ಮನೆ ಜ್ಯೋತಿಷ್ಯ ಆಶ್ಲೇಷಾ ನಕ್ಷತ್ರ

ಆಶ್ಲೇಷಾ ನಕ್ಷತ್ರ

0

ಕ್ಷೇತ್ರ – ಕರ್ಕರಾಶಿಯಲ್ಲಿ 16 ಡಿಗ್ರಿ 40 ಕಲೆಯಿಂದ 30 ಡಿಗ್ರಿ. ರಾಶಿ ಸ್ವಾಮಿ – ಚಂದ್ರ, ನಕ್ಷತ್ರ ಸ್ವಾಮಿ – ಬುಧ, ನಾಡಿ – ಅಂತ್ಯ, ಗಣ – ರಾಕ್ಷಸ, ಯೋನಿ – ಮಾರ್ಜಲ, ನಾಮಾಕ್ಷರಗಳು – ಡೀ, ಡೂ, ಡೆ, ಡೇ. ಶರೀರಭಾಗ – ಪುಪ್ಪಸ, ಹೊಟ್ಟೆ, ಅನ್ನನಾಳ, ಜಠರ, ಪಿತ್ತಶಯ. ರೋಗಗಳು – ಡಿ ವಿಟಮಿನ್ ಕೊರತೆ, ನೆಗಡಿ, ವಾಯು ವಿಕಾರ, ಜಠರದಲ್ಲಿ ಒತ್ತಡ, ಶ್ವಾಸೋಚ್ಛಾಸದಲ್ಲಿ ತೊಂದರೆ, ಕಫದ ತೊಂದರೆ, ಕಾಲು ನೋವು, ಹಿಸ್ಟೀರಿಯಾ, ಹಳದಿ ರೋಗ, ದುರ್ಬಲತೆ, ಹೊಟ್ಟೆಯಲ್ಲಿ ತೊಂದರೆ ಅಪಚನ.

ಸಂರಚನೆ :- ಬೇಗ ಶಾಂತವಾಗುವ ಸ್ವಭಾವದವರು, ಬುದ್ಧಿವಂತ, ಯತಾರ್ಥವಾದಿ, ಪರಿವರ್ತನಶೀಲ, ಬಹುಭಾಷಿಕಲಾಪ್ರಿಯ, ಲೇಖಕ, ಯಾತ್ರಾಪ್ರಿಯ, ಸಂಗೀತಗಾರ, ವಂಚಕ, ಕೃತಜ್ಞಸ್ವಾರ್ಥಿ, ಸಹ ಆಗಬಹುದು.

ಉದ್ಯೋಗ, ವಿಶೇಷಗಳು :- ವ್ಯಾಪಾರಿ, ಪಂಡಿತ, ಸಂಸ್ಕಾರ ಕರ್ಮ ಮಾಡಿಸುವವನು, ದಲಾಲ, ಅಂತರಾಷ್ಟ್ರೀಯ ವ್ಯಾಪಾರಿ, ಲಿಪಿಕ, ಟೈಪಿಸ್ಟ್, ಲೇಖಕ, ಭಾಷಾ ಶಾಸ್ತ್ರಿ ಬಣ್ಣದ ವ್ಯಾಪಾರಿ, ಅಧ್ಯಾಪಕ, ರಾಜದೂತ, ಕಾಗದ ಪೆನ್ನುಗಳಿಂದ ಹಣ ಗಳಿಸುವವನು, ಗಣಿತ ತಜ್ಞ, ಜ್ಯೋತಿಷಿ, ಸೇವಾ ಕಾರ್ಯದಲ್ಲಿರುವವನು, ಪಿತ್ತ ರೋಗದ ವಿಶೇಷ ತಜ್ಞಾನಾಗಬಹುದಾಗಿದೆ. ವಿಷಕೀಟಾಣು ವಿಶೇಷ ತಜ್ಞ, ಗಿಡಮೂಲಿಕೆ ತಜ್ಞ, ಮಿಶ್ರವಸ್ತು ನಿರ್ಮಾಪಕ, ರಬ್ಬರ, ಪ್ಲಾಸ್ಟಿಕ್ ನಿರ್ಮಾಣಗಾರ, ಹೃದಯ ತಜ್ಞ, ಮೇವು ಮಾರಾಟಗಾರ, ರಕ್ತ ಅಥವಾ ಪಿತ್ತರೋಗ ವಿಶೇಷ ತಜ್ಞ ನಾಗಬಹುದಾಗಿದೆ.

ಬುಧನು ನಕ್ಷತ್ರ ಸ್ವಾಮಿಯಾಗಿದ್ದು, ಚಂದ್ರನ ರಾಶಿಯಲ್ಲಿ ಹುಟ್ಟಿದವರು ಶ್ರೀಮಂತ, ಸ್ತ್ರೀ ಪ್ರೇಮಿ, ಕಾಮಸಕ್ತ, ಸ್ವಾರ್ಥಿ, ಉಪಕಾರಿ, ಅಡುಗೆಬಲ್ಲವ, ದುರ್ಘಟನೆಗೊಳಗಾಗಬಹುದಾದವ. ಆಲಸಿ, ನಗುಮುಖದವನು, ಸ್ತ್ರೀಕಷ್ಟದಿಂದ ದುಕ್ಕಿತನು ಆಗುವನು, ಚಂದ್ರ ಅಥವಾ ಬುಧ ಗ್ರಹಗಳು ಈ ನಕ್ಷತ್ರಗಳ ಮೂಲಕ ಹಾಯ್ದು ಹೋದಾಗ, ಭಾವಾನುಸಾರ ಫಲವನ್ನು ನೀಡುವರು. ಸೂರ್ಯನು ಈ ರಾಶಿಯಲ್ಲಿ ಶ್ರಾವಣ ಮಾಸದ ಅಂತಿಮ ದಿನಗಳಲ್ಲಿ ಇರುವನು ಬುಧ ಮತ ಚಂದ್ರರು ದಶೆಭುಕ್ತಿಗಳಲ್ಲಿ ಸಹ ಸ್ಥಾನಾನುಸಾರ ಫಲ ನೀಡುವರು.