ಮನೆ ಜ್ಯೋತಿಷ್ಯ ಅಶ್ವೀಜ ಮಾಸದ ಫಲವು

ಅಶ್ವೀಜ ಮಾಸದ ಫಲವು

0

      ಶು. 1 ಶನಿವಾರ, ಶು. 3 ಮಂಗಳವಾರ ಇಲ್ಲವೇ ಶನಿವಾರ ಶು.4 ರವಿವಾರ, ಬ, 8 ಶನಿವಾರ ಬಂದರೆ ನೂಲು, ಜವಳಿ, ಆಹಾರ ಧಾನ್ಯ, ಎಣ್ಣೆ, ತುಪ್ಪ, ಇವು ತೇಜಿಯಾಗುತ್ತವೆ. ಶು. 8 ತಿಥಿಯು ಬುಧವಾರ ದಿನ ಬಂದರೆ ಹತ್ತಿ, ಅರಳೆ, ಹೆಸರು, ಅಲಸಂದಿ,  ಮುಂತಾದ ಅಕ್ಕಡಿಕಾಳುಗಳನ್ನು ಸಂಗ್ರಹ ಮಾಡಿ, ಮುಂದಿನ ಪಾಲ್ಗುಣ ಚೈತ್ರಗಳಲ್ಲಿ ಮಾರಿದರೆ ಲಾಭವಿದೆ.

Join Our Whatsapp Group

 ಬ. 3  ಶನಿವಾರ ಇಲ್ಲವೇ ಮಂಗಳವಾರ ಇದ್ದು, ರೋಹಿಣಿ ನಕ್ಷತ್ರ ಕೂಡಿದಾಗ್ಗೆ  ಹತ್ತಿ, ಅರಳೆ ಸಂಗ್ರಹ ಮಾಡಿ ಪಾಲ್ಗುಣ ಚೈತ್ರದಲ್ಲಿ ಮಾರಿದರೆ ಲಾಭವಿದೆ. ಶು. 6 ರಲ್ಲಿ ರವಿವಾರವಿದ್ದು, ಅಂದು ಜೇಷ್ಠ ಮೂಲಾ ನಕ್ಷತ್ರ ಕುಡಿದರೆ ಯಾವದೇ ಆಹಾರಧಾನ್ಯ ಸಂಗ್ರಹ ಮಾಡಿ ಪಾಲ್ಗುಣ ಚೈತ್ರದಲ್ಲಿ ಮಾರಿದರೂ ಲಾಭವಿದೆ. ಕೃ. ಪ.(ಬಹುಳ )ದಲ್ಲಿ  ರಾಹು ಶನಿಗಳು ಒಂದೇ ರಾಶಿಯಲ್ಲಿ ಕೂಡಿದರೆ ಸಣಬು,ನೂಲು, ತುಪ್ಲ, ಬೆಣ್ಣೆ,ಬಟ್ಟೆಗಳು ತೇಜಿಯಾಗುವವು.

ಅಶ್ವೀಜ ಶು. 7 ಅಥವಾ 8 ತಿಥಿಯ  ದಿವಸ ಮಳೆಯಾದರೆ ಧಾನ್ಯದ ಮಾರಾಟದಲ್ಲಿ ಇಳಿತವಾಗುವುದು. ಈ ಮಾಸದಲ್ಲಿ ಶನಿ ರಾಹುಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋದರೆ ಎಣ್ಣೆ, ಉಣ್ಣೆ, ಹತ್ತಿ,  ಅರಳೆಗಳು ತೇಜಿಯು. ಅಶ್ಲೀಜ ಪೂರ್ಣಿಮೆಯ ದಿನ ಗ್ರಹಣವಾದರೆ, ಧಾನ್ಯ ಖರೀದಿಸಿ ಮುಂದೆ ಚೈತ್ರ ಮಾಸದಲ್ಲಿ ಮಾಡಿದರೆ ತುಂಬಾ ಲಾಭವಿದೆ.