ಬೆಂಗಳೂರು(Bengaluru): ಸಚಿವ ಅಶ್ವತ್ಥ್ ನಾರಾಯಣ್ ಭ್ರಷ್ಟಾಚಾರದ ವಿಶ್ವ ಮಾನವ. ಅವರ ಸಂಪರ್ಕದಲ್ಲಿರುವ ಸಂಸ್ಥೆಗಳಲ್ಲಿ ಇದೆಲ್ಲಾ ಆಗ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸದಾಶಿವ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅಶ್ವತ್ಥ್ ನಾರಾಯಣ್ ಅನೇಕ ಯುವಕರು ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ರು. ಅವರ ಭವಿಷ್ಯ ಈಗ ಸಮಸ್ಯೆಯಲ್ಲಿದೆ ಎಂದರು.
ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಯಾರು ಆರೋಪಿಸ್ತಾರೆ ಅವರಿಗೆ ನೋಟಿಸ್ ಕೊಡ್ತಾರೆ. ಒಳ್ಳೆಯ ಸಂಪ್ರದಾಯ ಶುರು ಮಾಡಿದಕ್ಕೆ ಅಭಿನಂದನೆ. ಅದೇ ರೀತಿ ಯತ್ನಾಳ್ ಅವರಿಗೂ ಕೊಡಬೇಕಲ್ಲ, ಅವರ ಪಕ್ಷದವರಿಗೂ ನೋಟಿಸ್ ಕೊಡಬೇಕು. ಪ್ರಿಯಾಂಕ್ ನಮ್ಮ ವಕ್ತಾರರು. ಈ ವಿಚಾರ ಮಾತನಾಡಲು ಅಧಿಕಾರ ಕೊಟ್ಟಿದ್ದೇವೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಗೃಹ ಸಚಿವರು ಸದನದಲ್ಲಿ ಏನು ಆಗಿಲ್ಲ ಅಂತಾರೆ. ಆದರೆ ಅರೆಸ್ಟ್ ಮಾಡ್ತಿರೋದು ಯಾಕೆ?. ಯಾರು ಆರೋಪಿ ಎಂಬುದನ್ನ ಗೌಪ್ಯವಾಗಿ ಇಡ್ತಿದ್ದಾರೆ ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಅವರನ್ನು ಯಾವಾಗ ಕಳಿಸಬೇಕು. ಏನು ಕೊಟ್ಟು ಕಳಿಸಬೇಕು ಅಂತ ನಮಗೆ ಗೊತ್ತಿದೆ. ಅದರ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.