1.ಕಾರ್ಟಿಕೋಸ್ಟಿರಾಯ್ಡ್ಸ್:- ಇವು ಉಬ್ಬಸದ ನಿವಾರಣೆಯಲ್ಲಿ ಬಹಳ ಸಮರ್ತವಾಗಿ ಮತ್ತು ಶೀಘ್ರಾವಾಗಿ ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ಇನ್ಹಲೇಷನ್ನಾಗಿ ಬಳಸುತ್ತಾರೆ. ಇವುಗಳನ್ನು ಗುಳಿಗೆ ಮತ್ತು ಚುಚ್ಚುಮದ್ದು ರೂಪದಲ್ಲಲ್ಲದೆ ಇನ್ಹಲೇಷನ್ ರೂಪದಲ್ಲಿ ಬಳಸುವುದೇ ಸೂಕ್ತವಾದ ಕ್ರಮ.
ಇನ್ಹಲೇಷನ್ ರೂಪದಲ್ಲಿ ಕಾರ್ಟಿಕೋಸ್ಟಿರಾಯಿಡ್ಸ್ ಬಳಸಿದರೆ ಬಹಳ ಕಡಿಮೆ ಪ್ರಮಾಣದಲ್ಲಿಯೇ ಪರಿಣಾಮ ಬೀರುತ್ತದೆ. ಉಬ್ಬಸದ ಆರಂಭದಲ್ಲಿಯೇ ಕಾರ್ಟಿಕೋಸ್ಟಿರಾಯಿಡ್ಸ್ ಬಳಸಿದ್ದಾದರೆ ಉಬ್ಬಸ ಬೆಳವಣಿಗೆಯಾಗುವುದಿಲ್ಲ. ಲಂಗ್ಸ್ ಫಂಕ್ಷನ್ ಗೆ ತೊಂದರೆಯಾಗುವುದಿಲ್ಲ. ಶ್ವಾಸನಾಳಗಳು ಆರೋಗ್ಯವಾಗಿರುತ್ತದೆ.
ಚಿಕ್ಕ ಮಕ್ಕಳಿಗೆ ಕಾರ್ಟಿಕೋಸ್ಟಿರಾಯಿಡ್ಸ್ ಸ್ಪೇಸ(ರಸrs) ಮೂಲಕ ಕೊಡಬೇಕು. ಸ್ಟಿರಾಯಿಡ್ಸ್ ಇನ್ಹಲೇಷನ್ಸ್ ಬಳಸಿದ ನಂತರ ನೀರಿನಿಂದ ಬಾಯಿಯನ್ನು ತೊಳೆದು ಅಚೆ ಉಗಿಯುವುದು ಸರಿಯಾದ ಕ್ರಮ. ಇದರಿಂದ ಬಾಯಿಗೆ ಸೋಂಕುಂಟಾಗುವ ಸಂಭವವಿರುವುದಿಲ್ಲ.
2. ಕ್ರೋಮೋಲಿನ್ ಸೋಡಿಯಂ ಮತ್ತು ನೀಡೋಕ್ರೋಮಿಲ್ :- ಮೈಲ್ಡ್ ಮತ್ತು ಮಾಡರೇಟ್ ಉಬ್ಬಸವಿದ್ದಾಗ ಈ ಔಷಧಿಗಳನ್ನು ಬಳಸಬಹುದು. ಮಕ್ಕಳಿಗೆ ಕ್ರಾನಿಕ್ ಒಬ್ಬಸವಿದ್ದಾಗ ಇವುಗಳನ್ನು ಬಳಸುತ್ತಾರೆ.
3. ಲಾಂಗ್ ಆಕ್ಟಿಂಗ್ ಬೀಟಾ-2 ಎಗೇನಿಸ್ಟ್ (ಸಾಲ್ಮಿಟ್ರಾಲ್) :- ಈ ಔಷಧಿಗಳನ್ನು ಕಾರ್ಟಿಕೋಸ್ಟಿರಾಯಿಡ್ಸ್ ಜೊತೆ ಬಳಸುತ್ತಾರೆ. ಸಾಲ್ಮಿಟ್ರಾಲ್ ನಿಂದ ರಾತ್ರಿ ವೇಳೆಯಲ್ಲಿ ಉಬ್ಬಸ ಹೆಚ್ಚಾಗುವ ಸಂಭವಇರುವುದಿಲ್ಲ. ನಿದ್ರೆಗೆ ಭಂಗ ಬರುವುದಿಲ್ಲ, ಓಡಿದರು, ವ್ಯಾಯಾಮ ಮಾಡಿದರು, ಒಬ್ಬಸ ಕಾಣುವುದಿಲ್ಲ. ಸಾಲ್ಮಿಟ್ರಾಲ್ ಒಂದನ್ನೇ ಬಳಸಿದರೆ ಅಂತಹ ಪ್ರಯೋಜನವಿರುವುದಿ.ಲ್ಲ ಕಾರ್ಟಿಕೋಸ್ಟಿರಾಯಿಡ್ ಜೊತೆ ಬಳಿಸಿದಾಗ ಪರಿಣಾಮಕಾರಿಯಾಗಿರುತ್ತದೆ.
4. ಮೈಥಲ್ ಜಾಂತಿನ್ಸ್ :- ಈ ಗುಂಪಿಗೆ ಸೇರಿದ ಥಿಯೋಫಿಲಿನ್ ಔಷಧಿ ಮೈಲ್ಡ್ ಟು ಮಾಡರೇಟ್ ಉಬ್ಬಸದ ಸಂದರ್ಭದಲ್ಲಿ ಕೆಲಸ ಮಾಡುತ್ತದೆ. ರಾತ್ರಿ ಹೊತ್ತು ಬರುವ ಉಬ್ಬಸದ ಸಮಸ್ಯೆ ನಿವಾರಿಸುತ್ತದೆ.
5 ಲುಕೋ ಟ್ರೈನ್ ಮಾಡಿಫೈಲ್ಸ್ :- ಈ ಔಷಧಿಗಳನ್ನು ಕಾರ್ಟಿಕೋಸ್ಥಿರೈಡ್ಸ್, ಕ್ರೋಮೊಲಿನ್ ಬದಲಿಗೆ ಬಳಸುತ್ತಾರೆ. ಮೈಲ್ಡ್ ಅಸ್ತಮಾದಲ್ಲಿ ಕೆಲಸ ಮಾಡುತ್ತವೆ.
ಉಬ್ಬಸದ ಹತೋಟಿಗೆ ತಕ್ಷಣದ ಔಷಧಿಗಳು:-
1. ಷಾರ್ಟ್ ಆಕ್ಟಿಂಗ್ ಬೀಟಾ-2 ಎಗನಿಸ್ಟ್ :- ಈ ಗುಂಪಿಗೆ ಸೇರಿದ ಔಷಧಿಗಳು ಕಾಣಿಸಿಕೊಂಡ ತಕ್ಷಣ ಬಳಸಿದರೆ ತಕ್ಷಣ ಉಬ್ಬಸದಿಂದ ಬಿಡುಗಡೆ ಹೊಂದಬಹುದು. ಈ ರೀತಿ ಔಷಧಿಗಳನ್ನು ಬಹುಶೀಘ್ರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದನ್ನು ಬಳಸಿದಾಗ ಸ್ವಲ್ಪಮಟ್ಟಿಗೆ ಕೈಗಳ ನಡುಕ, ನಾಡಿಬಡಿತ ಜಾಸ್ತಿಯಾಗುವುದು ಮತ್ತು ಗಾಬರಿಯಾಗೋದು ಕಾಣಿಸಿಕೊಳ್ಳುತ್ತದೆ. ಷಾರ್ಟ್ ಆಕ್ಟಿಂಗ್ ಬೀಟಾ-2 ಗುಂಪಿನ ಔಷಧಿಗಳಲ್ಲಿ ಸಾಲ್ ಬುಟಮಾಲ್, ಟೆರ್ ಬುಟಲಿನ್ ಮುಖ್ಯವಾದವುಗಳು.
2. ಆಂಟಿ ಕೊಲೆನಿರ್ಜಿಕ್ಸ್ :- ಈ ಗುಂಪಿಗೆ ಸೇರಿದ ಶೀಘ್ರ ಚೇತರಿಕೆ ಔಷಧಿಗಳಲ್ಲಿ ಇಪ್ರಾಟ್ರೊಪಿಯಂ ಬ್ರೋಮೈಡ್ ಮುಖ್ಯವಾದದ್ದು. ನೆಬ್ಯುಲೈಸರ್ ಮೂಲಕ ಈ ಔಷಧಿಗಳನ್ನು ಕೊಡುತ್ತಾರೆ. ಉಬ್ಬಸ ತೀವ್ರವಿದ್ದಾಗ ಈ ಔಷಧಿ ಬಳಸಿದರೆ ಶೀಘ್ರ ಚೇತರಿಕೆ ಕಂಡು ಬರುತ್ತದೆ.
ಉಬ್ಬಸದ ಚಿಕಿತ್ಸೆಯಲ್ಲಿ ಪ್ರಿವೆಂಟರ(rs) ಮತ್ತು ರಿಲಿವರ್ಸ್(rs) :-
ಉಬ್ಬಸ ಹೆಚ್ಚಾಗಿದ್ದಾಗ ಸಾಲ್ ಬುಟಮಾಲ್ ಇಲ್ಲವೇ, ಟೆರ್ಬುಲೀನ್ ಔಷಧಿಗಳನ್ನು ಇನ್ ಹೇಲರ್ ರೂಪದಲ್ಲಿ ಕೊಡುತ್ತಾರೆ. ಇದನ್ನು ರಿಲಿವರ್ಸ್ ಎನ್ನುತ್ತಾರೆ.
ಔಷಧಿಗಳನ್ನು ಇನ್ಹಲೇಶನ್ ರೂಪದಲ್ಲಿ ದಿನಕ್ಕೆ ಎರಡು ಬಾರಿ ಕೊಡುತ್ತ, ರೋಗದ ತೀವ್ರತೆ ಇಲ್ಲದಂತೆ ಮಾಡುತ್ತಾರೆ.
ಪ್ರಿವೆಂಡರ್ಸ(rs) ಸಂಶಯಗಳನ್ನು ಕಾರ್ಟಿಕೋಸ್ಥಿರೈಟ್ಸ್, ಸಾಲ್ಮಿಟ್ರಾಲ್, ಮುಖ್ಯವಾದಗಳು. ಉಬ್ಬಸವಿರಲಿ, ಇಲ್ಲದಿರಲಿ, ಇವುಗಳನ್ನ ಪ್ರತಿದಿನ ಬಳಸಿದರೆ ಉಬ್ಬಸದ ಸಮಸ್ಯೆ ಇರುವುದಿಲ್ಲ.
ಇವನ್ನು ಬಳಸುತ್ತಿದ್ದರು ಕೆಲವು ಸಂದರ್ಭಗಳಲ್ಲಿ ಉಬ್ಬಸದ ಸಮಸ್ಯೆ ಕಾಣಿಸಿದರೆ ರಿಲೀವರ್ಸ್ ಬಳಸಬೇಕು.
ಅಸ್ತಮಾ ಇರುವ ರೋಗಿ ಎಡಬಿಡದೆ ಪ್ರಿವೆಂಟರ್ಸ(rs) ಬಳಸುವುದು ಅಗತ್ಯವಾದಾಗ ರಿಲಿವರ್ಸ್ ಬಳಸುವುದು, ಸರಿಯಾದ ಕ್ರಮ. ಚಿಕ್ಕ ಮಕ್ಕಳಿಗೆ ಪ್ರಿವೆಂಟಸ್ ಯಾವಾಗ ಬಳಸಬೇಕು, ರಿಲಿವರ್ಸ್ ಯಾವಾಗಬಳಸಬೇಕು. ಎಂಬ ವಿಷಯ ತಂದೆ ತಾಯಿಯರಿಗೆ ತಿಳುವಳಿಕೆ ಇರಬೇಕು.
ಉಬ್ಬಸದ ಮಗುವಿನ ಬಗ್ಗೆವಹಿಸಬೇಕಾದ ಎಚ್ಚರಿಕೆ:-
ಕುಡಿಯುವ ನೀರು :- ಉಬ್ಬಸದಿಂದ ಒದ್ದಾಡುತ್ತಿರುವ ಮಕ್ಕಳಿಗಾಗಲಿ, ದೊಡ್ಡವರಿಗಾಗಲಿ, ನೀರುಅಗತ್ಯ. ಜಾಸ್ತಿಯಾಗುತ್ತದೆ. ಉಬ್ಬಸವಿರುವಾಗ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಕುಡಿಯಲು ಹೆಚ್ಚು ನೀರುಕೊಡಬೇಕು. ನೀರು ಕುಡಿಯಲಾಗದಿದ್ದರೆ, ನರದ ಮೂಲಕ ಸೈಲೆನ್ಸ್ ಪೂರೈಸಬೇಕು.
ರೋಗನಿರೋಧಕ ಔಷಧಿಗಳು:-
ಶ್ವಾಸಕೋಶದ ರೋಗಗಳಿದ್ದಾಗ ಉಬ್ಬಸ ಮತ್ತಷ್ಟು ತೀವ್ರವಾಗುತ್ತದೆ. ಸೋಂಕಿನಿಂದ ಉಬ್ಬಸ ಕಡಿಮೆಯಾಗುವುದಿಲ್ಲ. ಶ್ವಾಸಕೋಶದ ಸೋಂಕು ಉಂಟಾಗಿದ್ದರೆ, ರೋಗ ನಿರೋಧಕ ಔಷಧಗಳನ್ನಬಳಸಬೇಕು. ಸಾಮಾನ್ಯವಾಗಿ ಉಬ್ಬಸದ ತೊಂದರೆಗೀಡಾಗಿದ್ದಾಗ ಶ್ವಾಸಕೋಶಗಳಲ್ಲಿ ವೈರಸ್, ಬ್ಯಾಕ್ಟೀರಿಯ, ಮೈಕೋಪ್ಲಾಸ್ಮಾ, ಸೋಂಕುಗಳು ಇರುತ್ತದೆ. ಉಬ್ಬಸದ ಚಿಕಿತ್ಸೆಯೊಂದಿಗೆ ಇವುಗಳಲ್ಲಿ ಚಿಕಿತ್ಸೆ ಮಾಡಬೇಕು.
1. ಕೆಮ್ಮಿಗೆ ಔಷಧಿ :- ಉಬ್ಬಸದ ರೋಗಿಗೆ ಕೆಮ್ಮಿರೋದು ಸಹಜ. ಕೆಮ್ಮಿಗಾಗಿಯೇ ಪ್ರತ್ಯೇಕವಾದ ಔಷಧಿ ಕೊಡುವುದರಲ್ಲಿ ಯಾವ ಪ್ರಯೋಜನವು ಇರುವುದಿಲ್ಲ. ಉಬ್ಬಸಕ್ಕೆ ಬಳಸುವ ಔಷಧಿಗಳಿಂದಲೇ ಕೆಮ್ಮು ಕಡಿಮೆಯಾಗುತ್ತದೆ.
2.ಆಕ್ಸಿಜನ್ ಥೆರಪಿ :- ಉಬ್ಬಸದಿಂದ ಕೆಲವರ ಸ್ಥಿತಿ ಚಿಂತಾ ಜನಕವಾಗುತ್ತದೆ. ಇವರಿಗೆ ಆಮ್ಲಜನಕ ಪೂರೈಸಬೇಕಾಗುತ್ತದೆ.
3. ವಾತಾಯನ ವ್ಯವಸ್ಥೆ :- ಕೆಲ ಮಕ್ಕಳ ಪರಿಸ್ಥಿತಿ ಗಂಭೀರವಾಗುತ್ತದೆ. ಇಂತಹವರನ್ನು ಸೂಕ್ಷ್ಮ ನಿಘ ಘಟಕದಲ್ಲಿರಿಸಿ ಅಗತ್ಯವಾದರೆ ವಾತಾಯನ ವ್ಯವಸ್ಥೆ ಕಲ್ಪಿಸಬೇಕು.
ಇನ್ ಹೇಲರ್ ಬಳಸಲು ಶಿಕ್ಷಣ:
ನಾಲ್ಕು ವರ್ಷದ ಮಕ್ಕಳಿಗೆ ಇನ್ ಹೇಲರ್ ಥೆರಪಿ, ಇನ್ ಹೇಲರ್ ಮೂಲಕ ಕೊಡಬಹುದು. ಇಂತಹ ಮಕ್ಕಳಿಗೆ ಇನ್ ಹೇಲರ್ ಬಳಸುವ ಕ್ರಮವನ್ನು ಹೇಳಿಕೊಡಬೇಕು. ಎರಡು-ಮೂರು ವರ್ಷದ ಮಕ್ಕಳಿಗೆ ನೆಬ್ಯುಲೈಜರ್ ಮೂಲಕ ಇನ್ ಹೇಷನ್ ಕೊಡಬೇಕು.