ರಾಜಸ್ಥಾನ: ರಾಜಸ್ಥಾನದ ಪಾಲಿಯಲ್ಲಿ ವ್ಯಕ್ತಿಯನ್ನು ಪತ್ನಿಯ ಪ್ರಿಯಕರನೇ ಕೊಲೆ ಮಾಡಿ, ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತಿಟ್ಟಿ ಪ್ರಕರಣ ಬೆಳಕಿಗೆ ಬಂದಿದೆ.
ಮದನಲಾಲ್ ಎಂದು ಗುರುತಿಸಲಾದ ಆರೋಪಿ ಜೋಗೇಂದ್ರ(33)ನನ್ನು ಕೊಂದು ಮೃತದೇಹವನ್ನು ಕತ್ತರಿಸಿ ಸಮೀಪದ ಕಾಡಿನಲ್ಲಿ ಹೂತಿಟ್ಟಿದ್ದ. ಮನೆಯಿಂದ 100 ಮೀಟರ್ ದೂರದಲ್ಲಿರುವ ತೋಟದಿಂದ ತಲೆ, ಕೈ ಮತ್ತು ಕಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಾಧಿ ಸ್ಥಳದ ಮೇಲೆ ಮಾವಿನ ಸಸಿ ನೆಟ್ಟಿದ್ದ ಆರೋಪಿಯನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜುಲೈ 13 ರಂದು ಜೋಗೇಂದ್ರನ ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಬಂಧನ ನಡೆದಿದೆ. ದೂರಿನ ಪ್ರಕಾರ, ಜುಲೈ 11 ರಂದು ಜೋಗೇಂದ್ರ ಮನೆಯಿಂದ ಹೋಗಿದ್ದು, ಅನಂತರ ಹಿಂದಿರುಗಿಲ್ಲ ಎಂದು ಅವರು ದೂರಿನಲ್ಲಿ ಹೇಳಿದ್ದು ಮದನ್ ಲಾಲ್ ಮೇಲೆ ಶಂಕೆ ಇರುವುದಾಗಿ ತಿಳಿಸಿದ್ದರು.
ತಕ್ಷಣ ಪೊಲೀಸರು ತನಿಖೆ ನಡೆಸಿ ಮದನ್‌ಲಾಲ್ ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮದನ್ ಲಾಲ್ ತಾನು ಜೋಗೇಂದ್ರನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದು, ಆತನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.