ಮನೆ ಅಪರಾಧ ದಸರಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಐವರ ಮೇಲೆ  ಎಫ್ ಐಆರ್

ದಸರಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಐವರ ಮೇಲೆ  ಎಫ್ ಐಆರ್

0

ಮೈಸೂರು: ದಸರಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ಸಂಬಂಧ ಬೆಂಗಳೂರಿನ ಐವರ ಮೇಲೆ ಎಫ್ ​ಐಆರ್ ದಾಖಲಾಗಿದೆ.

ಮೈಸೂರಿನ ಹಾರ್ಡಿಂಗ್ ಸರ್ಕಲ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಅವರು ರಸ್ತೆಯಲ್ಲಿ ಜನಸಂದಣಿ ನಿಯಂತ್ರಿಸಲು ಜನರನ್ನು ಬೇಗ ಹೋಗುವಂತೆ ಹೇಳುತ್ತಿದ್ದರು. ಟ್ರಾಫಿಕ್​ ಜಾಮ್ ಆಗುತ್ತೆ ಮುಂದೆ ಹೋಗಿ. ಬೇಗ ಹೋಗಿ ಎಂದಿದ್ದಕ್ಕೆ ಐವರು ಸೇರಿಕೊಂಡು ಪೊಲೀಸರ ಮೇಲೆಯೇ ದೌರ್ಜನ್ಯ ಎಸಗಿದ್ದಾರೆ.

ಘಟನೆ ಸಂಬಂದ ದಸರಾ ವೀಕ್ಷಣೆಗೆ ಬಂದಿದ್ದ ಬೆಂಗಳೂರು ಮೂಲದ ಉಮೇಶ್, ಹರೀಶ್, ಧ್ರುವ, ಲತಾ, ಗಾನವಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.