ಮುಂಬಯಿ: ಬಾಲಿವುಡ್ ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ (57) ತಮ್ಮ ಸ್ಟುಡಿಯೋದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮುಂಬಯಿಯ ಕರ್ಜಾತ್ ಬಳಿಯ ಖಲಾಪುರ್ ರಾಯ್‌ಗಢ್‌ನಲ್ಲಿರುವ ಅವರ ಎನ್ ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅವರ ಸಾವಿನ ಸುದ್ದಿಯ ಕುರಿತು ಬಿಜೆಪಿಯ ಕರ್ಜಾತ್ ನ ಸ್ಥಳೀಯ ಶಾಸಕ ಮಹೇಶ್ ಬಾಲ್ಡಿ, “ನಿತಿನ್ ದೇಸಾಯಿ ಅವರ ಎನ್ ಡಿ ಸ್ಟುಡಿಯೋ ನನ್ನ ಕ್ಷೇತ್ರದಲ್ಲಿ ಬರುತ್ತದೆ. ಅವರಿಗೆ ಕಳೆದ ಕೆಲ ದಿನಗಳಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಈ ಕಾರಣದಿಂದ ಇಂದು ಬೆಳಗ್ಗೆ ಎನ್‌ಡಿ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಬಾಲಿವುಡ್ ನ ‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಮತ್ತು ‘ಲಗಾನ್’ ಸಿನಿಮಾಗಳಲ್ಲಿ ಅದ್ಧೂರಿ ಸೆಟ್ ಗಳ ವಿನ್ಯಾಸವನ್ನು ಮಾಡಿ ಖ್ಯಾತಿಯಾಗಿದ್ದರು. 20 ವರ್ಷದ ತನ್ನ ವೃತ್ತಿ ಜೀವನದಲ್ಲಿ ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
2005 ರಲ್ಲಿ, ಅವರು ಮುಂಬೈ ಸಮೀಪದ ಕರ್ಜತ್‌ನಲ್ಲಿ 52 ಎಕರೆ ಪ್ರದೇಶದಲ್ಲಿ ತಮ್ಮ ಎನ್ ಡಿ ಸ್ಟುಡಿಯೋವನ್ನು ತೆರೆದಿದ್ದರು. ಇವರ ಸ್ಟುಡಿಯೋದ ಪ್ರದೇಶದಲ್ಲಿ ʼಜೋಧಾ ಅಕ್ಬರ್ʼ, ʼಟ್ರಾಫಿಕ್ ಸಿಗ್ನಲ್ʼ ಶೋ ಬಿಗ್ ಬಾಸ್ ನಂತಹ ಶೋಗಳ ಶೂಟ್ ಆಗಿದೆ.