ಮನೆ ರಾಜ್ಯ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಅಶ್ವತ್ಥನಾರಾಯಣ ಸಂಫೂರ್ಣ ಹಾಳು ಮಾಡಿದ್ದಾರೆ: ವೀರಪ್ಪ ಮೊಯ್ಲಿ

ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಅಶ್ವತ್ಥನಾರಾಯಣ ಸಂಫೂರ್ಣ ಹಾಳು ಮಾಡಿದ್ದಾರೆ: ವೀರಪ್ಪ ಮೊಯ್ಲಿ

0

ಚಿಕ್ಕಬಳ್ಳಾಫುರ: ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ಬಿಜೆಪಿ ನಾಯಕ, ಮಾಜಿ ಸಚಿವ ಅಶ್ವತ್ಥನಾರಾಯಣ ಸಂಫೂರ್ಣ ಹಾಳು ಮಾಡಿದ್ದಾರೆ. ಅವರನ್ನು ನೇಣುಗಂಬಕ್ಕೆ ಹಾಕಬೇಕು ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

ಚಿಕ್ಕಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ 41 ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರನ್ನು ನೇಮಕ ಮಾಡಿಲ್ಲ. ಪ್ರಾಧ್ಯಾಪಕರನ್ನು ನೇಮಕ ಮಾಡದೆ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಸರ್ಕಾರಿ ವಿವಿಗಳ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಅನುಮಾನಪಡುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ವಿವಿಗಳಲ್ಲಿ ಮೂಲಭೂತ ಸೌಕರ್ಯ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ನೇಮಕ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಸರ್ಕಾರಿ ಸ್ವಾಮ್ಯದ ವಿವಿಗಳಲ್ಲಿ ತಕ್ಷಣ ಉಪನ್ಯಾಸಕರ ನೇಮಕ್ಕೆ ಆಗ್ರಹ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳನ್ನು ಬೆದರಿಸಬಹುದು. ಆದರೆ ಜನರನ್ನು ಬೆದರಿಸಲು ಸಾದ್ಯವಿಲ್ಲ. ಜನರ ಆಕ್ರೋಶ ಬಿಜೆಪಿ ವಿರುದ್ದ ಜ್ವಾಲಾಮುಖಿಯಾಗಿ ಸಿಡಿಯಲಿದೆ. ದೇಶದ ಸಂಪನ್ಮೂಲಗಳು ಕೆಲವೇ ಶ್ರೀಮಂತರ ಬಳಿ ಸೇರಿವೆ. ಬಿಜೆಪಿ ಶ್ರೀಮಂತ ಪರ ಇರೋ ಪಕ್ಷ. ಕಾಂಗ್ರೆಸ್ ಬಡವರ ಪರ ಇರೋ ಪಕ್ಷ. ಬಿಜೆಪಿಗರು ದೇಶಭಕ್ತರಲ್ಲ ದೇಶ ದ್ರೋಹಿಗಳು. ಮೋದಿ ಯಾವಾಗ ಏನು ಮಹಾಕಾರ್ಯ ಮಾಡಿದ್ದಾರೆ ಹೇಳಿ? ಅವರು ದೇಶವನ್ನು ಮುನ್ನೆಡೆಸುವುದಲ್ಲ ಹಿಂದೆ ನೂಕುತ್ತಿದ್ದಾರೆ ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಉರಿಯೂತ, ಅಲರ್ಜಿ ಮುಂತಾದ ಸಮಸ್ಯೆಗೆ ಎಕ್ಕೆ ಗಿಡದ ಮನೆಮದ್ದು
ಮುಂದಿನ ಲೇಖನಸೆಟ್ಟೇರಿದ ನಟ ಧನುಷ್ ಅಭಿನಯದ 50ನೇ ಸಿನಿಮಾ