ಇದು ಒಂದು ಮರದ ಅಂಟು ಮೇಣ. ಈ ಮೇಣ ಅಡುಗೆಯ ವಸ್ತುವಾಗಿ ಮದ್ದಿಗಾಗಿ ಬಳಕೆಯಲ್ಲಿದೆ, ಹಾಗಿದ್ದರೆ ಅಂದಿನಿಂದ ಇಂದಿನವರೆಗೆ ಇಂಗಿನ ವ್ಯಾಪಾರ, ವಹಿವಾಟು, ಸಾಗಾಣಿಕೆ, ಮಾರುಕಟ್ಟೆ, ಪ್ಯಾಕಿಂಗ್, ನಿರ್ವಹಣೆ ವ್ಯವಸ್ಥೆ ಬಗ್ಗೆ ನೀವೇ ಊಹಿಸಿರಿ ಅಷ್ಟೊಂದು ಉಪಕಾರಿ ವಸ್ತುವಾಗಿರುವುದರ ಹಿನ್ನೆಲೆಯಿಂದಲೇ ಇಂಗು ಜನಪ್ರಿಯತೆ. ಹಿಂದಿನಂತೆ ಇದೆ, ತಗ್ಗಿಲ್ಲ. ಅತಿ ದುಬಾರಿ ಬೆಲೆ ತೆತ್ತಾದರೂ ಗೃಹಿಣಿಯರು ಅಡುಗೆಗೆ ಬಳಸುವುದು.
ಕಾಬೂಲು, ಆಫ್ಘಾನಿಸ್ತಾನ್, ಪರ್ಷಿಯಾ ಪ್ರದೇಶದ ಮರಳುಗಾಡಿನ ಕೊಬ್ಜವೃಕ್ಷ ಅಥವಾ ದೊಡ್ಡ ಪೊದರೂ ಇಂಗು. ಇದರಿಂದ ಹತ್ತಡಿ ಗಾತ್ರ ಸಬ್ಬಸಿಗೆ ಎಲಿಯಂತೆ ಸಪುರ ಎಲೆ. ಅದರಲ್ಲೇ ಕುಲ. ಗೆಲ್ಲು ತುದಿಯಲ್ಲಿ ಹೂವುಗುಚ್ಛ, ಅಂಡಾಕಾರದ ಕಾಯಿ, ಬಲಿತ ಟೊಂಗೆ ಕಸಿಮಾಡಿ ಹೊಸ ಗಿಡ ಪಡೆಯಬಹುದು. ಬೀಜಗಳಿಂದ ಕೂಡ ಸಸಿ ಉತ್ಪಾದಿಸಬಹುದು. ನಾಲ್ಕು ವರ್ಷದ ಬಳಿತ ಸಸಿಕಾಂಡ ಗೀರಿದಾಗ ಅಂಟು ಸ್ರಾವ. ಅದನ್ನು ಗೀರಿಧ ಎರಡು ದಿನಗಳಲ್ಲಿ ಸಂಗ್ರಹಿಸಬೇಕು. ಒಣಗಿಸಬೇಕು ಪ್ರತಿಸತಿಯಿಂದ ಸರಾಸರಿ 100 ಗ್ರಾಂ ಅದು ಸಂಗ್ರಹವಾಗುತ್ತದೆ. ಮತ್ತೀಗ ಕಂದು ಎಲೆಗಳಲ್ಲಿ ಒಣಗಿದ ಅಂಟು ಪ್ಯಾಕಿಂಗ್ ಗೊಳ್ಳುತ್ತಿತ್ತು ಊರಿಂದ ಊರಿಗೆ ಸುವಾಸನೆ ಕಳೆದುಕೊಳ್ಳದ ಸುವಸ್ತು ಇಂಗು. ನೀರಿನಲ್ಲಿ ಕರಗಿದಾಗ ಹಳದಿಗೆರೆ ಎಳೆ ಬಿಡುವ ಇಂಗು ಶುದ್ಧ ಉಳಿದುದ್ದು ಅಪಮಿಶ್ರಣಗೊಂಡ ಕಲಬೆರಿಕೆ ಇಂಗು. ಗೋಧಿಹಿಟ್ಟು ಅಥವಾ ಅನೇಕ ಅಂಟುಗಳನ್ನು ಕಲಬೆರಿಕೆಗೊಳಿಸುತ್ತಾರೆ.
ಹಸಿವೆ ಹೆಚ್ಚಿಸುವ, ಜೀರ್ಣ ಶಕ್ತಿ ವರ್ದಿಸುವ, ವಾತಾವರ ಹಾಕುವ, ಕಫ ನಿವಾರಕ, ಕಫ ನಿಸ್ಸಾರಕ, ಗರ್ಭಶಯ ಸಂಕೋಚ ಮತ್ತು ಜಂತು ನಿವಾರಕ ಗುಣಗಳು ದೇಹದಿಂದ ಹೊರ ಹೋಗುತ್ತದೆ… ಹೊಟ್ಟೆ ನೋವು, ಉಬ್ಬರ, ಮುಚ್ಚಿರೋಗ, ಕೀಲು ಸಂದು, ನೋವು, ದಮ್ಮು, ಕೆಮ್ಮು, ಎದೆ ನೋವು ಪರಿಹಾರಕ್ಕೆ ಇಂಗು ಪರಿಹಾರ. ಹಾಗೆಯೇ ಸೇವಿಸಿದರೆ ಅದು ವಾಂತಿ ಆಗುವ ಸಾಧ್ಯತೆ ಇದೆ. ಹಾಗಾಗಿ ಇಂಗನ್ನು ತುಪ್ಪದ ಜೊತೆ ಹುರಿದು ಬಳಕೆ ಮಾಡುತ್ತಾರೆ.
ಔಷಧೀಯ ಗುಣಗಳು :-
*ಹಾವು ಕಚ್ಚಿದ ರೋಗಿ ಮೂರ್ಚೆ ತಪ್ಪಿದಾಗ ನೀಲಿ ಇಂಗು ಅರೆದು ಮೂಗಿನ ಜಾಗಕ್ಕೆ ಪದೇ ಪದೇ ಮೂಸಿಸಿದರೆ ಲಾಭವಾಗುತ್ತದೆ.
*ಕೀಲು ಗಂಟಲಿನಾ ತಲೆನೋವಿನ ತೀವ್ರ ಬಾದೆ ಇದ್ದರೆ ಇಂಗಿನ ರಸ ಕುಡಿಯುವುದರಿಂದ ಲಾಭವಾಗುತ್ತದೆ
*ಹಳೆಯ ಹುಣ್ಣು, ತುರಿಗಜ್ಜಿ ಪರಿಹಾರಕ್ಕೆ ಹಿಂಗು ಅರೆದು ಲೇಪಿಸಿದರೆ ಹುಣ್ಣು ಮಾಯವಾಗುತ್ತದೆ.
*ಪದೇ ಪದೇ ಗರ್ಭಪಾತವಿದ್ದರೆ ಆ ಮಹಿಳೆ ಗರ್ಭಪಾತ ತಡೆಯಲು ಇಂಗು ಗುಳಿಗೆ ಕ್ರಮೇಣ ದಿನ ಸೇವಿಸುವುದರಿಂದ ಗರ್ಭಪಾತ ಸಮಸ್ಯೆ ನಿವಾರಣೆ ಆಗುತ್ತದೆ.
*ಇಲಿ ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಇಂಗು ವಿಷಹರ ಕಾರ್ಯ ಎಸಗುತ್ತದೆ. ಇಲಿ ವಿಷಯಕ್ಕೆ ಪರಿಣಾಮಕಾರಿಯಾಗಿದೆ.
* ಇದು ಅತ್ಯುತ್ತಮ ಕೀಟಾಣು ನಾಶಕವಾಗಿದೆ
*ಹೆರಿಗೆ ಅನಂತರದ ಮುಟ್ಟಿನ ಸ್ರಾವ ಸರಿಯಾಗಿ ಆಗಲು ಇಂಗು ಪರಿಣಾಮಕಾರಿಯಾಗಿದೆ.
* ಮಲಬದ್ಧತೆ ಹೊಟ್ಟೆ ನೋವು, ಹೊಟ್ಟೆ ಒಬ್ಬರಕ್ಕೆ ಮಜ್ಜಿಗೆ ಜೊತೆ ಸೇರಿಸಿದರೆ ತುಂಬಾ ಹಿತ
*ಮಜ್ಜಿಗೆ ಸಂಗಡ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನಿತ್ಯ ಸೇವಿಸಿದರೆ ಜಂತು ಹುಳುಗಳು ವಾಸಿ.
ಹಾನಿಕಾರಕ ಅಂಶಗಳು :
ಬಹಳ ದಿನಗಳವರೆಗೆ ದಿನಾಲು ಅಧಿಕ ಪ್ರಮಾಣದಲ್ಲಿ ಸೇವಿಸಬಾರದು. ಮಹಿಳೆಯರಿಗೆ ಮಾಸಿಕ ಸ್ರಾವ ಹೆಚ್ಚಾಗುತ್ತಿದ್ದರೆ, ಗರ್ಭಿಣಿಯರು ಸೇವಿಸಬಾರದು. ಹೆಚ್ಚಿನ ಸೇವೆಯಿಂದ ಆಶಕ್ತಕತೆ ಹೆಚ್ಚಾಗುತ್ತದೆ. ಇದು ಯಾಕೃತಿ ಹಾನಿಕಾರಕವಾಗಿದೆ. ಉಷ್ಣ ಶರೀರದವರು ಇದನ್ನು ಸೇವಿಸಬಾರದು. ಅವಶ್ಯಕತೆ ಇದ್ದರೆ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಹಿತಕರ.