ಮನೆ ಆರೋಗ್ಯ ಸರ್ವ ರೋಗಕ್ಕೆ ಮನೆಮದ್ದು ಅಶ್ವಗಂಧ

ಸರ್ವ ರೋಗಕ್ಕೆ ಮನೆಮದ್ದು ಅಶ್ವಗಂಧ

0

ನಮ್ಮ ಹಿರಿಯರು ನಮಗಾಗಿ ನಮ್ಮ ಆರೋಗ್ಯಕ್ಕೆ ಉಪಯೋಗವಾಗುವಂತೆ ಮಾಡಿ ಹೋಗಿರುವ ಕೆಲವೊಂದು ಪದ್ಧತಿಗಳು ಇಂದು ನಿಜಕ್ಕೂ ಅನುಕೂಲಕರ ಆಗಿವೆ. ಅದರಲ್ಲಿ ಆಯುರ್ವೇದ ಪದ್ಧತಿ ಕೂಡ

ಆಯುರ್ವೇದ ಪದ್ಧತಿಯಲ್ಲಿ ಬಳಕೆಯಾಗುವ ಬಹುತೇಕ ಗಿಡಮೂಲಿಕೆಗಳು ಮನುಷ್ಯರಿಗೆ ಒಳ್ಳೆಯದನ್ನೇ ಮಾಡುತ್ತವೆ. ಅಂದರೆ ಇವುಗಳಲ್ಲಿ ಅಡ್ಡ ಪರಿಣಾಮಗಳು ಕಡಿಮೆ ಇರುತ್ತವೆ. ಹಾಗಾಗಿ ನಮ್ಮ ಹಿರಿಯರು ಇವುಗಳ ಬಳಕೆ ಮಾಡಿಕೊಂಡು ಬಂದಿದ್ದಾರೆ.

ಸಕ್ಕರೆ ಕಾಯಿಲೆ ಇರುವವರಿಗೆ ಒಳ್ಳೆಯದು

ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಾ ಹೋಗುತ್ತಿದೆ. ಹೀಗಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ.

ಸಾಧ್ಯವಾದಷ್ಟು ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಈ ಸಂದರ್ಭದಲ್ಲಿ ಸೇವಿಸಬೇಕು.

ಅಶ್ವಗಂಧ ಈ ವಿಷಯದಲ್ಲಿ ನಿಮಗೆ ಸಹಾಯಮಾಡುತ್ತದೆ. ಏಕೆಂದರೆ ಇದು ರಕ್ತದಲ್ಲಿ ಇರುವಂತಹ ಗ್ಲುಕೋಸ್ ನಿಮ್ಮ ಜೀವಕೋಶಗಳಲ್ಲಿ ಚೆನ್ನಾಗಿ ಬಳಕೆಯಾಗಲು ಅನುಕೂಲ ಮಾಡಿಕೊಡುತ್ತದೆ.

ಮಾನಸಿಕ ಒತ್ತಡ ನಿವಾರಣೆ ಮಾಡುತ್ತದೆ

ಮೆದುಳಿನ ಭಾಗದಲ್ಲಿ ಉತ್ಪತ್ತಿಯಾಗುವ ಕಾರ್ಟಿಸಲ್ ಹಾರ್ಮೋನ್ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ. ಇದರಿಂದ ಮಾನಸಿಕ ಖಿನ್ನತೆ ಕೂಡ ಎದುರಾಗುತ್ತದೆ.

ಆದರೆ ಅಶ್ವಗಂಧ ಮಾನಸಿಕ ಒತ್ತಡ ನಿವಾರಣೆಯಲ್ಲಿ ಕೆಲಸ ಮಾಡುತ್ತದೆ. ದೇಹದಲ್ಲಿ ಬಿಡುಗಡೆಯಾಗುವ ಇಂತಹ ಹಾರ್ಮೋನ್ ಪ್ರಮಾಣವನ್ನು ಹೆಚ್ಚಾಗದಂತೆ ತಡೆಯುತ್ತದೆ.

ಈಸ್ಟ್ರೋಜನ್ ಪ್ರಮಾಣ ಹೆಚ್ಚಿಸುತ್ತದೆ

ಈಸ್ಟ್ರೋಜನ್ ಮನುಷ್ಯರ ದೇಹದಲ್ಲಿ ಬಿಡುಗಡೆಯಾಗುವ ಲೈಂಗಿಕ ಹಾರ್ಮೋನ್. ಇದು ಹೆಚ್ಚು ಕಡಿಮೆ ಆದರೆ ಆಗಲು ಸಹ ಮನಸ್ಸಿನ ಸ್ಥಿತಿಯ ಮೇಲೆ ಪ್ರಭಾವ ಬೀರಬಹುದು.

ಆದರೆ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುವಂತೆ ಅಶ್ವಗಂಧ ಮಾಡುತ್ತದೆ. ಇದರಿಂದ ಕ್ರಮೇಣವಾಗಿ ವ್ಯಕ್ತಿ ಮೊದಲಿನ ಸ್ಥಿತಿಗೆ ತಲುಪಬಹುದು.

ನಿದ್ರೆಯನ್ನು ಒದಗಿಸುತ್ತದೆ

ಅಶ್ವಗಂಧ ತನ್ನಲ್ಲಿ ಗ್ಲೈಕೋಲ್ ಪ್ರಮಾಣವನ್ನು ಹೊಂದಿರುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಒಳ್ಳೆಯದು.

ತುಂಬಾ ಜನರಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುವುದಿಲ್ಲ. ಇನ್ನು ಕೆಲವರು ಬಂದರೂ ನಿದ್ರೆ ಮಾಡುವುದಿಲ್ಲ. ಅದು ಬೇರೆ ವಿಷಯ ಬಿಡಿ. ಒಟ್ಟಿನಲ್ಲಿ ನಿದ್ರೆಯ ತೊಂದರೆಯಿಂದ ಕಷ್ಟಪಡುತ್ತಿರುವ ಜನರಿಗೆ ಅಶ್ವಗಂಧ ಬೆಸ್ಟ್!

ಇದನ್ನು ತೆಗೆದುಕೊಳ್ಳುವುದು ಹೇಗೆ?

ಮಲಗುವ ಮುಂಚೆ ರಾತ್ರಿ ಹೊತ್ತು ಒಂದು ಕಪ್ ಹಾಲಿಗೆ ಅರ್ಧ ಟೀ ಚಮಚ ಅಶ್ವಗಂಧ ಹಾಕಿ ಕುಡಿಯಬಹುದು.

ಇಲ್ಲವೆಂದರೆ ಒಂದು ಟೀ ಚಮಚ ತುಪ್ಪದ ಜೊತೆಗೆ ಅರ್ಧ ಟೀ ಚಮಚ ಅಶ್ವಗಂಧ ಸೇರಿಸಿ ಸೇವಿಸಬಹುದು. ಒಮ್ಮೆ ನಿಮ್ಮ ಹತ್ತಿರದ ಆಯುರ್ವೇದ ತಜ್ಞರನ್ನು ಕೇಳಿ ಮುಂದುವರೆ ಯುವುದು ಒಳ್ಳೆಯದು.