ಮನೆ ಅಪರಾಧ ರೈತರಿಂದ ಟ್ರ್ಯಾಕ್ಟರ್ ಬಾಡಿಗೆ ಪಡೆದು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯ ಬಂಧನ

ರೈತರಿಂದ ಟ್ರ್ಯಾಕ್ಟರ್ ಬಾಡಿಗೆ ಪಡೆದು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯ ಬಂಧನ

0

ಮೈಸೂರು: ರೈತರಿಂದ ಟ್ರ್ಯಾಕ್ಟರ್ ​ಗಳನ್ನು ಬಾಡಿಗೆ ಪಡೆದುಕೊಂಡು, ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ಹನಗೂಡು ಹೊಬಳಿಯ ಗಾಣನಕಟ್ಟೆ ನಂದೀಶ್ ರೈತರಿಂದ ಬಾಡಿಗೆಯ ನೆಪದಲ್ಲಿ ಟ್ರ್ಯಾಕ್ಟರ್​ಗಳನ್ನು ಪಡೆದು ಬಳಿಕ ಖಾಸಗಿ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದನು.

ಹೀಗೆ ಹಲವು ರೈತರ ಬಳಿ ಟ್ರ್ಯಾಕ್ಟರ್​ ಗಳನ್ನು ಬಾಡಿಗೆ ಕೊಡುವ ನೆಪದಲ್ಲಿ ಪಡೆದುಕೊಂಡು ಬೇರೆಯವರ ಬಳಿ ಒತ್ತೆ ಇಡುತ್ತಿದ್ದ ನಂದೀಶ್, ಎನ್.ಎಸ್.ತಿಟ್ಟು ಬಡಾವಣೆಯ ರಾಮು ಎಂಬುವವರು ಶೋರೂಮ್ ​ನಿಂದ ಟ್ರ್ಯಾಕ್ಟರ್ ಖರೀದಿಸಿದ್ದರು. ಮಾಸಿಕ ಕಂತು ಕಟ್ಟಲಾಗದೇ ಪರಾದಾಡುತ್ತಿದ್ದರು. ಈ ವೇಳೆ, ಬಂದ ನಂದೀಶ್ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಕೇಳಿದ್ದ. ಮಾಸಿಕ ಕಂತನ್ನು ತಾನೆ ಕಟ್ಟಿಕೊಂಡು ಹೋಗುತ್ತೇನೆ ಎಂದು ಹೇಳಿ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದ. ಆದರೆ, ಕೆಲವಾರು ದಿನಗಳ ಬಳಿಕ ಮಾಸಿಕ ಕಂತು ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯವರು ಮನೆಗೆ ಬಂದಾಗ ರಾಮುಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಂದೀಶ್ ಪತ್ತೆಗಾಗಿ ಹೋದಾಗ ಈ ತರಹದ ಹಲವಾರು ಜನರು ಮೋಸಕ್ಕೆ ಬಲಿಯಾಗಿರುವುದು ತಿಳಿದಿದೆ. ಆರೋಪಿ ನಂದೀಶ್​ ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಮಾಹಿತಿ ಹೊರಬಂದಿದೆ.

ರೈತ ರಾಮುಗೆ ಮಾತ್ರವಲ್ಲದೇ, ಪೆಂಜಹಳ್ಳಿ ಗ್ರಾಮದ ರತ್ನಮ್ಮ, ಕೊತ್ತೆಗಾಲದ ರವಿ ಸೇರಿದಂತೆ ಹಲವು ರೈತರ ಬಳಿ ಹೀಗೆ ಟ್ರ್ಯಾಕ್ಟರ್ ​ಗಳನ್ನು ಬಾಡಿಗೆ ಪಡೆದು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ಎಂಬ ವಿಷಯ ಪೊಲೀಸರಿಗೆ ತಿಳಿದಿದೆ.

ಪೊಲೀಸರು, ಆರೋಪಿ ನಂದೀಶ್ ಗಿರವಿ ಇಟ್ಟ ಟ್ರ್ಯಾಕ್ಟರ್​ ಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ನಾಲ್ವು ಟ್ರ್ಯಾಕ್ಟರ್ ​ಗಳಿಗೆ ಮಾತ್ರ ದಾಖಲಾತಿ ಇದೆ. ನಾಲ್ಕು ಜನರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ಟ್ರ್ಯಾಕ್ಟರ್ ​ಗಳು ದಾಖಲಾತಿ ಇಲ್ಲದೇ ನೋಂದಣಿ ಸಹ ಆಗದೇ ಇರುವುದರಿಂದ ಅವುಗಳನ್ನು ಪೊಲೀಸ್ ಠಾಣೆಯು ಮುಂದೆಯೇ ನಿಲ್ಲಿಸಲಾಗಿದೆ.