‘ಬಿ’ ಜೀವಸತ್ವದ ಕೊರತೆ, ಶೀತ, ಉದರ, ವಾಯುವಿಕಾರ, ಅನ್ನಾಶಯದಲ್ಲಿ ವಾಯು ಒತ್ತಡ, ಉಸಿರಾಟಕ್ಕೆ ತೊಂದರೆ, ಅಮವಾತ,ಕಾಫ ವಿಚಾರ,ಮಂಡಿ ಮತ್ತು ಕಾಲುಗಳಲ್ಲಿ ಪೀಡನೆ, ಮಂದಿರಾಸಾರ, ಕಫ ಉನ್ಮಾದ, ಜಲೋದರ ಕಮಾಲೆ,ದೌರ್ಬಲ್ಯ ಉದರ ವಿಕಾರ ಅಥವಾ ಅಜೀರ್ಣ ವೃಕ್ಕಶೋಧ.
ವಿಶೇಷ :
ಬುಧನ ನಕ್ಷತ್ರ ಮತ್ತು ಚಂದ್ರನ ರಾಶಿಯಲ್ಲಿ ಜನಿಸಿದ ಆಶ್ಲೇಷಾ ನಕ್ಷತ್ರದ ಜಾತಕನ್ನು ಧನವಂತ, ಸ್ತ್ರೀ ಪ್ರೇಮಿ, ಕಾಮಶಕ್ತಿಯಲ್ಲಿ ಆಸಕ್ತ,ಸ್ವಾರ್ಥಿ ಅನ್ಯರ ಕಾಯರ ಮಾಡುವುದರಲ್ಲಿ ತತ್ಪರ, ಆಹಾರ ಪಾನೀಯದಲ್ಲಿ ವಿಲಾಸಿ, ಅಡಿಗೆಯವ, ಆಕಸ್ಮಿಕವಾಗಿ ಪೆಟ್ಟು ತಿನ್ನುವವ, ಕೆಲವೊಮ್ಮೆ ಕಳ್ಳತನ ಮಾಡುವವ, ಆಲಸಿ,ಕ್ಷುದ್ರ ಮನುಷ್ಯರ ಸಂಗ ಮಾಡುವವ ಸ್ತ್ರಿ ಕಷ್ಟದಿಂದ ಪೀಡಿತ, ಹಸನ್ಮುಖ ಮತ್ತು ಸತ್ಯವಾದಿಯಾಗುತ್ತಾನೆ.
ಒಂದು ವೇಳೆ ಬುಧ ಅಥವಾ ಚಂದ್ರ ಆಶ್ಲೇಷ ನಕ್ಷತ್ರದ ಮೇಲೆ ಭ್ರಮಣ ಮಾಡುತ್ತಿದ್ದರೆ, ಜಾತಕನು ತನ್ನ ಜೀವನದಲ್ಲಿ ಕುಂಡಲಿಯ ಭಾವಾನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾನೆ.ಅಲ್ಲದೆ ಚಂದ್ರನ ಮಹಾದೆಶೆ ಮತ್ತು ಬುಧನ ಭಕ್ತಿಯ ಅವಧಿಯಲ್ಲಿ ಕೂಡ,ಜಾತಕನು ಚಂದ್ರ ಮತ್ತು ಬುಧನ ಭಾಗವತ ಫಲವನ್ನು ಪ್ರಾಪ್ತಿ ಹೊಂದುತ್ತಾನೆ.ಸೂರ್ಯನು ಈ ನಕ್ಷತ್ರದ ಮೇಲೆ ಶ್ರಾವಣ ಮಾಸದ ಅಂತಿಮ 13 ದಿನಗಳವರೆಗಿರುತ್ತಾನೆ. ಚಂದ್ರನ್ನು ಪ್ರತಿ 27ನೆಯ ದಿನ ಒಂದು ದಿನ ಅವಧಿಯವರೆಗೆ ಈ ನಕ್ಷತ್ರದ ಕ್ಷೇತ್ರದಲ್ಲಿ ಭ್ರಮಣ ಮಾಡುತ್ತಾನೆ.
ಚರಣದ ಸ್ವಾಮಿ ಫಲ :
ಪ್ರಥಮ ಚರಣದ ಸ್ವಾಮಿ ಬುಧ ಗುರು ಜಾತಕನನ್ನು ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸುತ್ತಾರೆ
ದ್ವಿತೀಯ ಚರಣದ ಸ್ವಾಮಿ ಬುದ್ಧ ಶನಿ ಜಾತಕನ ಮಹಾತಾಕಾಂಕ್ಷೆ ವೃದ್ಧಿಸುವಂತೆ ಮಾಡುತ್ತಾರೆ.
ತೃತಿಯ ಚರಣದ ಸ್ವಾಮಿ ಬುಧ ಶನಿ ಜಾತಕನಲ್ಲಿ ಜನಕಲ್ಯಾಣ ಭಾವನೆಯನ್ನು ಜಾಗೃತಗೊಳಿಸುವವರು.
ಚತುರ್ಥ ಚರಣದ ಸ್ವಾಮಿ ಬುಧ ಗುರು ಜಾತಕನನ್ನು ದೇಶಾಟನೆ ಮತ್ತು ನವೀನ ಸಂಶೋಧನೆಯಲ್ಲಿ ಪ್ರವೃತ್ತಿಗೊಳಿಸುತ್ತಾರೆ.
ಆಶ್ಲೇಷ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು:
ಈ ನಕ್ಷತ್ರದಲ್ಲಿ ಪ್ರಯಾಣ ಅಶುಭಾಕರ, ಕನ್ಯೆ ಋತುಮತಿಯಾದರೆ ಪತಿ ಮತ್ತು ಅತ್ತಿಗೆ ಅಶುಭಕಾರಕ.ಇದರಲ್ಲಿ ಜನಿಸಿದವರಿಗೆ ಅತ್ತೆ ವಿಷಗಂಡ ನಾಲ್ಕನೇ ಚರಣದ ಅಂತ್ಯದಲ್ಲಿ ಅಭುಕ್ತಾದಿಗಳಿಗೆ ಬಿಡಬೇಕು. ಈ ನಕ್ಷತ್ರದಲ್ಲಿ ನಾಗಪ್ರತಿಷ್ಠೆ, ಸರ್ಪ ಸಂಸ್ಕಾರ,ವಿಷಪ್ರಯೋಗ, ಚೌರ್ಯ ದ್ವೇಷ,ಹಗೆ, ತಿಳಿಸಿಕೊಳ್ಳುವುದು, ಅಗ್ನಿಸ್ಥಂಭನ, ಗಂಧದ ಎಣ್ಣೆ ತೆಗೆಯುವುದು,ಗಾಣವನ್ನು ನಡೆಸುವುದು, ಕೋಳಲನ್ನು ನುಡಿಸುವಿಕೆ, ಜಾಲವಿದ್ಯೆ ಕಲಿಯುವುದು,ಕೂಟ ಕೃತ್ಯ ನಡೆಸುವಿಕೆ, ಸುಳ್ಳುನುಡಿಯುವುದು. ಕಲ್ಪನೆ, ಬಾವಿ ತೊಡಿಸುವುದು ಕೆರೆ ಕಟ್ಟುವುದು, ಗರಡಿ ಸಾಧನೆ, ಗಾರುಡಿ ವಿದ್ಯೆ,ಮಾಂಸ ವಿಕ್ರಯ ವ್ಯಾಪಾರ,ಕಲ್ಲಿಗೆ ಸುರಂಗ ವಿಡುವುದು, ಹಗ್ಗ ಹೊಸೆಯುವುದು, ಹತ್ತಿ ನೂಲುವುದು,ಹುಳುಗಳನ್ನು ಬೆಳೆಸುವುದು ಇತ್ಯಾದಿ ಕಾರ್ಯಗಳನ್ನು ಶುಭಕಾರಕವಾಗುತ್ತವೆ.
ಆಶ್ಲೇಷ ನಕ್ಷತ್ರ ಜಾತಕಾರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :
ಆಶ್ಲೇಷ ನಕ್ಷತ್ರದ ಕನ್ಯೆಗೆ
ಅಶ್ವಿನಿ, ಭರಣಿ, ಕೃತಿಕಾ ಒಂದನೇ ಚರಣ, ಮೃಗಶಿರಾ, ಮೂರನೇ ನಾಲ್ಕನೇ ಚರಣ ಆರ್ದ್ರಾ, ಪುನರ್ವಸು, ಮಾಘಾ, ಪುರ್ವಾಪಾಲ್ಗುಣಿ, ಉತ್ತರಾ ಒಂದನೇ ಚರಣ, ಚಿತ್ತಾ, ಸ್ವಾತಿ, ವಿಶಾಖಾ 4ನೇ ಚರಣ ಅನುರಾಧ, ಜೇಷ್ಠ, ಪೂರ್ವಾಷಾಢಾ, ಧನಿಷ್ಠಾ, ಪೂರ್ವಾಭಾದ್ರಪದ ನಾಲ್ಕನೇ ಚರಣ, ಉತ್ತರ ಭಾದ್ರಪದಾ.
ಆಶ್ಲೇಷ ನಕ್ಷತ್ರದ ವರನಿಗೆ :
ಅಶ್ವಿನಿ, ಭರಣಿ, ಕೃತಿಕಾ, ಒಂದನೇ ಚರಣ ಮೃಗಶಿರಾ, ಪುನರ್ವಸು ನಾಲ್ಕನೇ ಚರಣ, ಮಾಘಾ, ಪೂರ್ವಾ ಪಾಲ್ಗುಣಿ, ಉತ್ತರಾ, ಒಂದನೇ ಚರಣ, ಹಸ್ತಾ, ಚಿತ್ತಾ, ಒಂದು ಎರಡನೇ ಚರಣ, ಸ್ವಾತಿ, ವಿಶಾಖಾ, ಅನುರಾಧ, ಜೇಷ್ಠಾ, ಪೂರ್ವಾಷಾಢಾ, ಧನಿಷ್ಠ ಮೂರು ನಾಲ್ಕನೇ ಪಾದ ಶತಭಿಷಾ,ಪೂರ್ವ ಭಾದ್ರಪದ ಭಾಗ ಒಂದು ಎರಡು ಮೂರನೇ ಚರಣ ಉತ್ತರಾ ಭಾದ್ರಪದಾ.
ಆಶ್ಲೇಷ ನಕ್ಷತ್ರವರ ಜನನಕ್ಕೆ ಶಾಂತಿ :
ನಮೋಸ್ತು ಸರ್ಪೆಭ್ಯೋ ಯೇಕೇ ಚಷ್ಟಾಥಿವೀಮನು|
ಯೇ ಅಂತರಿಕ್ಷೆ ಯೋದಿವಿತೇಭ್ಯಃ ಸರ್ಪೇಭ್ಯೋ ನಮಃ||
| ಈ ನಕ್ಷತ್ರದಲ್ಲಿ ಸಂತಾನ ಜನನವಾದಾಗ, ತಾಯ್ತಂದೆಯರು ಈ ಮಂತ್ರವನ್ನು ಒಂದು ಮಾಲೆ ಯಷ್ಟು ಜಪ ಮಾಡಬೇಕು. ಯತಾಶಕ್ತಿ ಅಕ್ಕಿ ಬೆಲ್ಲ ಹಾಲನ್ನು ದಾನ ನೀಡಬೇಕು.ಇದರಿಂದ ನಕ್ಷತ್ರ ದೋಷ ದೂರವಾಗುತ್ತದೆ.
ಯಂತ್ರ :
ಸರ್ವಪ್ರಥಮ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕೀರ್ಣಗೊಳಿಸಬೇಕು. ನಂತರ ಈ ಮೇಲಿನ ಮಂತ್ರವನ್ನೇ ಒಂದು ಸಹಸ್ರ ಸಲ ಜಪ ಮಾಡಬೇಕು.ಹಾಲು ಮತ್ತು ಸಕ್ತು ನೈವೇದ್ಯ ಮಾಡಿ,ಅದರಿಂದಲೇ ಹೋಮ ಮಾಡಿ, ಧನಧಾನ್ಯದ ಬಲಿ ನೀಡಬೇಕು ಈ ಯಂತ್ರವನ್ನು ಶರೀರದಲ್ಲಿ ಧಾರಣ ಮಾಡಬೇಕು.ಇದರಿಂದ ಆಶ್ಲೇಷಾ ನಕ್ಷತ್ರದ ಸಮಸ್ಯ ದೋಷಗಳು ವಿವರಣೆಯಾಗಿ, ಜಾತಕನಿಗೆ ಸುಖ ಆರೋಗ್ಯ ಐಶ್ವರ್ಯದಿ ಶುಭ ಫಲಗಳು ಪ್ರಾಪ್ತಿಯಾಗುತ್ತವೆ
ಮಂತ್ರ
ಹಾಂ ಹ್ರಾಂ
ಓಂ ಹಾಂ ನಾಗೇಶ್ವರಾಯ ನಮಃ
ಹಾಂ ಹೂಂ