ಮನೆ ಕ್ರೀಡೆ ಏಷ್ಯನ್ ಗೇಮ್ಸ್‌: ಶೂಟಿಂಗ್ ​ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ

ಏಷ್ಯನ್ ಗೇಮ್ಸ್‌: ಶೂಟಿಂಗ್ ​ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ

0

2023 ರ ಏಷ್ಯನ್ ಗೇಮ್ಸ್‌ನ  ಶೂಟಿಂಗ್‌ ನಲ್ಲಿ ಭಾರತದ ಉತ್ತಮ ಆಟ ಮುಂದುವರೆದಿದೆ. ಇಶಾ ಸಿಂಗ್ ಎರಡನೇ ಸ್ಥಾನ ಗಳಿಸಿ ಬೆಳ್ಳಿಯನ್ನು ತಂದುಕೊಟ್ಟರೆ, ಪಾಲಕ್ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

Join Our Whatsapp Group

10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ ನಲ್ಲಿ ಭಾರತಕ್ಕೆ ಇದು ಡಬಲ್ ಧಮಾಕ ಎನ್ನಬಹುದು. 18 ವರ್ಷದ ಪಾಲಕ್ ಶುಕ್ರವಾರ 241.2 ಗೆಲುವಿನ ಸ್ಕೋರ್‌ ನೊಂದಿಗೆ ಚಿನ್ನದ ಪದಕ ತಮ್ಮದಾಗಿಸಿದು. ಹ್ಯಾಂಗ್‌ ಝೌನಲ್ಲಿ ಭಾರತಕ್ಕೆ ಸಿಕ್ಕ ಎಂಟನೇ ಚಿನ್ನ ಇದಾಗಿದೆ.

ಇನ್ನು ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಏಷ್ಯನ್ ಗೇಮ್ಸ್ 2023 ರ ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇಂದು ನಡೆದ ಪಂದ್ಯದಲ್ಲಿ, ತೈವಾನ್‌ನ ಜೋಡಿಯಾದ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ವಿರುದ್ಧ 6-4, 6-4 ರಿಂದ ಸೋತು ಚಿನ್ನ ಗೆಲ್ಲುವಲ್ಲಿ ಎಡವಿ ಬೆಳ್ಳಿ ತಮ್ಮದಾಗಿಸಿದರು.