ತಲಾ 50 ಗ್ರಾಂ ಇಂದ ತೆಗೆದುಕೊಂಡು ಮಿಶ್ರ ಮಾಡಬೇಕು. ಈ ಮಿಶ್ರಣವನ್ನು ಒಂದು ಚಮಚೆ ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿ ಕುದಿಸಬೇಕು ನೀರು ಅರ್ಧ ಲೋಟದಷ್ಟು ಆದಾಗ ಕಲ್ಲು ಸಕ್ಕರೆ ಪುಡಿ ಸೇರಿಸಿ ಕುಡಿಯಬೇಕು ಇದನ್ನು ದಿನಕ್ಕೆ ಎರಡು ಸಲ ಮಾಡಬೇಕು ಇದರಿಂದ ಕಾಲು ನೋವು ಮಂಡಿ ನೋವು ಸಂಧಿವಾದ ನಿಯಂತ್ರಣಕ್ಕೆ ಬರುತ್ತದೆ ಈ ಸಮಸ್ಯೆಗಳೊಂದಿಗೆ ಮಧುಮೇಹ ಇರುವವರು ಕಲ್ಲು ಸಕ್ಕರೆ ಸೇವಿಸದೆ ಕಷಾಯವನ್ನು ಕುಡಿಯಬೇಕು.
ತಾರೆ (ಶಾಂತಿ) ಬಹೇಡ : ಆಯುರ್ವೇದ ನೂರಾರು ಮದ್ದುಗಳಲ್ಲಿ ಬಹಳ ತ್ರಿಫಲಾದಲ್ಲಿ (ತಾರೆ, ಅಳಲೆ, ನೆಲ್ಲಿ) ಒಂದು. ದೇಹದ ಎಲ್ಲಾ ಅಂಗಗಳ ಆರೋಗ್ಯ ರಕ್ಷಕ ದೇಹದ ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸುತ್ತದೆ ಅದರಲ್ಲೂ ಮುಖ್ಯವಾಗಿ ಉಸಿರಾಟದ ತೊಂದರೆಗಳು ಮತ್ತು ಜೀರ್ಣಾಂಗ ವ್ಯೂಹದ ಸಮಸ್ಯೆಗಳಿಗೆ ಬಹು ಒಳ್ಳೆಯದು ದೇಹದ ನಂಜನ್ನು ಹೊರ ಹಾಕುತ್ತದೆ.
ಬೃಂಗರಾಜ ಚೂರ್ಣ : ನಮ್ಮ ದೇಶದ ಎಲ್ಲೆಡೆ ಬೆಳೆಯುವ ಪುಟ್ಟ ಗಿಡವಿದು. ಬೃಂಗರಾಜ ಎಂದರೆ “ತಲೆಕೂದಲಿನ ರಾಜ”ನೆಂದು ಅರ್ಥ ಹೆಸರಿಗೆ ತಕ್ಕಂತೆ ತಲೆಕೂದಲ ಆರೋಗ್ಯಕ್ಕೆ ಸಹಕಾರಿ ಬೃಂಗರಾಜ ತೈಲ ಎಲ್ಲರಿಗೂ ತಿಳಿದಿರುವುದೇ ಅಲ್ಲದೇ ಇದು ಪಿತ್ತಕೋಶದ ರಕ್ಷಕವು ಹೌದು. ತಡೆಕೂದಲಿನ ಸಮೃದ್ಧ ಬೆಳವಣಿಗೆಗೆ ನೆರವಾಗುತ್ತದೆ.
ಅಕಾಲ ನೆರೆ ಕೂದಲು ಉದುರುವುದು ಕೂದಲು ಸರಿಯಾಗಿ ಬೆಳೆಯದಿರುವುದು ಇಂತಹ ಸಮಸ್ಯೆಗಳು
ತಲೆ ಕೂದಲಿನ ಸಮಸ್ಯೆಗಳು : ಬೃಂಗರಾಜ ಚೂರ್ಣ, ಅಮೃತಬಳ್ಳಿ ಚೂರ್ಣ, ಬೆಟ್ಟದ ನೆಲ್ಲಿಕಾಯಿ ಮೂರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬೇರೆ ಬೇರೆಯಾಗಿ ಜಜ್ಜಿ ರಸವನ್ನು ತೆಗೆಯಬೇಕು ಇದರ ಕಾಲು ಪ್ರಮಾಣದಷ್ಟು ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆ ಈ ರಸಗಳ ಜೊತೆ ಸೇರಿಸಿ ಬೇಯಿಸಬೇಕು ನೀರಿನಂಶವೆಲ್ಲ ಇಂಗಿ ಹೋದ ನಂತರ ಎಣ್ಣೆಯನ್ನು ಶೋಧಿಸಿ ಸಂಗ್ರಹಿಸಬೇಕು ಇದು ಒಳ್ಳೆಯ ಕೇಶವ ವರ್ಗ ತೈಲವಾಗಿದ್ದು ಇದರ ಬಳಕೆಯಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ.
ನೆಲನೆಲ್ಲಿ ಚೂರ್ಣ : ಇದು ಸಹ ಒಂದು ಪುಟ್ಟ ಗಿಡ. ಗಿಡದ ಎಲೆಗಳ ಕೆಳಗೆ ನಿಲ್ಲಿಯನ್ನು ಹೋಲುವ ಪುಟ್ಟ ಕಾಳುಗಳು ಕಾಣುತ್ತದೆ.
ನಮ್ಮ ದೇಶದ ಗ್ರಾಮೀಣ ವೇದಗಳಿಗೆಲ್ಲ ಚಿರಪರಿಚಿತವಾದ ಗಿಡ ಮುಖ್ಯವಾಗಿ ಪಿತ್ತಾಶಯದ ಆರೋಗ್ಯಕ್ಕೆ ಕಾಮಾಲೆ ರೋಗದ ವಿರುದ್ಧದ ಹೋರಾಟಕ್ಕೆ ಬಹಳ ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ ರುಚಿಯಲ್ಲಿ ಸ್ವಲ್ಪ ಕಹಿ ಇದ್ದರೂ ಗುಣದಲ್ಲಿ ಬಹಳ ಸಿಹಿ.
ಆಯುರ್ವೇದದ ಪ್ರಮುಖ ಮುದ್ದಗಳಲ್ಲಿ ನೆಲನಲ್ಲಿ ಅಗತ್ಯ ಬೇಕು ದೇಹವನ್ನು ತಂಪಾಗಿರುತ್ತದೆ. ದೇಹದೊಳಗಿನ ಮಾಲಿನ್ಯಗಳನ್ನು ತೊಡೆದುಹಾಕುತ್ತದೆ.
ದೇಹದ ಪ್ರಮುಖ ಅಂಗಾಂಶದ ಪಿತಾಶದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡ ನಿಯಂತ್ರಕ. ಮೂತ್ರಪಿಂಡದ ಆರೋಗ್ಯ ಹಿತಕರ
ಜಲಬ್ರಾಹ್ಮಿ ಚೂರ್ಣ : ದೇಶದ ಪ್ರಸಿದ್ಧವಾದ ಮೆದುಳಿನ ಟಾನಿಕ್ ಗಿಡ ಮೆದುಳು ಮತ್ತು ನರಮಂಡಲದ ಸರವಾಂಗಿನ ಆರೋಗ್ಯಕ್ಕೆ ಹಿತಕರ ಈ ಪುಟ್ಟ ಗಿಡದಲ್ಲಿ ಸಮೃದ್ಧವಾಗಿರುವ ಬೈಕೋಸೈಡ್ ಗಳು ಅತ್ಯಂತ ಉಪಕಾರಿ ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ.