ಮನೆ ರಾಜ್ಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ನಾಗೇಂದ್ರಪ್ಪ ಬಳಿ 2.61 ಕೋಟಿ ಮೊತ್ತದ ಆಸ್ತಿ:  8 ನಿವೇಶನಗಳ ಒಡೆಯ

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ನಾಗೇಂದ್ರಪ್ಪ ಬಳಿ 2.61 ಕೋಟಿ ಮೊತ್ತದ ಆಸ್ತಿ:  8 ನಿವೇಶನಗಳ ಒಡೆಯ

0

ತುಮಕೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಶಿರಾ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ನಾಗೇಂದ್ರಪ್ಪ ಎಂಟು ನಿವೇಶನಗಳ ಒಡೆಯ  ಎಂಬುದು ಲೋಕಾಯುಕ್ತ ದಾಳಿಯಲ್ಲಿ ತಿಳಿದುಬಂದಿದೆ.

ನಾಗೇಂದ್ರಪ್ಪ ಅವರ ನಗರದ ಮನೆ, ತೋಟದ ಮನೆ, ಶಿರಾ ಕಚೇರಿ ಸೇರಿದಂತೆ ಐದು ಕಡೆ ಸೋಮವಾರ ಏಕಕಾಲಕ್ಕೆ ಜಾಲಾಡಿದ ಲೋಕಾಯುಕ್ತ ಪೊಲೀಸರು ಒಟ್ಟು ₹2.61 ಕೋಟಿ ಮೊತ್ತದ ಆಸ್ತಿ ಪತ್ತೆ ಹಚ್ಚಿದ್ದಾರೆ. ಇದು ನಾಗೇಂದ್ರಪ್ಪ ಆದಾಯಕ್ಕಿಂತ ಶೇ 220ರಷ್ಟು ಹೆಚ್ಚು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ತುಮಕೂರು ನಗರದ ಬಟವಾಡಿಯ ಮಿರ್ಜಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆ ಸೇರಿದಂತೆ ಎರಡು ಮನೆ, ವಿವಿಧ ಕಡೆಗಳಲ್ಲಿ ಎಂಟು ನಿವೇಶನ, 18 ಎಕರೆ 8 ಗುಂಟೆ ಕೃಷಿ ಜಮೀನು ಪತ್ತೆಯಾಗಿದೆ. ಅವುಗಳ ಒಟ್ಟು ಮೌಲ್ಯ ₹1.64 ಕೋಟಿ ಎಂದು ಅಂದಾಜಿಸಲಾಗಿದೆ.

1 ಕೆ.ಜಿ 300 ಗ್ರಾಂ ಚಿನ್ನಾಭರಣ, 2 ಕೆ.ಜಿ 400 ಗ್ರಾಂ ಬೆಳ್ಳಿ ಸಾಮಗ್ರಿ, ₹27 ಸಾವಿರ ನಗದು, ಎರಡು ಕಾರು, ಎರಡು ಬೈಕ್ ಸೇರಿದಂತೆ ₹97.18 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಒಟ್ಟಾರೆ ₹2.61 ಕೋಟಿ ಮೊತ್ತದ ಆಸ್ತಿ ಸಂಪಾದಿಸಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ವರಿಷ್ಠಾಧಿಕಾರಿ ವಲಿಬಾಷಾ ನೇತೃತ್ವದಲ್ಲಿ ಡಿವೈಎಸ್‌ ಪಿಗಳಾದ ಮಂಜುನಾಥ್, ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

ಹಿಂದಿನ ಲೇಖನವಿಜಯಪುರದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ ಗಳ ಸಂಚಾರ ಸ್ಥಗಿತ
ಮುಂದಿನ ಲೇಖನವಿಶ್ವಕಪ್:  ಇಂದು ಪಾಕಿಸ್ತಾನ – ಬಾಂಗ್ಲಾದೇಶ ಮುಖಾಮುಖಿ