ಮನೆ ಜ್ಯೋತಿಷ್ಯ ಅಸ್ತಮ

ಅಸ್ತಮ

0

 ಅಸ್ತಮಾ ಎಂದರೇನು?

        ಅಸ್ತಮ ಎಂಬುದೊಂದು ಶ್ವಾಸಕೋಶನಾಳ ರೋಗ. ಇದು  ಶ್ವಾಸನಾಳಗಳ ಸೋಂಕು ವ್ಯಾದಿಯಿಂದ ಊತ ಉಂಟಾಗಿ, ಈ ಊತ ಉಸಿರಾಟದ ಈ ನಾಳಗಳನ್ನು ಕಿರುದಾಗಿಸುತ್ತದೆ ಅಥವಾ ಹೆಚ್ಚು ಕಫದಿಂದ ಕೂಡಿ ಶಾಸೋಶ್ವಾಸಕ್ಕೆ ಅತೀವ ತೊಂದರೆಯಾಗಿ ಎದೆ ಕಟ್ಟಿದ ಅನುಭವವಾಗುವುದು. ಇದನ್ನು ನಾವು ಅಸ್ತಮ ವ್ಯಾಧಿ ಎಂದು ಕರೆಯುತ್ತೇವೆ. ಆರಂಭದಲ್ಲಿ ಕೆಮ್ಮು ಕೂಡ ಕಾಣಿಸುತ್ತದೆ. ಜಾಗತೀಕ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ  20 ಕೋಟಿ ಜನರು ಆಸ್ತಮದಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು ಎರಡು ಕೋಟಿ ಜನರು ಅಸ್ತಮದಿಂದ ನರಳಿ ಮರಣಿಸುತ್ತಿದ್ದಾರೆ.

Join Our Whatsapp Group

 ಈ ಆಸ್ತಮದಲ್ಲಿ ಎರಡು ವಿಧಗಳು :

1. ಹೃದಯ ಸಂಬಂಧವಾಗಿ ಉಸಿರಾಟ ತೊಂದರೆ.

2. ಈ ರೀತಿ  ಶ್ವಾಸನಳಿಕೆ ಅಲರ್ಜಿಯಿಂದ ಬರುತ್ತದೆ. ಈ ಎರಡು ವಿಧದಲ್ಲಿಯೂ ಉಸಿರಾಟಕ್ಕೆ ತೊಂದರೆಯಾಗುತ್ತದೆ.

 ಅಸ್ತಮ ಹೇಗೆ ಉಂಟಾಗುತ್ತದೆ   :

         ಇದನ್ನು ತಿಳಿಯಲು ನಾವು ನಮ್ಮ  ಶ್ವಾಸಾಂಗ  ವ್ಯೂಹದ ರಚನೆಯ ಬಗ್ಗೆ ತಿಳಿದಿರಲೇಬೇಕು.

       ಈ  ಶ್ವಾಸಕೋಶವು ಮನುಷ್ಯನ ದೇಹದ ಎದೆಯ ಭಾಗದಲ್ಲಿ ಹೃದಯದ ಎರಡೂ ಕಡೆ ಎರಡು ಶಾಖೆಗಳಾಗಿರುತ್ತದೆ. ಎಡ ಮತ್ತು ಬಲ ಸ್ವಾಶಕೋಶವೆಂದು. ಇದರ ಶಾಖೆಗಳು ತಿರುಗು ಮುರುಗಾದಂತಹ ಮರದ ರೆಂಬೆಯಂತೆ ಇರುತ್ತದೆ. ಹೃದಯದ ಕಡೆಯ ಎಡ ಶ್ವಾಸಕೋಶವು ಬಲಭಾಗಕ್ಕಿಂತ ಸ್ವಲ್ಪ ಕಿರಿದ್ದಾಗಿರುತ್ತದೆ.ಈ ಶ್ವಾಸಕೋಶವನ್ನು ಎರಡು ಪದರಗಳ ತೆಳುವಾದ ಪ್ಲೇಯುರ ದ್ರವವು ನಿಂತು ಶ್ವಾಸಕೋಶಕ್ಕೆ ರಕ್ಷಣೆ ನೀಡುತ್ತದೆ. ಇದು ಪ್ರತಿದಿನ 11,000 ಘನ ಲೀಟರ್ ಗಾಳಿಯನ್ನು ಒಳಕ್ಕೆ ತೆಗೆದುಕೊಂಡು ಅಷ್ಟೇ ಪ್ರಮಾಣದ ಗಾಳಿಯನ್ನು ಹೊರಕ್ಕೆ ಬಿಡುತ್ತದೆ. ನಾವು ಉಸಿರಾಡುವಾಗ ಶುದ್ಧ ಗಾಳಿಯನ್ನು ದೇಹದ ಒಳಗೆ ಸೆಳೆದುಕೊಂಡು ಅಶುದ್ಧವಾದ ಗಾಳಿಯನ್ನು ಹೊರಕ್ಕೆ ಬಿಡುವುದು. ರಕ್ತದಲ್ಲಿರುವ ಇಂಗಾಲದ ಡೈಯಾಕ್ಸೈಡ್ ಅನ್ನು ಹೊರಕ್ಕೆ ಬಿಟ್ಟು ಶುದ್ಧವಾದ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡು ಅದನ್ನು ರಕ್ತಕ್ಕೆ ಸೇರಿಸುತ್ತದೆ. ಇದರ ಶಾಖೆಗಳಿಗೆ ಗಾಳಿಯನ್ನು ಕೊಂಡೊಯ್ಯುವ ಎರಡು ನಾಳಗಿವೆ. ಅದನ್ನು ಬ್ರಾಂಕಸ್ ನಾಳಗಳೆಂದು ಕರೆಯುತ್ತಾರೆ. ಈ ನಾಳಗಳೇ ಮುಂದೆ ಅನೇಕ ಉಪಶಾಖೆಗಳಾಗಿರುತ್ತವೆ. ಇದನ್ನು ಬ್ಯಾಂಕಿಯೋಲ್ ಗಳೆಂದು ಕರೆಯುತ್ತಾರೆ.

     ಇವುಗಳ ತುದಿಯಲ್ಲಿ ವಾಯುಕೋಶಗಳಿರುತ್ತವೆ. ಅದನ್ನು ನಾವು ಆಲ್ವವೋಲಿ ಎಂದು ಕರೆಯುತ್ತೇವೆ.ನಾವು ಉಸಿರಾಟದಲ್ಲಿ ತೆಗೆದುಕೊಳ್ಳುವ ಗಾಳಿಯು ಶ್ವಾಸಕೋಶಕ್ಕೆ ಸೇರಿ ಅಲ್ಲಿಂದ ಸಣ್ಣ ನಾಳ ಮುಖಾಂತರ ಈ ಅಲ್ಪವೋಲಿ ತಲುಪಿ, ಅಲ್ಲಿ ಸಣ್ಣ ಗೋಡೆ ಮೂಲಕ ಅತಿ ಸೂಕ್ಷ್ಮ  ನರಗಳಿಗೆ ತಲುಪುತ್ತದೆ. ಈ ಕೆಪಿಲ್ಲರಿಸ್ ನಲಿ  ಸೂಕ್ಷ್ಮ ಗಾಳಿಯನ್ನು ಸೂಸುವ ಸೂಕ್ಷ್ಮ ಗ್ರಂಥಿಗಳ  ಪದರಗಳು ಇರುತ್ತವೆ.ಈ ಗ್ರಂಥಿಗಳು ಎರಡು ಕೆಲಸ ಮಾಡುತ್ತವೆ. ರಕ್ತದಲ್ಲಿರುವ ಇಂಗಾಲದ ಡೈಯಾಕ್ಸೈಡ್ ನ್ನು ಬೇರ್ಪಡಿಸಿ ಅದನ್ನು ಹೊರಹಾಕಿ ಶುದ್ಧ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಂಡ ರಕ್ತಕ್ಕೆ ನೀಡುತ್ತದೆ.

      ಆ ಆಮ್ಲಜನಕೀಕೃತ ರಕ್ತವು ಪಲಮನರಿ ರಕ್ತನಾಳದ ಮೂಲಕ ಸಾಗಿ ಹೃದಯದ ಎಡಭಾಗ ತಲುಪುತ್ತದೆ. ಹೃದಯದ ಪಂಪ್ ಮಾಡಿದಾಗ ಅಲ್ಲಿಂದ ರಕ್ತವು ದೇಹದ ಸಮಸ್ತ ಅಂಗಗಳಿಗೆ ತಲುಪಿ, ಆ ಅಂಗಗಳ ಜೀವಕೋಶಗಳು ಕೆಲಸ ಮಾಡಲು ಆಮ್ಲಜನಕ,ಶಕ್ತಿಯುತವಾಗಿರಲು ಪ್ರೋಟೀನ್ ಯುಕ್ತ ಆಹಾರವನ್ನು ನೀಡಿ, ಅದರಲ್ಲಿರುವ ಇಂಗಾಲದ ಡೈಯಾಕ್ಸೈಡ್ ಮತ್ತು ಅನೇಕ ಕಲ್ಮಶ ಹೊತ್ತು ಮತ್ತೆ ಬಲಭಾಗದ ಹೃದಯ ತಲುಪುತ್ತದೆ. ಮತ್ತೆ ಹೃದಯ ಪಂಪ್ ಮಾಡಿದ್ದಾಗ ಹೃದಯದ ಬಲಹೃತ್ಕತ್ತಿಕರಣದಿಂದರ್ಣದಿಂದ ಮತ್ತೆ ಅಶುದ್ಧ ರಕ್ತ ಶ್ವಾಸಕೋಶವನ್ನು ತಲುಪುತ್ತದೆ ಇದು ಶ್ವಾಸಕೋಶದ ಕಾರ್ಯ.