ಚಾಮರಾಜನಗರ: ಇಲ್ಲಿನ ಭೋಗಾಪುರ ಗ್ರಾಮದಲ್ಲಿ ನಡೆದ ಲಘು ವಿಮಾನ ದುರಂತದಲ್ಲಿ ಗಾಯಗೊಂಡ ಇಬ್ಬರು ಪೈಲಟ್ ಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಬಂದ ವಾಯುಸೇನೆ ಹೆಲಿಕಾಪ್ಟರ್ ನಲ್ಲಿ ಇಬ್ಬರನ್ನೂ ಕರೆದುಕೊಂಡು ಹೋಗಲಾಗಿದೆ.
ವಿಮಾನದಲ್ಲಿದ್ದ ತರಬೇತುದಾರ ವಿಂಗ್ ಕಮಾಂಡರ್ ತೇಜಪಾಲ್ (50) ಮತ್ತು ತರಬೇತಿ ಪಡೆಯುತ್ತಿದ್ದ ಭೂಮಿಕಾ (28) ಅವರು ಪತನದ ವೇಳೆ ಪ್ಯಾರಚೂಟ್ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ …ಚಾಮರಾಜನಗರದಲ್ಲಿ ಜೆಟ್ ವಿಮಾನ ಪತನ
ವಿಂಗ್ ಕಮಾಂಡರ್ ತೇಜಪಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಎಸ್ಪಿ ಉದೇಶ ತಿಳಿಸಿದರು.
ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಇಂದು ಮಧ್ಯಾಹ್ನ 12 ಗಂಟೆಯ ವೇಳೆ ಭೋಗಾಪುರ ಗ್ರಾಮದ ಬಳಿ ಪತನವಾಗಿದೆ.