ವಿಶೇಷ: ಈ ನಕ್ಷತ್ರ ಸಂತಾನೋತ್ಪಾದಕವಲ್ಲ ಆದಾಗ್ಯೂ ಕೇತು ಯಾವುದೇ ಶುಭ್ರ ಗ್ರಹದೊಡನೆ ಯತಿ ಅಥವಾ ದೃಷ್ಟಿ ಸಂಬಂಧ ಹೊಂದಿದ್ದರೆ ಸಂತಾನ ಪ್ರಾಪ್ತಿಯಾಗುತ್ತದೆ. ಸ್ತ್ರೀಯರಲ್ಲಿ ಗರ್ಭಪಾತದ ಸಂಭವವಿರುತ್ತದೆ.ಶಸ್ತ್ರಚಿಕಿತ್ಸೆ ಅಥವಾ ಅನ್ಯ ಉಪಚಾರಗಳಿಂದಲೂ ಕೂಡ ಯಾವುದೇ ಲಾಭವಾಗುವುದಿಲ್ಲ. ಆದ್ದರಿಂದ ಇಂಥ ಅಧಿಕಾಂಶ ಜಾತಕರು ಬಂಜೆ ಅಥವಾ ಯಾವುದಾದರೂ ಕಾರಣದಿಂದ ಸಂತಾನಹೀನರಾಗುತ್ತಾರೆ ಅಥವಾ ಅವರ ಕಾಮ ಶಕ್ತಿ ಕುಂಠಿತವಾಗುತ್ತದೆ.ಆದಾಗ್ಯೂ, ನಕ್ಷತ್ರದ ಮೇಲೆ ಶುಭ ಗ್ರಹದ ದೃಷ್ಟಿ ಯಿದ್ದರೆ ಅಥವಾ ನಕ್ಷತ್ರದ ಮೇಲೆ ಶುಭ ಗ್ರಹದಸ್ಥಿತಿಯಿದ್ದರೆ ಕುಪ್ರಭಾವ ಉಂಟಾಗುವುದಿಲ್ಲ.
ಕೇತುವಿನ ಈ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ವಿಚಾರಶೀಲ, ಅಧ್ಯಾಯನಶೀಲ, ಅಧ್ಯಾಪನ ಅಥವಾ ಶಿಕ್ಷಾಪ್ರದ ಕಾರ್ಯ ಮಾಡುವವರು,ಜ್ಯೋತಿಷಿ ವೈದ್ಯಾದಿ ಕ್ಷೇತ್ರಗಳಲ್ಲಿ ಅಭಿರುಚಿ ಯಿರುವವರು ಲೇಖಕ, ಪ್ರಾಮಾಣಿಕ ಚಂಚಲ ಪ್ರವೃತ್ತಿಯವರು, ಭ್ರಮಣ ಪ್ರಿಯರು,ಶರೀರದ ಮೇಲೆ ಗುಳ್ಳೆ ಅಥವಾ ಚರ್ಮರೋಗವುಳ್ಳವರು, ಮನೆಯಲ್ಲಿ ಕಲಹ ಮಾಡುವವರು ಹಾಗೂ ಮಹತ್ವಕಾಂಕ್ಷಿ ವಿಚಾರ ವುಳ್ಳವರಾಗಿರುತ್ತಾರೆ.
ವಿಂಶೋತ್ತರೀಯ ಅನುಸಾರ ಜಾತಕನ ಜನ್ಮದ ಸಮಯಕ ಕೇತುವಿನ ಮಹಾದೇಶೆ ಆರಂಭವಾಗುತ್ತದೆ.ಕೇತುವಿನ ಮಹಾದೆಶೆಯ ಒಟ್ಟು ಅವಧಿ ಏಳು ವರ್ಷಗಳು.ಒಂದೇ ವೇಳೆ ಜಾತಕನಿಗೆ ಕೇತುವಿನ ಮಹಾದೆಶೆ ಮತ್ತು ಮಂಗಳನ ಭುಕ್ತಿ ನಡೆಯುತ್ತಿದ್ದರೆ ಅಥವಾ ಮಂಗಳನ ಮಹಾ ದೆಶೆಯಲ್ಲಿ ಕೇತುವಿನ ಭುಕ್ತಿನಡೆಯುತ್ತಿದ್ದರೆ ಅಥ ಜಾತಕನು ಕುಂಡಲಿಯಲ್ಲಿ ಇದೇ ಗ್ರಹಗಳ ಭಾವಾನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾನೆ.ಅಲ್ಲದೆ, ನಾಡಿ ಪದ್ಧತಿಯ ಅನುಸಾರ ಇವೆರಡು ಗ್ರಹಗಳಲ್ಲಿ ಯಾವುದೇ ಗ್ರಹ ಅಶ್ವಿನಿ ನಕ್ಷತ್ರದ ಮೂಲಕ ಬ್ರಹ್ಮಣಿಸಿದರೂ,ಕೂಡ ಜಾತಕನು ಇದೇ ಗ್ರಹಗಳ ಭಾವಾನುಸಾರ ಫಲವನ್ನು ಪ್ರಾಪ್ತಿ ಹೊಂದುತ್ತಾನೆ. ಸೂರ್ಯನು ಅಶ್ವಿನಿ ನಕ್ಷತ್ರದ ಮೇಲೆ ಪ್ರತಿ ವರ್ಷ ವೈಶಾಖದ ಆರಂಭದಲ್ಲಿ ಸುಮಾರು 13 ಕಾಲು ದಿನಗಳವರೆಗೆ ಭ್ರಮಣ ಮಾಡುತ್ತಾನೆ ಮತ್ತು ಚಂದ್ರನ್ನು ಪ್ರತಿ 27ನೆಯ ದಿನ ಈ ನಕ್ಷತ್ರದ ಮೇಲೆ ವಿದ್ಯಾಮಾನನಾಗಿರುತ್ತಾನೆ.
ಚರಣ ಸ್ವಾಮಿ ಫಲ :
★ಅಶ್ವಿನಿ ನಕ್ಷತ್ರದ ಪ್ರಥಮ ಚರಣದ ಸ್ವಾಮಿ ಕೇತು ಮಂಗಳ ಜಾತಕವನ್ನು ಉಗ್ರ ಮತ್ತು ನಿರಂಕುಶನನ್ನಾಗಿ ಮಾಡುವರು.
★ದ್ವಿತೀಯ ಚರಣದ ಸ್ವಾಮಿ ಕೇತು ಶುಕ್ರ ಉಲ್ಲಾಸವನ್ನು ಪ್ರದಾನಿಸುವವರು.
★ತೃತೀಯ ಚರಣದ ಸ್ವಾಮೀ ಕೇತು ಬುಧ ಜಾತಕನ ವಿಚಾರಗಳಲ್ಲಿ ಅಸ್ಥಿರತೆ ಉಂಟು ಮಾಡುವರು..
★ಚತುರ್ಥಾ ಚರಣದ ಸ್ವಾಮಿ ಕೇತು ಚಂದ್ರ ಜಾತಕ್ ಜಾತಕನಲ್ಲಿ ಉಗಿಯಂಥ ಶಕ್ತಿಯನ್ನು ಉಂಟುಮಾಡುವರು.