ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ನಲ್ಲಿ ಕೇವಲ 53 ಎಸೆತಗಳಲ್ಲಿ 117 ರನ್ ಸಿಡಿಸಿ ಅರ್ಶಿನ್ ಕುಲ್ಕರ್ಣಿ ಮಿಂಚಿದ್ದಾರೆ. ಕೇವಲ 46 ಎಸೆತಗಳಲ್ಲಿ ಇವರು ಶತಕ ಪೂರೈಸಿದರು. ಎಂಪಿಎಲ್ ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಬ್ಯಾಟರ್ ಇವರಾಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಈಗ ಶತಕ ಸಿಡಿಸುವುದು ದೊಡ್ಡ ಸಾಹಸವೇನು ಅಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ಮೇಲೆ ಇದು ಮಾಮೂಲಾಗಿ ಬಿಟ್ಟಿದೆ. ಯುವ ಆಟಗಾರರು ಲೀಲಜಾಲವಾಗಿ ಸೆಂಚುರಿ ಬಾರಿಸುತ್ತಿದ್ದಾರೆ. ಅದೇರೀತಿ ಸದ್ಯ ಸಾಗುತ್ತಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನಲ್ಲಿ ಕೂಡ ಅರ್ಶಿನ್ ಕುಲ್ಕರ್ಣಿ ಎಂಬ ಬ್ಯಾಟರ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ನಲ್ಲಿ ಕೇವಲ 53 ಎಸೆತಗಳಲ್ಲಿ 117 ರನ್ ಸಿಡಿಸಿ ಅರ್ಶಿನ್ ಕುಲ್ಕರ್ಣಿ ಮಿಂಚಿದ್ದಾರೆ. ಕೇವಲ 46 ಎಸೆತಗಳಲ್ಲಿ ಇವರು ಶತಕ ಪೂರೈಸಿದರು. ಎಂಪಿಎಲ್ ನಲ್ಲಿ ಅತಿ ವೇಗವಾಗಿ ಸೆಂಚುರಿ ಸಿಡಿಸಿದ ಬ್ಯಾಟರ್ ಇವರಾಗಿದ್ದಾರೆ.
ಪುಣೇರಿ ಬಪ್ಪಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರ ಮೋಡಿ ಮಾಡದ ಅರ್ಶಿನ್ ಕುಲ್ಕರ್ಣಿ ಬೌಲಿಂಗ್ ನಲ್ಲಿ ಕೂಡ 21 ರನ್ಗೆ 4 ವಿಕೆಟ್ ಕಿತ್ತು ಮಾರಕವಾದರು. ಇವರ ಬೌಲಿಂಗ್ ಸಹಾಯದಿಂದ ಈಗಲ್ ನಶಿಕ್ ಟೈಟಾನ್ಸ್ ತಂಡ 1 ರನ್ಗಳ ರೋಚಕ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಈಗಲ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು. ಅರ್ಶಿನ್ 13 ಸಿಕ್ಸರ್ ಮತ್ತು 3 ಫೋರ್ ಬಾರಿಸಿ 117 ರನ್ ಚಚ್ಚಿದರು. 13 ಸಿಕ್ಸರ್ ಮೂಲಕ 13 ಎಸೆತಗಳಲ್ಲಿ 78 ರನ್ ಸಿಕ್ಸ್ ಮೂಲಕವೇ ಬಂದವು.
ಟಾರ್ಗೆಟ್ ಬೆನ್ನಟ್ಟಿದ ಪುಣೇರಿ ತಂಡ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ರುತುರಾಜ್ ಗಾಯಕ್ವಾಡ್ 23 ಎಸೆತಗಳಲ್ಲಿ 50 ರನ್ ಚಚ್ಚಿದರು. ಆದರೆ, ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಕೊನೆಯ 6 ಎಸೆತಗಳಲ್ಲಿ ಪುಣೇರಿ ತಂಡಕ್ಕೆ ಗೆಲ್ಲಲು 6 ರನ್ ಗಳು ಬೇಕಾಗಿದ್ದವು. ಆದರೆ, ಅರ್ಶಿನ್ ಬೌಲಿಂಗ್ ನಲ್ಲಿ ಪುಣೇರಿ 5 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈಗಲ್ ಟೈಟಾನ್ಸ್ 1 ರನ್ ಗಳ ರೋಚಕ ಜಯ ಸಾಧಿಸಿತು.