ಮನೆ ಸುದ್ದಿ ಜಾಲ ವಿಧಾನಸಭಾ ಚುನಾವಣೆ: ಮನೆಯಿಂದಲೇ ಮತದಾನ ಮಾಡಿದವರೆಷ್ಟು ಮಂದಿ? ಇಲ್ಲಿದೆ ಮಾಹಿತಿ

ವಿಧಾನಸಭಾ ಚುನಾವಣೆ: ಮನೆಯಿಂದಲೇ ಮತದಾನ ಮಾಡಿದವರೆಷ್ಟು ಮಂದಿ? ಇಲ್ಲಿದೆ ಮಾಹಿತಿ

0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ನೀಡಿರುವ ಅವಕಾಶ ಬಹುತೇಕ ಯಶಸ್ವಿಯಾಗಿದೆ.

Join Our Whatsapp Group

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಒಟ್ಟು 80,250 ಮಂದಿ ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದ್ದರು ಅದರಲ್ಲಿ ಮೇ 4ರ ವರೆಗೆ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರ ಪೈಕಿ ಶೇ 92ರಷ್ಟು ಮಂದಿ ಮತದಾನ ಮಾಡಿದ್ದಾರೆ ಎಂದು ಆಯೋಗ ಹೇಳಿದೆ.

ಏಪ್ರಿಲ್ 29ರಿಂದ ಮನೆಯಿಂದಲೇ ಮತದಾನ ಆರಂಭವಾಗಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತ ಪಡೆದುಕೊಂಡು ವಾಪಸಾಗುತ್ತಿದ್ದಾರೆ. 80 ವರ್ಷ ಮೇಲ್ಪಟ್ಟ 80,250 ಮಂದಿ ಪೈಕಿ ಈವರೆಗೆ 73,743 ಮಂದಿ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 91.89ರಷ್ಟು ಜನ ಮತದಾನ ಮಾಡಿದಂತಾಗಿದೆ.

ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದ 19,279 ಅಂಗವಿಕಲರ ಪೈಕಿ 17,943 ಮಂದಿ ಮೇ 4ರ ವರೆಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 93.7ರಷ್ಟು ಮತದಾನವಾದಂತಾಗಿದೆ.

ಮನೆಯಿಂದಲೇ ಮತದಾನದ ಮೂಲಕ ಪಡೆಯಲಾಗಿರುವ ಮತಗಳನ್ನು ಸ್ಟ್ರಾಂಗ್​ ರೂಮ್​​ಗಳಲ್ಲಿ ಭದ್ರವಾಗಿ ಇರಿಸಲಾಗಿದ್ದು, ಮೇ 13ರಂದು ಮತ ಎಣಿಕೆ ದಿನ ತೆರೆಯಲಾಗುವುದು ಎಂದು ಆಯೋಗ ಹೇಳಿದೆ.