ಮಂಗಳೂರು: ಇಂದು ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಮತ್ತು ಪ್ರೋತ್ಸಾಹ ಇದೆ. ಎಲ್ಲರೂ ಉನ್ನತ ಶಿಕ್ಷಣ ಪಡೆದು ಉತ್ತಮ ಮತ್ತು ಗೌರವಯುತ ಉದ್ಯೋಗಕ್ಕೆ ಹಂಬಲ ಪಡುತ್ತಿರುವುದು ಸಹಜವೇ ಆಗಿದೆ. ಪಿಯುಸಿ, ಪದವಿ, ಉನ್ನತ ಶಿಕ್ಷಣ ಪಡೆಯುತ್ತಿದ್ದಂತೆ ಕೆಲವರು ವಿದ್ಯಾರ್ಜನೆಯಲ್ಲಿ ಆಸಕ್ತಿ ಕಳೆದುಕೊಳ್ಳುವವರೂ ಇದ್ದಾರೆ. ಒಂದು ಉದ್ಯೋಗ ಸಿಗಬಹುದೇ ಅನ್ನೋ ಜಿಜ್ಞಾಸೆ ಇನ್ನೊಂದು ಕೆಲವರು ವೃತ್ತಿಪರ ಕೋರ್ಸುಗಳಲ್ಲಿ ಆಸಕ್ತಿ ಇದ್ದರೂ ಶಿಕ್ಷಣದಲ್ಲಿ ಆಯ್ಕೆ ಮಾಡುವಲ್ಲಿ ಎಡವಿದ್ದೇವೆ ಅನ್ನೋ ಭಾವನೆ ಮೂಡುತ್ತದೆ. ಈ ಎಲ್ಲಾ ಬಾವನೆಗಳನ್ನು ಮೀರಿ ಉದ್ಯೋಕಾಂಕ್ಷಿಗಳ ದಾರಿದೀಪವಾಗಿ ಮಂಗಳೂರಿನ ಸುಪ್ರಸಿದ್ಧ ದಾಸ್ ಪ್ರಮೋಷನ್ಸ್ ಹೋಂನರ್ಸಿಂಗ್ ಸೇವಾ ಸಂಸ್ಥೆಯು ಕಾರ್ಯಚರಿಸುತ್ತಿದೆ.
ಸಂಸ್ಥೆಯ ಸೇವಾ ಕಾರ್ಯವೈಖರಿಯ ಬಗ್ಗೆ ತಿಳಿಯಲು ಮುಂದೆ ಓದಿ…..
ರಾಜ್ಯದಾದ್ಯಂತ ಶಾಖೆಗಳು
ಕರ್ನಾಟಕ ರಾಜ್ಯದಾದ್ಯಂತ ಕಳೆದ ಎರಡು ದಶಕಗಳಿಂದ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದಾಸ್ ಸೇವಾಸಂಸ್ಥೆಯು ಅವಿಭಜಿತ ದ.ಕ. ಉಡುಪಿ ಸೇರಿ ಕರ್ನಾಟಕ ರಾಜ್ಯದ ಬೆಂಗಳೂರು, ಕೋರಮಂಗಲ, ಮೈಸೂರು, ಹುಬ್ಬಳ್ಳಿ, ಬೆಳಗಾಂ, ಹಾಸನ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮುಂತಾದೆಡೆ ಶಾಖೆಗಳನ್ನು ವಿಸ್ತರಿಸಿಕೊಂಡಿದೆ.
ಆಸ್ಪತ್ರೆಗಳಲ್ಲೇ ತರಬೇತಿ, ಖಚಿತ ಉದ್ಯೋಗ
ಹೌದು ಯಾವುದೇ ಶಿಕ್ಷಣ ಪಡೆದಿದ್ದರೂ ಸರಿ. ನೀವು ಪರುಷರೇ ಇರಲಿ, ಮಹಿಳೆಯರೇ ಇರಲಿ ನಿಮಗೆ ಪ್ರತ್ಯೇಕವಾಗಿ ನರ್ಸಿಂಗ್ ತರಬೇತಿ ನೀಡಿ ವಿವಿಧ ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ ಉದ್ಯೋಗವಕಾಶ ಮಾಡಿಕೊಡುವ ವಿಶ್ವಸಾರ್ಹ ಮಂಗಳೂರಿನ ಪ್ರಸಿದ್ಧ ಸಂಸ್ಥೆಯಾಗಿದೆ. ಏಳನೇ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಆದ ಅಭ್ಯರ್ಥಿಗಳಿಗೆ ನರ್ಸಿಂಗ್ ತರಬೇತಿಯನ್ನು ನೀಡಿ ಸದೃಢವನ್ನಾಗಿಸುತ್ತಾರೆ. ವಿಶೇಷವೆಂದರೆ ಆಸ್ಪತ್ರೆ ಮುಖಾಂತರವೇ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡುವ ವಿಶೇಷ ಸಂಸೆಯಾಗಿದೆ. ಹೀಗೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಸುಪ್ರಸಿದ್ಧ ಆಸ್ಪತ್ರೆಗಳಲ್ಲಿ ಶೇ. 100ರಷ್ಟು ಉದ್ಯೋಗ ಒದಗಿಸುವ ಜವಾಬ್ದಾರಿಯನ್ನು ದಾಸ್ ಸೇವಾ ಸಂಸ್ಥೆಯು ವಹಿಸಿಕೊಳ್ಳುತ್ತದೆ. ತರಬೇತಿ ಅವಧಿಯಲ್ಲಿ ಊಟ, ಸಮವಸ್ತ್ರ ಹಾಸ್ಟೇಲ್ ಉಚಿತವಾಗಿರುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೇಲ್ ಇದ್ದು, ಗೌರವ ವೇತನ ಆರಂಭದಲ್ಲಿ 15 ಸಾವಿರ ದಿಂದ 25 ಸಾವಿರದ ತನಕ ವೇತನ ಹಾಗೂ ಸಂಸ್ಥೆಯ ಪೂರ್ಣ ಭದ್ರತೆ ಇರುತ್ತದೆ.
ಟ್ರಸ್ಟ್ ಮುಖಾಂತರ ಸಮಾಜಮುಖಿ ಸೇವೆ
ದಾಸ್ ಪ್ರಮೋಷನ್ಸ್ ನ ಆಡಳಿತ ವ್ಯವಸ್ಥಾಪಕ ನಿರ್ದೇಶಕರಾದ ಲ| ಅನಿಲ್ ದಾಸ್ ಮತ್ತು ಶ್ರೀಮತಿ ಆಶಾಲತಾ ದಾಸ್ ನೇತೃತ್ವದಲ್ಲಿ ಐದು ಅಂಗಸಂಸ್ಥೆಗಳು ಸಮಾಜಮುಖಿಯಾಗಿ ಸೇವೆಗೈಯ್ಯುತ್ತಿದೆ. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮುಖಾಂತರ ಕಳೆದ ಹಲವು ವರ್ಷಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಲವಾರು ಕುಟುಂಬ ನೆರವಾಗಿದೆ. ಶೈಕ್ಷಣಿಕವಾಗಿ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಉದ್ಯೋಗ ಅವಶ್ಯಕತೆ ಇರುವ ಯುವಕ, ಯುವತಿಯರು ಮಂಗಳೂರು ಕಂಕನಾಡಿಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ (0824-2432744, 9845495055, 9343568915) ಸಂಪರ್ಕಿಸಬಹುದಾಗಿದೆ.














