ಮನೆ ಮನೆ ಮದ್ದು ಕಕ್ಕೆಮರ

ಕಕ್ಕೆಮರ

0

ಮಾಲಾಕಾರವಾಗಿ ಚಿನ್ನದ ಬಣ್ಣದ ಹೂಗಳ ಗೊಂಚಿನ ದೆಸೆಯಿಂದ ಕೃತಮಾಲಾ ಹೆಸರು. ನುಗ್ಗೇಕಾಯಿಯಂತೆ ದುಂಡಗಿನ ಕಾಯಿ, ಬಲಿತಾಗ ಕರಿಬಣ್ಣ, ಸಂಯುಕ್ತ ಎಲೆ, ಬಿಳಿ ಬೂದು ಕಾಂಡ, ಏಪ್ರಿಲ್ ಹೊತ್ತಿಗೆ ಹೂ, ಅನಂತರ ತೊನೆ ದಾಡುವ ದುಂಡನೆ ಕಾಯಿ ಗೊಂಚಲುಗಳು. ಓಣಂ ಹಬ್ಬದ ಸಮಯದಲ್ಲಿ ಕೊನ್ನೆ ಮರದ ಹೂ ತಂದು ಅಲಂಕಾರಕ್ಕೆ ಬಳಸುತ್ತಾರೆ.    

ಕಳಿತ ಉದ್ದನೆಯ ಕರಿ ಕಾಯಿ ತಂದು ಹಸಿ ಮರಳಿನಲ್ಲಿ ವಾರಗಟ್ಟಲೆ ಹೂತಿಡಬೇಕು. ಗಟ್ಟಿಯಾದ ಹೊರಕವಚ ಮೆದುವಾದಾಗ ಅದರೊಳಗಿನ ಮೇಣ ಸಿಹಿ, ಅಂಟಿನಂತಿರುತ್ತದೆ. ಅದರಲ್ಲಿ ಹುದುಗಿರುವ ಕಿರಿಬೀಜ, ಕಕ್ಕೆಯಲ್ಲಿ ಬಳಕೆಗೆ ಬರುವಂಥ ಭಾಗ ಈ ಮೇಣವೇ.         

ಔಷಧೀಯ ಗುಣಗಳು :-

* ಮೇಣ ಕಲಿಸಿದ ಕುದಿವ ನೀರನ್ನು ತಣಿಸಿ ಕುಡಿದರೆ ಜ್ವರವು ಗುಣವಾಗುತ್ತದೆ.

* ಮಧುಮೇಹ ರೋಗಿಗಳಿಗೆ ಮಲಬದ್ಧತೆ ತೀವ್ರ ಅವರಲ್ಲಿ ಸಹ ಮೇಣಬಳಕೆ ಹಿತಕಾರಿಯಾಗಿದೆ.

* ಗರ್ಭಿಣಿ, ಎಲೆ ಮಕ್ಕಳ ಮಲಬದ್ಧತೆಗೆ ಸಹ ಕಕ್ಕೆ ಮೇಣ ಬಳಸುವುದು ಹಿತಕಾರಿಯಾಗಿದೆ.

* ಎಲೆ ಚಿಗುರು, ಹೂಗಳ ಹಸಿಗೊಜ್ಜು, ತಂಬುಳಿ ಬಳಕೆಯಿಂದ ಬಾಯಿ ರುಚಿ ವೃದ್ಧಿಸುತ್ತದೆ. ಕಾಮಾಲೆ ಮತ್ತು ಹಳೆಯ ಮಲಬದ್ದತೆಗೆ ಚಕ್ಕೆ ತೆಗೆದು ಅನ್ನದ ಸಂಗಡ ಬೇಯಿಸಿ ತಿನ್ನುವುದರಿಂದ ಕಾಮಾಲೆ ರೋಗಿಗೆ ಗುಣಾಕಾರಿಯಾಗಿದೆ.

* ತೊಗಟೆ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿದರೆ ಗಂಟಲು ಉರಿ, ಗಂಟಲು ಬಾವು, ಗಂಟು, ಬಾಯಿ ಹುಣ್ಣು ಉಪಶಮನವಾಗುತ್ತದೆ.