ಮನೆ ಕ್ರೀಡೆ ಏಷ್ಯಾ ಕಪ್ ಟಿ-20 ವೇಳಾಪಟ್ಟಿ ಪ್ರಕಟ

ಏಷ್ಯಾ ಕಪ್ ಟಿ-20 ವೇಳಾಪಟ್ಟಿ ಪ್ರಕಟ

0

ದುಬೈ (Dubai): ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಸೆಣಸಲಿವೆ.

ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗುವ ಭಾರತ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆ ಕಂಡುಬರದಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿಯೂ ಅದೇ ತಂಡ ಆಡಲಿದೆ ಎಂದು ಏಷಿಯನ್ ಕ್ರಿಕೆಟ್ ಮಂಡಳಿಯ(ಎಸಿಸಿ) ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ. ಇದೇ ವೇಳೆ ಶ್ರೀಲಂಕಾದಿಂದ ದುಬೈಗೆ ಸ್ಥಳಾಂತರಿಸಲ್ಪಟ್ಟ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರು.

ಏಷ್ಯಾ ಕಪ್ ಕಾದಾಟವು ಆಗಸ್ಟ್ 27ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ.

ಏಷ್ಯಾ ಕಪ್‌ ಸರಣಿಯ ಗ್ರೂಪ್–ಎನಲ್ಲಿ ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ(ಇನ್ನಷ್ಟೆ ನಿರ್ಧಾರವಾಗಬೇಕಿದೆ) ಮತ್ತು ಗ್ರೂಪ್ ಬಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಗಳು ಇವೆ.

ಒಟ್ಟು 13 ಪಂದ್ಯಗಳು ನಡೆಯಲಿದ್ದು, 10 ಪಂದ್ಯಗಳು ದುಬೈನಲ್ಲಿ ಮತ್ತು 3 ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿವೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾ ಪಟ್ಟಿ: ಆಗಸ್ಟ್ 27:ಶ್ರೀಲಂಕಾ vs ಅಫ್ಘಾನಿಸ್ತಾನ (ದುಬೈ), ಆಗಸ್ಟ್ 28: ಭಾರತ vs ಪಾಕಿಸ್ತಾನ (ದುಬೈ), ಆಗಸ್ಟ್ 30: ಬಾಂಗ್ಲಾದೇಶ vs ಅಫ್ಗಾನಿಸ್ತಾನ (ಶಾರ್ಜಾ), ಆಗಸ್ಟ್ 31: ಭಾರತ ವಿರುದ್ಧ ಕ್ವಾಲಿಫೈಯರ್ (ದುಬೈ), ಸೆಪ್ಟೆಂಬರ್ 1 : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ (ದುಬೈ), ಸೆಪ್ಟೆಂಬರ್ 2 : ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್ (ಶಾರ್ಜಾ).

ಸೂಪರ್ ಫೋರ್ ಹಂತ: ಸೆಪ್ಟಂಬರ್ 3: ಬಿ1 vs ಬಿ2 (ಶಾರ್ಜಾ), ಸೆಪ್ಟೆಂಬರ್ 4:ಎ1 ವಿರುದ್ಧ ಎ2 (ದುಬೈ),

ಸೆಪ್ಟೆಂಬರ್ 6 : ಎ1 vs ಬಿ1 (ದುಬೈ), ಸೆಪ್ಟೆಂಬರ್ 7:ಎ2 ವಿರುದ್ಧ ಬಿ2 (ದುಬೈ), ಸೆಪ್ಟೆಂಬರ್ 8: ಎ1 ವಿರುದ್ಧ ಬಿ2 (ದುಬೈ), ಸೆಪ್ಟೆಂಬರ್ 9: ಬಿ1 ವಿರುದ್ಧ ಎ2 (ದುಬೈ), ಸೆಪ್ಟೆಂಬರ್.11: ಫೈನಲ್ (ದುಬೈ).

ಹಿಂದಿನ ಲೇಖನಕರಾಮುವಿ ಕುಲಪತಿ ಮೇಲೆ ಹಲ್ಲೆ ಆರೋಪ
ಮುಂದಿನ ಲೇಖನಮುಖ್ಯ ಆಯುಕ್ತರ ನಡೆ ವಲಯದ ಕಡೆ: ಪೂರ್ವ ವಲಯ ವ್ಯಾಪ್ತಿಯಲ್ಲಿ ಅಹವಾಲು ಸ್ವೀಕಾರ