ಮನೆ ಅಪರಾಧ ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ್ದ ಆರೋಪಿಗಳ ಬಂಧನ: 26 ಯುವತಿಯರ ರಕ್ಷಣೆ

ಯುವತಿಯರನ್ನು ವೇಶ್ಯಾವಾಟಿಕೆ ದೂಡಿದ್ದ ಆರೋಪಿಗಳ ಬಂಧನ: 26 ಯುವತಿಯರ ರಕ್ಷಣೆ

0

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನ ಕರೆತಂದು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಸಿಸಿಬಿ ಪೊಲೀಸರು 26 ಯುವತಿಯರನ್ನು ರಕ್ಷಣೆ ಮಾಡಿದ್ದು, 9 ಜನ ಆರೋಪಿಗಳನ್ನು ಬಂಧಸಿದ್ದಾರೆ.

ಆರೋಪಿಗಳು ಕೆಲಸ ಕೊಡಸುವ ನೆಪದಲ್ಲಿ ಹೊರ ರಾಜ್ಯದಿಂದ ಯುವತಿಯರನ್ನ ಕರೆತರುತ್ತಿದ್ದರು. ಯುವತಿಯರನ್ನು ನಗರದ ಪಿಜಿಗಳಲ್ಲಿ ಇರಿಸಿ ಆರೋಪಿಗಳು ವೇಶ್ಯಾವಾಟಿಕೆಗೆ ದೂಡುತ್ತಿದ್ದರು.

ಈ ವಿಷಯ ತಿಳಿದ ಸಿಸಿಬಿ ಪೊಲೀಸರು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಕಡೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ದೆಹಲಿ ಮೂಲದ ನಾಲ್ವರು, ಮುಂಬೈ ಮೂಲದ 9, ಪಶ್ಚಿಮ ಬಂಗಾಳ ಮೂಲದ 8 ಹಾಗೂ ಛತ್ತೀಸ್ ​​ಗಡ ಮೂಲದ ಓರ್ವ ಯುವತಿಯನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮೆಟ್ರೊ ಕಾಮಗಾರಿ: 203 ಮರಗಳ ತೆರವು, 45 ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್ ಅಸ್ತು
ಮುಂದಿನ ಲೇಖನಮೈಸೂರು: ಪ್ರಾಯೋಗಿಕವಾಗಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ