ಕೊಳ್ಳೇಗಾಲ: ನಗರದ ಅರಣ್ಯ ಸಂಚಾರ ದಳದ ಪೊಲೀಸರು, ಗ್ರಾಮಾಂತರ ಪೊಲೀಸರು ಜಂಟಿ ದಾಳಿ ನಡೆಸಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಮದ್ದು ಗುಂಡುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಬಂಧಿಸಿದ್ದಾರೆ.
ತಾಲೂಕಿನ ಜಾಗೈರಿಯ ಸಿ.ಆರ್.ನಗರದ ನಿವಾಸಿ ಸಗಯ್ ರಾಜ್(47) ಬಂಧಿತ ಆರೋಪಿ.
ಈತನಿಂದ 9 ಸಿಡಿಮದ್ದು ಗುಂಡು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ತಾಲೂಕಿನ ಕೊತ್ತನೂರು ಕೆರೆ ಏರಿ ಮೇಲೆ ಸೈಕಲ್ ನಲ್ಲಿ ಅಕ್ರಮವಾಗಿ ಸಿಡಿಮದ್ದು ಗುಂಡು ಇಟ್ಟುಕೊಂಡು ಸಾಗಣೆ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿ ಠಾಣೆಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Saval TV on YouTube