ಲಾಹೋರ್: ಏಷ್ಯಾ ಕಪ್ ಕ್ರಿಕೆಟ್ ಕೂಟದ ಭಾನುವಾರದ ಪಂದ್ಯದಲ್ಲಿ ಅಪಾಯಕಾರಿ ತಂಡವಾದ ಆಫ್ಘಾನಿಸ್ತಾನ ಅಖಾಡಕ್ಕೆ ಇಳಿಯಲಿದೆ.
ಲಾಹೋರ್ ನಾ ಕರ್ನಲ್ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯುವ ‘ಬಿ’ ವಿಭಾಗದ ಮುಖಾಮುಖಿಯಲ್ಲಿ ಅದು ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾಕ್ಕೆ ಇದು ಅಳಿವು ಉಳಿವಿನ ಪಂದ್ಯವಾದ್ದರಿಂದ ಊಟದ ಕೌತುಕ ಸಹಜವಾಗಿಯೇ ಹೆಚ್ಚಿದೆ.
ಗುರುವಾರ ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧ ಆಡಲಾದ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಎಡವಿದ ಕಾರಣ ಬಾಂಗ್ಲಾದೇಶ ಪಾಲಿಗೆ ಇದು ಮಾಡು-ಮಡಿ ಪಂದ್ಯವಾಗಿ ಪರಿಣಮಿಸಿದೆ. ಸೋತ್ರೆ ಅದು ಕೂಟದಿಂದ ನಿರ್ಗಮಿಸಲಿದೆ ಹೀಗಾಗಿ ಆಫ್ಘಾನ್ ಪಡೆಯನ್ನು ಬಗ್ಗು ಬಡಿಯಲೇ ಬೇಕಾದ ಒತ್ತಡ ಶಕೀಬ್ ಆಲ್ ಹಸನ್ ತಂಡದ ಮೇಲಿದೆ.
ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ಸೋಲಲು ಮುಖ್ಯ ಕಾರಣ ಬ್ಯಾಟಿಂಗ್ ವೈಫಲ್ಯ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಕಾಯ್ದುಕೊಂಡರು 164 ರನ್ನುಗಳ ಸಣ್ಣ ಮೊತ್ತಕ್ಕೆ ಆ ಲೋಟ ಆಗಿತ್ತು. ವನ್ ಡೌನ್ ಬ್ಯಾಟರ್ ನಜ್ಮುಲ್ ಹುಸೇನ್ ಏಕಾಂಗಿಯಾಗಿ ಹೋರಾಡಿ 89 ರನ್ ಬಾರಿಸಿದ ಕಾರಣ ಬಾಂಗ್ಲಾದಿಂದ ಇಷ್ಟಾದರೂ ರನ್ ಗಳಿಸಲು ಸಾಧ್ಯವಾಗಿತ್ತು. ಅನುಭವಿ ಶಕೀಬ್ ಅಲ್ ಹುಸೇನ್ ಸೇರಿದಂತೆ ಉಳಿದವರ್ಯಾರಿಂದಲೂ ಲಂಕಾ ದಾಳಿಯನ್ನು ತಡೆದು ನಿಲ್ಲಲು ಸಾಧ್ಯವಾಗಿರಲಿಲ್ಲ. ವೇಗಿ ಮತೀಶ ಪತಿರಣ ಘಾತಕ ಸ್ಪೆಲ್ ಮೂಲಕ ಬಾಂಗ್ಲಾ ಟೈಗರ್ ಗಳನ್ನು ಬೇಟೆಯಾಡಿದ್ದರು.
ಚೇಸಿಂಗ್ ವೇಳೆ ಶ್ರೀಲಂಕಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಸದೀರ ಸಮರವಿಕ್ರಮ ಮತ್ತು ಚರಿತ ಅಸಲಂಕ ಕ್ರಿಸ್ ಆಕ್ರಮಿಸಿಕೊಂಡ ಪರಿಣಾಮ ಲಂಕಾ 39 ಗಳಲ್ಲಿ ಗುರಿಮುಟ್ಟಿತ್ತು.
ಗೆಲುವಿನ ಕಥೆ ತೆರೆದು ಕೂಟದಲ್ಲಿ ಮುಂದುವರಿಯಬೇಕಾದರೆ ಬಾಂಗ್ಲಾದ ಬ್ಯಾಟಿಂಗ್ ವಿಭಾಗ ಕ್ಲಿಕ್ ಆಗಬೇಕಾದದ್ದು ಅಗತ್ಯ ಅಗತ್ಯ ಆದರೆ ಮೊಹಮ್ಮದ್ ನೈನ್ ತಂಜಿದ್ ಹಸನ್ ಅವರ ಆರಂಭಿಕ ಜೋಡಿ ಮೇಲೆ ಭರವಸೆ ಸಾಲದು. ಇವರಲ್ಲಿ ತಾಂಜಿದ್ ಲಂಕಾ ವಿರುದ್ಧ ಪಾದಾರ್ಪಣೆಗೈದು ಸೊನ್ನೆ ಸುತ್ತಿ ಬಂದಿದ್ದಾರೆ. ಅನುಭವಿಗಳಾದ ಮುಶ್ಫಿಕರ್ ರಹೀಂ, ಶಕೀಬ್, ಭರವಸೆಯ ಬ್ಯಾಟರ್ ತೌಹಿದ್ ಹೃದಯ್ ಕ್ರಿಸ್ ಆಕ್ರಮಿಸಿಕೊಳ್ಳಬೇಕಿದೆ.
ಬಾಂಗ್ಲಾ ಬೌಲಿಂಗ್ ವಿಭಾಗ ಘತಕವಾಗಿಯೇ ಇದೆ. ಟಸ್ಕಿನ್ ಅಹಮದ್, ಶೋರಿಫುಲ್ ಇಸ್ಲಾಂ, ಶಕೀಬ್, ಮೆಹಂದಿ ಹಸನ್ ಇಲ್ಲಿ ಪ್ರಮುಖರು ಲಂಕೆಗೆ ಸಣ್ಣ ಟಾರ್ಗೆಟ್ ಲಭಿಸಿದ ಕಾರಣ ಇವರಿಗೆ ಏನು ಮಾಡಲಾಗಲಿಲ್ಲ.
ಆಫ್ಘಾನಿಸ್ತಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾದ ಪಡೆ ಅಪಾಯಕಾರಿಯಾಗಿ ಎದುರಾಳಿ ಮೇಲಿರಬಹುದು. ಹೋರಾಟ ನೀಡದೆ ಶರಣಾಗಲುಬಹುದು. ಆದರೆ ಜೂನ್ ಜುಲೈಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಸರಣಿಯನ್ನು 2-1ರಿಂದ ಗೆದ್ದ ಹೆಗ್ಗಳಿಕೆಯನ್ನು ಹೊಂದಿದೆ.
ಆಫ್ಘಾನ್ ಆರಂಭದ ರೆಹಮಾನುಲ್ಲಾ, ಗುರ್ಬಜ್ ಪ್ರಚಂಡ ಫಾರ್ಮನಲ್ಲಿದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಹಶ್ಮತುಲ್ಲ ಶಾಹಿದ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ ಅವರೆಲ್ಲ ಬ್ಯಾಟಿಂಗ್ ವಿಭಾಗದ ಆಧಾರ ಸ್ತಂಭವಾಗಿದ್ದಾರೆ.
ಇತ್ತೀಚಿಗಷ್ಟೇ ನಾಯಕತ್ವ ಕಳೆದುಕೊಂಡ ಲೇಗ್ ಸ್ಪಿನ್ನರ್ ರಶೀದ್ ಖಾನ್, ಆಫ್ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೌಲಿಂಗ್ ಶಕ್ತಿಯಾಗಿದ್ದಾರೆ ಮೇಲ್ನೋಟಕ್ಕೆ ಬಾಂಗ್ಲಾ ಕಿಂತ ಆಫ್ಘಾನಿಸ್ತಾನವೇ ಬಲಿಷ್ಠ ತಂಡವಾಗಿ ಗೋಚರಿಸುತ್ತದೆ.