ಮನೆ ಕಾನೂನು ಆರ್ಯ ಸಮಾಜದ ಮದುವೆ ಪ್ರಮಾಣ ಪತ್ರ ಅಮಾನ್ಯ: ಸುಪ್ರೀಂ

ಆರ್ಯ ಸಮಾಜದ ಮದುವೆ ಪ್ರಮಾಣ ಪತ್ರ ಅಮಾನ್ಯ: ಸುಪ್ರೀಂ

0

ದೆಹಲಿ(Delhi): ಆರ್ಯ ಸಮಾಜವು ವಿತರಿಸುವ ಮದುವೆ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ ಹಾಗೂ ಪ್ರಮಾಣ ಪತ್ರಕ್ಕೆ ಕಾನೂನು ಬದ್ಧತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸ್ವಾಮಿ ದಯಾನಂದ ಸರಸ್ವತಿಯವರು 1985 ರಲ್ಲಿ ಸ್ಥಾಪಿಸಿದ ಆರ್ಯ ಸಮಾಜದಿಂದ ನೀಡಲಾಗುವ ಮದುವೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಬೇಕು ಎಂದು ಕೋರ್ಟಿನಲ್ಲಿ ವಾದಿಸಲಾಗಿತ್ತು.

ತಮ್ಮ ಬಾಲಕಿಯನ್ನು ಅಪಹರಿಸಿ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯ ಪೋಷಕರು ದೂರು ನೀಡಿದ್ದರು. ಆದರೆ ಯುವಕ ಆಕೆಯನ್ನು ಮದುವೆಯಾಗಲು ಸಂಪೂರ್ಣ ಹಕ್ಕು ಮತ್ತು ಕಾನೂನು ಬದ್ಧವಾಗಿ ತಾನು ಮದುವೆ ಆಗಿರುವುದಾಗಿ ಆತ ವಾದಿಸಿ ಮದುವೆ ಆಗಿರುವುದಕ್ಕೆ ಆರ್ಯ ಸಮಾಜದಿಂದ ಪ್ರಮಾಣಪತ್ರವನ್ನು ತೋರಿಸಿದ್ದ.

ನ್ಯಾಯಮೂರ್ತಿ ಅಜಿತ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆರ್ಯ ಸಮಾಜ ನೀಡುವ ಮದುವೆ ಪ್ರಮಾಣ ಪತ್ರಕ್ಕೆ ಮಾನ್ಯತೆಯಿಲ್ಲ ಬದಲಾಗಿ ಕೇವಲ ಸಂಬಂಧಪಟ್ಟ ಸಂಸ್ಥೆಗಳಿಂದ ನೀಡಿದ ಅಧಿಕೃತ ಪ್ರಮಾಣ ಪತ್ರಕಷ್ಟೇ ಮಾನ್ಯತೆ ನೀಡಲಾಗುವುದು ಎಂದಿದ್ದಾರೆ.