ಮನೆ ರಾಜಕೀಯ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನ ಎರಡನೇ ಪಟ್ಟಿ ಪ್ರಕಟ, ಇಲ್ಲಿದೆ ಮಾಹಿತಿ

ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನ ಎರಡನೇ ಪಟ್ಟಿ ಪ್ರಕಟ, ಇಲ್ಲಿದೆ ಮಾಹಿತಿ

0

ಬೆಂಗಳೂರು:  ಕರ್ನಾಟಕ ವಿಧಾನಸಭಾ ಚುನಾವಣೆಗೆ 42 ಕ್ಷೇತ್ರದಲ್ಲಿನ  ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್‌ ಇಂದು ಪ್ರಕಟಿಸಿದೆ.

Join Our Whatsapp Group

ಆದರೆ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಪ್ರಮುಖವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ್ದ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರಿಗೆ ಕೊಕ್ ನೀಡಲಾಗಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ.

ಕಳೆದ ಮಾರ್ಚ್ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 52 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ.

ಇತ್ತೀಚೆಗೆ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕೆಲವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಮುಖ್ಯವಾಗಿ ಇತ್ತೀಚೆಗಷ್ಟೇ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್.ವೈ ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇನ್ನು ಸಿದ್ದರಾಮಯ್ಯನವರ ಆಪ್ತ ಹೆಚ್ ಆಂಜನೇಯ್ಯ ಅವರಿಗೆ ಹೊಳಲ್ಕೇರೆ ಟಿಕೆಟ್ ಸಿಕ್ಕಿದೆ.

42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು

•       ನಾಗಠಾಣ ಕ್ಷೇತ್ರ(ಎಸ್ಸಿ) – ವಿಠ್ಠಲ್ ಕಟಕದೊಂಡ

•       ವಿಜಯಪುರ ಕ್ಷೇತ್ರ – ಅಬ್ದುಲ್ ಹಮೀದ್ ಖಾಜಾಸಾಹೇಬ್

•       ಬಾಗಲಕೋಟೆ ವಿಧಾನಸಭಾ ಕ್ಷೇತ್ರ – ಹೆಚ್.ವೈ.ಮೇಟಿ

•       ಬಾದಾಮಿ ಕ್ಷೇತ್ರ- ಭೀಮ್ಸೇನ್ ಚಿಮ್ಮನಕಟ್ಟಿ

•       ಬೀಳಗಿ ಕ್ಷೇತ್ರ -ಜೆ.ಟಿ.ಪಾಟೀಲ್

•       ಮುಧೋಳ ಕ್ಷೇತ್ರ(ಎಸ್ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪುರ

•       ಸವದತ್ತಿ ಕ್ಷೇತ್ರ- ವಿಶ್ವಾಸ್ ವಸಂತ್ ವೈದ್ಯ

•       ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್ ಬಿ.ಪಾಟೀಲ್

•       ಗೋಕಾಕ್ ಕ್ಷೇತ್ರ – ಡಾ.ಮಹಾಂತೇಶ್ ಕಡಾಡಿ

•       ನಿಪ್ಪಾಣಿ ಕ್ಷೇತ್ರ-ಕಾಕಾ ಸಾಹೇಬ್ ಪಾಟೀಲ್

•       ಅಫಜಲಪುರ -ಎಂ.ವೈ. ಪಾಟೀಲ್

•       ಯಾದಗಿರಿ -ಚನ್ನಾರೆಡ್ಡಿ ಪಾಟೀಲ್ ತುನ್ನೂರ್

•       ಗುರುಮಿಠಕಲ್ ಕ್ಷೇತ್ರ -ಬಾಬುರಾವ್ ಚಿಂಚನಸೂರ್

•       ಗುಲಬರ್ಗಾ ದಕ್ಷಿಣ ಕ್ಷೇತ್ರ -ಅಲ್ಲಮಪ್ರಭು ಪಾಟೀಲ್

•       ಬಸವಕಲ್ಯಾಣ ಕ್ಷೇತ್ರ -ವಿಜಯ ಧರ್ಮಸಿಂಗ್

•       ಗಂಗಾವತಿ ಕ್ಷೇತ್ರ -ಇಕ್ಬಾಲ್ ಅನ್ಸಾರಿ

•       ನರಗುಂದ ಕ್ಷೇತ್ರ -ಬಿ.ಆರ್.ಯಾವಗಲ್

•       ಧಾರವಾಡ ಕ್ಷೇತ್ರ -ವಿನಯ್ ಕುಲಕರ್ಣಿ

•       ಕಲಘಟಗಿ ಕ್ಷೇತ್ರ -ಸಂತೋಷ್ ಲಾಡ್

•       ಶಿರಸಿ ಕ್ಷೇತ್ರ -ಭೀಮಣ್ಣ ನಾಯಕ್

•       ಕೊಳ್ಳೇಗಾಲ ಕ್ಷೇತ್ರ -ಎ.ಆರ್.ಕೃಷ್ಣಮೂರ್ತಿ

•       ಚಾಮುಂಡೇಶ್ವರಿ ಕ್ಷೇತ್ರ -ಸಿದ್ದೇಗೌಡ

•       ಮಡಿಕೇರಿ ಕ್ಷೇತ್ರ -ಡಾ.ಮಂಥರ್ ಗೌಡ

•       ಬೇಲೂರು -ಬಿ. ಶಿವರಾಂ

•       ಕೃಷ್ಣರಾಜ ಪೇಟೆ ಕ್ಷೇತ್ರ -ಬಿ.ಎಸ್. ದೇವರಾಜ್

•       ಮಂಡ್ಯ ಕ್ಷೇತ್ರ -ಪಿ. ರವಿಕುಮಾರ್

•       ಮೇಲುಕೋಟೆ ಕ್ಷೇತ್ರ -ದರ್ಶನ್ ಪುಟ್ಟಣ್ಣಯ್ಯ

•       ಪದ್ಮನಾಭನಗರ ಕ್ಷೇತ್ರ -ವಿ.ರಘುನಾಥ್ ನಾಯ್ಡು

•       ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ -ಕೇಶವಮೂರ್ತಿ

•       ಯಶವಂತಪುರ ಕ್ಷೇತ್ರ -ಎಸ್.ಬಾಲರಾಜಗೌಡ

•       ಯಲಹಂಕ ಕ್ಷೇತ್ರ -ಕೇಶವ ರಾಜಣ್ಣ.ಬಿ

•       ಗುಬ್ಬಿ ಕ್ಷೇತ್ರ -ಎಸ್.ಆರ್.ಶ್ರೀನಿವಾಸ್

•       ತುಮಕೂರು ನಗರ ಕ್ಷೇತ್ರ -ಇಕ್ಬಾಲ್ ಅಹ್ಮದ್

•       ಕಡೂರು ಕ್ಷೇತ್ರ -ಆನಂದ್ ಕೆ.ಎಸ್

•       ಉಡುಪಿ ಕ್ಷೇತ್ರ -ಪ್ರಸಾದ್ ರಾಜ್ ಕಂಚನ್

•       ತೀರ್ಥಹಳ್ಳಿ ಕ್ಷೇತ್ರ -ಕಿಮ್ಮನೆ ರತ್ನಾಕರ್

•       ಚನ್ನಗಿರಿ ಕ್ಷೇತ್ರ-ಬಸವರಾಜು.ವಿ